ಭಾಗ್ಯಳ ಆ ಚಿಕ್ಕ ಚಿಕ್ಕ ಕನಸು ನನಸು ಮಾಡಲು ಆತ ಎಂಟ್ರಿ ಕೊಡ್ತಾನಾ? ಇದೇನಿದು ಟ್ವಿಸ್ಟ್​?

By Suchethana D  |  First Published Nov 6, 2024, 10:41 PM IST

ತಾಂಡವ್​ ತನ್ನ ಪತ್ನಿಯನ್ನು ಒಪ್ಪಿಕೊಳ್ಳುವ ಯಾವುದೇ ಲಕ್ಷಣಗಳು ಇಲ್ಲದ ನಡುವೆಯೇ, ಭಾಗ್ಯಳ ಆ ಚಿಕ್ಕ ಚಿಕ್ಕ ಕನಸು ನನಸು ಮಾಡಲು ಆತ ಎಂಟ್ರಿ ಕೊಡ್ತಾನಾ? ಇದೇನಿದು ಟ್ವಿಸ್ಟ್​?
 


ಭಾಗ್ಯಳಿಗೆ ಕೊನೆಗೂ ಸತ್ಯ ತಿಳಿಯುವ ಕಾಲ ಕೂಡಿ ಬಂದಿದೆ. ಮನೆಯವರು ತಾಂಡವ್​ ಮತ್ತು ಶ್ರೇಷ್ಠಾಳ ಸಂಬಂಧವನ್ನು ಗುಟ್ಟಾಗಿ ಇಡಲು ಏನೆಲ್ಲಾ ಸರ್ಕಸ್​ ಮಾಡುತ್ತಿದ್ದರೂ ಇದೀಗ ಸತ್ಯ ರಿವೀಲ್​ ಆಗಲೇ ಬೇಕು. ಒಂದು ತಿಂಗಳಿನಲ್ಲಿ ತಾಂಡವ್​ಗೆ ಬೇಕಾದ ಹಾಗೆ ಸೊಸೆಯನ್ನು ಬದಲಿಸುವುದಾಗಿ ಹೇಳಿದ ಕುಸುಮಾಳ ಕನಸು ನನಸಾಗುವ ಯಾವುದೇ ಲಕ್ಷಣಗಳು ಇಲ್ಲ. ಭಾಗ್ಯ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಳು, ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಳು, ಕಾರು ಕಲಿತಳು, ಡಾನ್ಸ್​ ಮಾಡಿದಳು, ಚೆನ್ನಾಗಿ ಡ್ರೆಸ್​ ಮಾಡಿಕೊಂಡಲು... ಹೂಂ ಹೂಂ... ಯಾವುದೂ ತಾಂಡವ್​ ಮನಸ್ಸನ್ನು ಬದಲಾಯಿಸಲೇ ಇಲ್ಲ. ಕೊನೆಗೆ ಭಾಗ್ಯಳನ್ನು ಇನ್​ಸಲ್ಟ್​ ಮಾಡಲು ಶ್ರೇಷ್ಠಾ ಡಾನ್ಸ್​ ಟೀಚರ್​ ಮೊರೆ ಹೋದಳು. ಆರಂಭದಲ್ಲಿ ಭಾಗ್ಯಳನ್ನು ಸಾಕಷ್ಟು ಕೆಟ್ಟ ಪದಗಳಿಂದ ನಿಂದಿಸಿದಳು ಟೀಚರ್​. ಕೊನೆಗೆ ಅತ್ತೆ ಕುಸುಮಾ ಬಿಡಬೇಕಲ್ಲ. ಆ ಟೀಚರ್​ ಅನ್ನು ಕರೆಸಿ, ಭಾಗ್ಯಳಿಂದ ಭರತನಾಟ್ಯ ಮಾಡಿಸಿ, ಟೀಚರ್​ ಕ್ಷಮೆ ಕೇಳುವ ಹಾಗೆ ಮಾಡಿದಳು. ಇದರಿಂದ ತಾಂಡವ್​ ಮತ್ತು ಶ್ರೇಷ್ಠಾಗೆ ಶಾಕ್​ ಆಯಿತು. ಆದರೆ ಇದ್ದಕ್ಕಿಂತೆಯೇ ತಾಂಡವ್​ ಬದಲಾಗಿ ಬಿಟ್ಟರೂ ಎಲ್ಲರೂ ನಂಬಿರೋದು ಮಾತ್ರ ಹಾಸ್ಯಾಸ್ಪದ ಎನ್ನಿಸುವ ಮಧ್ಯೆಯೇ ಹೇಗಾದ್ರೂ ಮಾಡಿ ಸೊಸೆಯ ಜೀವನ ಸರಿ ಮಾಡುವ ಆಸೆ ಕುಸುಮಾಗೆ! 

ಆದರೆ ಈಗ ಆಗಿದ್ದೇ ಬೇರೆ. ಮತ್ತೆ ಫಕೀರನ ಎಂಟ್ರಿ ಆಗಿದೆ. ಆತ ಈಗ ಎಲ್ಲವೂ ಗೊತ್ತಾಗುವ ಕಾಲ ಬಂದಿದೆ ಎಂದು ಭವಿಷ್ಯ ನುಡಿದಿದ್ದಾನೆ. ಅಲ್ಲಿಗೆ ಭಾಗ್ಯಳಿಗೆ ಎಲ್ಲಾ ಸತ್ಯ ಗೊತ್ತಾಗುವ ಹಾಗಿದೆ. ಆದರೆ ಬರುವಾಗ ಎಲ್ಲವೂ ಬದಲಾಗುತ್ತದೆ ಎಂದಿದ್ದಾನೆ ಫಕೀರ. ಅದೇ ಇನ್ನೊಂದೆಡೆ, ತನ್ನ ಚಿಕ್ಕ ಚಿಕ್ಕ ಆಸೆಗಳನ್ನು ಪೂಜಾಳ ಬಳಿ ಹೇಳಿಕೊಂಡಿದ್ದಾಳೆ ಭಾಗ್ಯ. ಸಾಮಾನ್ಯವಾಗಿ ಚಿಕ್ಕ ಪುಟ್ಟ ಆಸೆಗಳೇ ಬದುಕಿನ ಬಹುದೊಡ್ಡ ವರದಾನ ಎನ್ನುವ ಅದೆಷ್ಟೋ ಮಹಿಳೆಯರು ಇದ್ದಾರೆ. ಪತಿ ತಮ್ಮನ್ನು ಕೇರ್​ ಮಾಡಿದರೆ, ಚಿಕ್ಕ ಪುಟ್ಟ ಆಸೆ ನೆರವೇರಿಸಿದರೆ ಅದರಿಂದಲೇ ತಮ್ಮ ಜೀವನ ಪಾವನ ಆಯಿತು, ಅದೇ ಸುಖ ಸಂಸಾರ ಎಂದುಕೊಳ್ಳುವವರು ಇದ್ದಾರೆ. ಇದನ್ನೇ ಭಾಗ್ಯ ಹೇಳುತ್ತಿದ್ದರೆ, ಭಾಗ್ಯಳ ಜೀವನದಲ್ಲಿ ಖಂಡಿತವಾಗಿಯೂ ಆ ಆಸೆ ಈಡೇರಿಸುವ ಇನ್ನೊಬ್ಬನ ಎಂಟ್ರಿ ಆಗಲಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಅನುಪಮ ಸೀರಿಯಲ್​ನ ಹೋಲಿಕೆ ಮಾಡುತ್ತಿದ್ದಾರೆ. ಭಾಗ್ಯಳಿಗೂ ಇನ್ನೊಬ್ಬ ಜೀವನ ಸಂಗಾತಿ ಕೊಡಿಸಿ ಎನ್ನುತ್ತಿದ್ದಾರೆ. 

Tap to resize

Latest Videos

undefined

ಯುವಕರಿಗೆ ಬಂಪರ್‌: ವಿದ್ಯಾಲಕ್ಷ್ಮಿ ಯೋಜನೆಗೆ ಕೇಂದ್ರದ ಅಸ್ತು- 10 ಲಕ್ಷದವರೆಗೆ ಸಾಲ; ಡಿಟೇಲ್ಸ್​ ಇಲ್ಲಿದೆ

ಏಕೆಂದ್ರೆ,  ತಾಂಡವ್​ ಶ್ರೇಷ್ಠಾಳ ಜೊತೆ ಹನಿಮೂನ್​ಗೆ ಹೊರಟಿದ್ದಾನೆ. ತನ್ನ ಸಂಬಳದಲ್ಲಿ ಭಾಗ್ಯ ಮನೆಗೆ ಹೊಸ ಫ್ರಿಜ್​ ತಂದಿದ್ದಳು. ಆ ಫ್ರಿಜ್​ ಖರೀದಿ ಸಂದರ್ಭದಲ್ಲಿ ಇಟ್ಟ ಲಾಟರಿ ಭಾಗ್ಯಳಿಗೇ ಹೊಡೆದಿದೆ. ದಂಪತಿ ಪ್ರವಾಸಕ್ಕೆ ಹೋಗುವ ಒಂದು ಟಿಕೆಟ್​ ಅವಳಿಗೆ ಸಿಕ್ಕಿದೆ. ಮನೆಯವರೆಲ್ಲರೂ ಸೇರಿ ಭಾಗ್ಯ ಮತ್ತು ತಾಂಡವ್​ನನ್ನು ಪ್ರಯಾಣಕ್ಕೆ ಕಳುಹಿಸುವ ಯೋಚನೆಯಲ್ಲಿ ಇದ್ದಾರೆ. ತಾಂಡವ್​ನ ಬುದ್ಧಿ ಗೊತ್ತಿದ್ದರೂ ತಾಂಡವ್​, ಭಾಗ್ಯಳನ್ನು ಒಪ್ಪಿಕೊಳ್ತಾನೆ ಎನ್ನುವ ಹುಚ್ಚು ಕಲ್ಪನೆ ಕುಸುಮಳದ್ದು. ಇದೇ ಕಾರಣಕ್ಕೆ ಇಬ್ಬರೂ ಟ್ರಿಪ್​ಗೆ ಹೋಗುವಂತೆ ಹೇಳಿದ್ದಾಳೆ. ಆ ಟಿಕೆಟ್​ ಪಡೆದುಕೊಂಡಿರೋ ತಾಂಡವ್​, ಭಾಗ್ಯಳ ಜೊತೆ ಹೋಗಲು ಸುತರಾಂ ಒಪ್ಪಲಿಲ್ಲ. ಅವಳನ್ನು ಮನಸೋ ಇಚ್ಛೆ ಮಾಮೂಲಿನಂತೆ ಬೈದು, ಈ ಟಿಕೆಟ್​ ಅನ್ನು ಬೇರೆ ಯಾರಿಗಾದ್ರೂ ಕೊಡುವಂತೆ ಹೇಳುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾನೆ. ಆಮೇಲೆ ಶ್ರೇಷ್ಠಾಳ ಜೊತೆ ಹನಿಮೂನ್​ಗೆ ಪ್ಲ್ಯಾನ್​ ಮಾಡಿದ್ದಾನೆ. 

ಇತ್ತ ಹೋಟೆಲ್​ನಲ್ಲಿ, ಓನರ್​ ಬಂದು ಭಾಗ್ಯಳಿಗೆ ನಮಗೆ ಒಂದು ಒಳ್ಳೆಯ ಆಫರ್​ ಬಂದಿದೆ. ಟೂರ್​ ಪ್ಯಾಕೇಜ್​ನವರಿಗೆ ನಮ್ಮದೇ ಹೋಟೆಲ್​ ಅಡುಗೆ, ನೀವೇ ಹೋಗಬೇಕು ಎಂದಿದ್ದಾನೆ. ಆಗ ಮಾತುಮಾತಿನಲ್ಲಿ ಭಾಗ್ಯಳಿಗೆ ಇದು ತನಗೆ ಸಿಕ್ಕಿರುವ ಲಾಟರಿ ಟಿಕೆಟ್​ ಟೂರ್​ ಪ್ಯಾಕೇಜ್​ ಎನ್ನುವುದು ತಿಳಿದಿದೆ. ಆ ಅದೃಷ್ಟ ತನಗಂತೂ ಸಿಕ್ಕಿಲ್ಲ.  ಆದರೆ ತನಗೆ ಸಿಕ್ಕಿರುವ ಲಾಟರಿಯಲ್ಲಿ ಬೇರೆ ಯಾರೋ ದಂಪತಿ ಹೋಗುತ್ತಿದ್ದಾರಲ್ಲ, ಅವರನ್ನು ನೋಡುವ ಭಾಗ್ಯ ಆದರೂ ತನಗೆ ಸಿಗಲಿ ಎನ್ನುವ ಕಾರಣಕ್ಕೆ ಅಲ್ಲಿ ತಾನೇ ಹೋಗುವುದಾಗಿ ಹೇಳಿದ್ದಾಳೆ. ಆದರೆ ಇಲ್ಲಿ ಇರುವುದೇ ಟ್ವಿಸ್ಟ್​. ಅಷ್ಟಕ್ಕೂ ಭಾಗ್ಯಳಿಗೆ ಸಿಕ್ಕಿರುವ ಟಿಕೆಟ್​ ಪಡೆದು ಲವರ್​ ಜೊತೆ ಹನಿಮೂನ್​ ಪ್ಲ್ಯಾನ್​ ಮಾಡಿದ್ದಾನೆ ಭಾಗ್ಯಳಾ ಪತಿದೇವ! ಹೌದು. ಆ ಟಿಕೆಟ್​ ಅನ್ನು ಬೇರೆ ಯಾರಿಗೂ ಕೊಡದೇ ಶ್ರೇಷ್ಠಾಳ ಜೊತೆ ತಾನೇ ಗಂಡ-ಹೆಂಡತಿ ರೂಪದಲ್ಲಿ ಪ್ರವಾಸಕ್ಕೆ ಹೋಗುವ ಪ್ಲ್ಯಾನ್​ ಮಾಡಿದ್ದಾನೆ. ಮುಂದೇನಾಗುತ್ತೆ ಎನ್ನುವುದು ಈಗಿರುವ ಕುತೂಹಲ.

ಎಲ್ಲಿಂದಲೋ ಬಂದಳು, ಮದುಮಕ್ಕಳಿಗೆ ಆಶೀರ್ವದಿಸಿ ಮಾಯವಾದಳು! ಬೆಂಗಳೂರಿನ ಕುತೂಹಲದ ಘಟನೆ ವಿಡಿಯೋ ವೈರಲ್‌

click me!