ಎಲ್ಲಿಂದಲೋ ಬಂದಳು, ಮದುಮಕ್ಕಳಿಗೆ ಆಶೀರ್ವದಿಸಿ ಮಾಯವಾದಳು! ಬೆಂಗಳೂರಿನ ಕುತೂಹಲದ ಘಟನೆ ವಿಡಿಯೋ ವೈರಲ್‌

By Suchethana D  |  First Published Nov 6, 2024, 10:08 PM IST

ಇದ್ಯಾವ ಜನ್ಮದ ಅನುಬಂಧವೋ... ಎಲ್ಲಿಂದಲೋ ಬಂದಳು, ಮದುಮಕ್ಕಳಿಗೆ ಆಶೀರ್ವದಿಸಿ ಮಾಯವಾದಳು! ಬೆಂಗಳೂರಿನ ಕುತೂಹಲದ ಘಟನೆ ವಿಡಿಯೋ ವೈರಲ್‌ ಆಗಿದೆ. 
 


ತಲೆಯನ್ನು ಸೆರಗಿನಿಂದ ಹೊದ್ದುಕೊಂಡಿದ್ದಾಳೆ. ಮುಖಕ್ಕೆ ಮಾಸ್ಕ್‌ ಇದೆ. ಮುಖವಂತೂ ಕಾಣಿಸುವುದೇ ಇಲ್ಲ. ನೋಡಿದರೆ ವೃದ್ಧೆ ಎಂದಷ್ಟೇ ತಿಳಿಯುತ್ತದೆ.  ಬೆಂಗಳೂರಿನಲ್ಲಿ ನಡೆಯುತ್ತಿರುವ ಮದುವೆ ಮನೆಗೆ ನೇರವಾಗಿ ಬಂದಿರೋ ಆಕೆ,  ಅಲ್ಲಿ ಹಾಕಿರುವ ಪರದೆಯ ಎದುರು  ಮದುಮಕ್ಕಳನ್ನು ತದೇಕ ಚಿತ್ತದಿಂದ ನೋಡುತ್ತಿದ್ದಾಳೆ. ಅವರಿಗೆ ಆಶೀರ್ವದಿಸುತ್ತಿದ್ದಾಳೆ. ಮದುಮಗಳಿಗೆ ಏನೇನೋ ಸಲಹೆ ಕೊಡುತ್ತಿದ್ದಾಳೆ. ತನ್ನದೇ ಮಗಳೋ, ಮೊಮ್ಮಗಳೋ ಎನ್ನುವಂತೆ ಆ ವಧುವಿಗೆ ಹಾರೈಸುತ್ತಿದ್ದಾಳೆ. ಅಲ್ಲಿ ಹಾಕಿರುವ ಎಲ್‌ಇಡಿ ಲೆನ್ಸ್‌ನಲ್ಲಿ ಆಕೆ ಸೆರೆಯಾಗಿದ್ದಾಳೆ...

ಮುಂದಿನ ದೃಶ್ಯದಲ್ಲಿ, ಅಲ್ಲಿ ಬಂದ ಮಹಿಳೆಯೊಬ್ಬರು ಆ ವೃದ್ಧೆಯನ್ನು ನೋಡಿ ಭಾವುಕರಾಗಿದ್ದಾರೆ. ಮದುಮಕ್ಕಳನ್ನು ಆಶೀರ್ವದಿಸುವ ಪರಿಗೆ ಮನಸೋತಿದ್ದಾರೆ. ಕೊನೆಗೆ ವೃದ್ಧೆಯ ಬಳಿ ಹೋಗಿ ಮದುಮಕ್ಕಳನ್ನು ಆಶೀರ್ವದಿಸಬೇಕಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ವೃದ್ಧೆ ಖುಷಿಯಿಂದ ಹೌದು ಎಂದಿದ್ದಾರೆ. ಬಳಿಕ, ಅಲ್ಲಿಗೆ ಬಂದ ಮಹಿಳೆ ವೃದ್ಧೆಯನ್ನು ಮದುಮಕ್ಕಳ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಆ ವೃದ್ಧೆ ಅತ್ಯಂತ ಖುಷಿಯಿಂದ ಮದುಮಕ್ಕಳಿಗೆ ಆಶೀರ್ವದಿಸಿ ಅಲ್ಲಿಂದ ಹೊರಟುಹೋಗಿದ್ದಾರೆ. ಮುಖ ಮುಚ್ಚಿಕೊಂಡಿದ್ದರೂ ಆ ವೃದ್ಧೆಯ ಮೊಗದಲ್ಲಿ ಖುಷಿಯ ಮಿಂಚು ಇರುವುದು ಸುಲಭದಲ್ಲಿ ತಿಳಿಯಬಹುದು. 

Tap to resize

Latest Videos

undefined

ಸತ್ತು ಮಲಗಿದ್ರೂ ಕಣ್ಣೀರು ತಡೆಯಲಾಗಲಿಲ್ಲ: ಶೂಟಿಂಗ್​ನಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡ ನಟಿ ಸಂಜನಾ

ಇದರ ವಿಡಿಯೋ ಅನ್ನು ಡಸ್ಕಿಡೈರಿ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಲಾಗಿದೆ. ತಮ್ಮ ಸ್ನೇಹಿತೆಯ ಮದುವೆಯಲ್ಲಿ ಕಂಡುಬಂದಿರುವ ದೃಶ್ಯವಿದು ಎಂದು ಅವರು ಬರೆದುಕೊಂಡಿದ್ದಾರೆ. ಆ ವೃದ್ಧೆಯನ್ನು ನೋಡಿದ ತಮ್ಮ ತಾಯಿ ಅವರ ಬಳಿ ಹೋಗಿ ಮದುಮಕ್ಕಳು ಇರುವಲ್ಲಿಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ. ಆರಂಭದಲ್ಲಿ ಪರದೆಯ ಮೇಲೆ ಮದುಮಕ್ಕಳಿಗೆ ಆ ವೃದ್ಧೆ ಆಶೀರ್ವಾದ ಮಾಡುತ್ತಿದ್ದರು, ಅತ್ತೆ ಮನೆಯಲ್ಲಿ ಹೇಗೆ ಇರಬೇಕು ಎಂದು ಮದುಮಗಳಿಗೆ ಹೇಳುತ್ತಿದ್ದರು. ಕೊನೆಗೆ ತಮ್ಮ ಅಮ್ಮ ಅವರನ್ನು ನೋಡಿ ಮದುಮಕ್ಕಳ ಬಳಿ ಕರೆದುಕೊಂಡು ಹೋದರು ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

ನಿಜಕ್ಕೂ ಆ ಮಹಿಳೆ ಯಾರು? ಇದೆಂಥ ಅದ್ಭುತ. ಯಾವ ಜನ್ಮದ ಋಣಾನುಬಂಧವೋ ಇದು, ನಿಜಕ್ಕೂ ಅವರು ವೃದ್ಧೆಯಲ್ಲ, ದೇವರೇ ಬಂದಿರಬೇಕು ಎಂದೆಲ್ಲಾ ಕಮೆಂಟ್‌ ಮಾಡಲಾಗುತ್ತಿದೆ. ಮುಖವನ್ನೂ ತೋರಿಸದ ಆ ವೃದ್ಧೆ ಯಾರು ಎಂಬುದೇ ಕುತೂಹಲದ ವಿಷಯವಾಗಿದೆ. ಆ ಮದುಮಗಳಿಗೆ ಅದ್ಯಾವ ಜನ್ಮದ ಅನುಬಂಧವೋ ಗೊತ್ತಿಲ್ಲ. ಈ ವಿಡಿಯೋ ನೋಡಿ ಕಣ್ತುಂಬಿ ಬಂತು ಎಂದು ಹಲವರು ಹೇಳುತ್ತಿದ್ದಾರೆ.

ಘಟಾನುಘಟಿ ಪೊಲೀಸರೂ ಕೈಚೆಲ್ಲಿ ಕೂತಿದ್ದ ಕೊಲೆ ಪ್ರಕರಣ ಬೇಧಿಸಿದ ನೊಣಗಳು! ವಿಚಿತ್ರ ಸ್ಟೋರಿ ಇಲ್ಲಿದೆ...

click me!