Nov 6, 2024, 11:45 PM IST
ಬೆಂಗಳೂರು (ನ.6): ರಾಜ್ಯದ ಇತಿಹಾಸದಲ್ಲಿ ಲೋಕಾಯುಕ್ತ ಹೊಸ ದಾಖಲೆ ಬರೆದಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ವಿಚಾರಣೆ ನಡೆಸಿದೆ. ಒಟ್ಟು 2 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಕೇಳಿದ 20 ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರ ನೀಡಿದ್ದಾರೆ.
ಇನ್ನೊಂದೆಡೆ, ಮುಡಾ ಹಗರಣದಲ್ಲಿ ಕಾಂಗ್ರೆಸ್-ಬಿಜೆಪಿ ತನಿಖೆ ರಾಜಕೀಯ ಶುರುವಾಗಿದೆ. ವಿರೋಧಿಗಳ ಷಡ್ಯಂತ್ರ ಎಂದು ಸಿದ್ದರಾಮಯ್ಯ ಕೆರಳಿದ್ದಾರೆ. ನಿಮ್ಮದು ಮ್ಯಾಚ್ ಫಿಕ್ಸಿಂಗ್ ಎಂದು ವಿಪಕ್ಷಗಳು ರಣಾಕ್ರೋಶ ಮಾಡಿವೆ.
ಇನ್ನು ಚನ್ನಪಟ್ಟಣ ಅಖಾಡದಲ್ಲಿ ಸಿಎಂ, ಮಾಜಿ ಪ್ರಧಾನಿ ಮತಬೇಟೆ ಶುರು ಮಾಡಿದ್ದಾರೆ. ನಿಖಿಲ್ ಕಣ್ಣೀರು ಪ್ರಸ್ತಾಪಿಸಿ ಸಿದ್ದರಾಮಯ್ಯ ವಾಗ್ಬಾಣ ಹೂಡಿದರೆ, ಮೊಮ್ಮಗನಿಗಾಗಿ ಅಲ್ಲ.. ರೈತರಿಗಾಗಿ ಬಂದೆ ಎಂದು ದೇವೇಗೌಡರು ಹೇಳಿದ್ದಾರೆ.