James ತೆರವು ಮಾಡಬೇಡಿ, ಲಕ್ಷಾಂತರ ಅಭಿಮಾನಿಗಳು ನೋಡಬೇಕಿದೆ: ನಿರ್ದೇಶಕ ಚೇತನ್ ಮನವಿ

Mar 23, 2022, 5:29 PM IST

ಅಪ್ಪು ಅಭಿನಯದ 'ಜೇಮ್ಸ್' (James) ರಾಜ್ಯಾದ್ಯಂದ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಅಪ್ಪುವನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಚಿತ್ರವನ್ನು ಶ್ಲಾಘಿಸುತ್ತಿದ್ದಾರೆ. ಆದರೆ RRR ಸಿನಿಮಾ ಅಭಿಮಾನಿಗಳಲ್ಲಿ ಭಾರೀ ಆತಂಕ ಮೂಡಿಸುತ್ತಿದೆ.  RRR ಚಿತ್ರಕ್ಕಾಗಿ ಕೆಲವು ಥಿಯೇಟರ್‌ಗಳಲ್ಲಿ ಜೇಮ್ಸ್ ತೆರವಾಗುವ ಭೀತಿಯಿದೆ. 

ಪುನೀತ್ ರಾಜ್‌ಕುಮಾರ್‌ ಕೊನೆಯ ಕಮರ್ಷಿಯಲ್ ಚಿತ್ರ ಜೇಮ್ಸ್. ಇನ್ನೂ ಲಕ್ಷಾಂತರ ಅಭಿಮಾನಿಗಳು ಬಂದು ಚಿತ್ರ ನೋಡುವುದಿದೆ. ಕನ್ನಡ ಸಿನಿಮಾವನ್ನು ನಾವು ಗೆಲ್ಲಿಸಬೇಕು. ದಯವಿಟ್ಟು ಜೇಮ್ಸ್ ತೆರವುಗೊಳಿಸಬೇಡಿ' ಎಂದು ಸಿನಿಮಾ ವಿತರಕರು, ಪ್ರದರ್ಶಕರಿಗೆ ಜೇಮ್ಸ್ ನಿರ್ದೇಶಕ ಚೇತನ್ ಮನವಿ ಮಾಡಿದ್ದಾರೆ.