ಶಾಲೆಗೆ ಬಂತು ರೈಲು; ರೈಲ್ವೆ ಬೋಗಿಗಳು ಈಗ ಸುಸಜ್ಜಿತ ಶಾಲಾ ಕೊಠಡಿಗಳು!

Jan 14, 2020, 2:28 PM IST

ಮೈಸೂರು (ಜ. 14): ಹಳಿಮೇಲಿದ್ದ ಟ್ರೈನು ಸ್ಕೂಲಿಗೆ ಬಂದಿದೆ.  ಶಿಥಿಲಗೊಂಡಿದ್ದ ಶಾಲೆಗೆ  ಕೊಠಡಿಗಳಾಗಿವೆ. ಗುಜರಿ ಸೇರಬೇಕಿದ್ದ ರೈಲ್ವೆ ಬೋಗಿಗಳು ಸುಸಜ್ಜಿತ ಶಾಲಾ ಕೊಠಡಿಗಳಾದ ಅಪರೂಪದ ಸುದ್ಧಿಯಿದು.

ಮೈಸೂರಿನಿಂದ ಕೊನೆಗೂ ಫಿಲ್ಮ್‌ ಸಿಟಿ ಶಿಫ್ಟ್: ಎಲ್ಲಿಗೆ? ಕಾರಣ ಸಹಿತ ಉತ್ತರಿಸಿದ ಡಿಸಿಎಂ 

ಮೈಸೂರಿನ ರೈಲ್ವೆ ಕಾರ್ಯಾಗಾರ ಆವರಣದ ಸರ್ಕಾರಿ ಶಾಲೆಯಲ್ಲಿ ಇಂತಹದ್ದೊಂದು ವಿನೂತನ ಪ್ರಯತ್ನ ಮಾಡಲಾಗಿದೆ. ರೈಲ್ವೆ ಇಲಾಖೆಯ ಆಸಕ್ತಿಯಿಂದಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ರೈಲು ಶಾಲೆ ಆರಂಭವಾಗಿದೆ. ದುಸ್ಥಿತಿಯಲ್ಲಿದ್ದ ಎರಡು ರೈಲ್ವೆ ಬೋಗಿಗಳನ್ನು ಕ್ರೇನ್ ಮೂಲಕ ಶಾಲೆಗೆ ತರಿಸಲಾಗಿದೆ. ಬಳಿಕ ಸಂಪೂರ್ಣ ನವೀಕರಿಸಿ, ಆಕರ್ಷಕ ವರ್ಣಾಲಂಕಾರ ಮಾಡಲಾಗಿದೆ.

ಮಗನಿಗಾಗಿ 14 ವರ್ಷಗಳಿಂದ ಊಟ ಬಿಟ್ಟ ಮಹಾತಾಯಿ!

ವಿದ್ಯಾರ್ಥಿಗಳನ್ನು ಆಕರ್ಷಿಸಲು ಚಿತ್ರ ಹಾಗೂ ಮಾಹಿತಿಗಳನ್ನು ಬಿಡಿಸಲಾಗಿದೆ. ಪ್ರಯಾಣಿಕರು ಕೂರುತ್ತಿದ್ದ ಸೀಟ್​ಗಳನ್ನು ತೆಗೆದು, ಮಕ್ಕಳಿಗೆ ಪೀಠೋಪಕರಣ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಕೆಲವೇ ದಿನಗಳಲ್ಲಿ ರೈಲ್ವೆ ಕ್ಲಾಸ್​ ರೂಂಗಳು ಆರಂಭವಾಗಲಿವೆ.