ಮತದಾನಕ್ಕೆ ಸಜ್ಜಾಗಿರುವ ಅಹ್ಮದಾಬಾದ್‌ನ 80 ಶಾಲೆಗೆ ಬಾಂಬ್ ಬೆದರಿಕೆ, ರಷ್ಯಾ ಲಿಂಕ್ ಪತ್ತೆ!

By Suvarna NewsFirst Published May 6, 2024, 12:37 PM IST
Highlights

ಮೂರನೇ ಹಂತದ ಮತದಾನ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ.  ಪೈಕಿ ಅಹಮ್ಮದಾಬಾದ್‌ನಲ್ಲಿ ನಾಳೆ ಮತದಾನ ನಡೆಯಲಿದೆ. ಆದರೆ ಎಲ್ಲಾ ತಯಾರಿಯೊಂದಿಗೆ ಸಜ್ಜಾಗಿದ್ದ 80 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
 

ಅಹಮ್ಮದಾಬಾದ್‌(ಮೇ.06) ಲೋಕಸಭಾ ಚುನಾವಣೆ ಪ್ರಚಾರ, ಮತದಾನ, ರಾಜಕೀಯ ಚಟುವಟಿಕೆಗಳು ದೇಶಾದ್ಯಂತ ನಡೆಯುತ್ತಿದೆ. ಚುನಾವಣಾ ಆಯೋಗ ಸುಸೂತ್ರವಾಗಿ ಮತದಾನ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಇದರ ಬೆನ್ನಲ್ಲೇ ದೆಹಲಿ ರೀತಿಯಲ್ಲಿ ಇದೀಗ ಅಹಮ್ಮದಾಬಾದ್‌ನ 80 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಅಹಮ್ಮದಬಾದ್‌ನಲ್ಲಿ ಮೇ.07ರಂದು ಮತದಾನ ನಡೆಯಲಿದೆ. ಬೆದರಿಕೆ ಬಂದಿರುವ ಶಾಲೆಗಲ ಪೈಕಿ ಕೆಲ ಶಾಲೆಗಳಲ್ಲಿ ನಾಳೆ ಮತದಾನ ನಡೆಯಲಿದೆ. ಇಮೇಲ್ ಮೂಲಕ ಬೆದರಿಕೆ ಕಳುಹಿಸಲಾಗಿದೆ. ಈ ಮಾಹಿತಿ ಪಡೆದ ಬೆನ್ನಲ್ಲೇ ಗುಜರಾತ್ ಪೊಲೀಸರು 80 ಶಾಲೆಗಳಿಗೆ ಧಾವಿಸಿದ್ದಾರೆ. 

ಮೇ.05ರಂದು ದೆಹಲಿ ಶಾಲೆಗಳಿಗೆ ಇದೇ ರೀತಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಇದೇ ರೀತಿ ಅಹಮ್ಮದಾಬಾದ್ ಶಾಲೆಗಳಿಗೂ ಬೆದರಿಕೆ ಬಂದಿದೆ. 80 ಶಾಲೆಗಳಿಗೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಸ್ಕ್ವಾಡ್ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಬಾಂಬ್ ಬೆದರಿಕೆ ಇಮೇಲ್‌ನಿಂದ ಮಕ್ಕಳು ಹಾಗೂ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಶಾಲೆಯತ್ತ ಪೋಷಕರು ದೌಡಾಯಿಸಿದ್ದಾರೆ.  

ದೆಹಲಿಯಲ್ಲಿ 150 ಶಾಲೆಗಳಿಗೆ ಬಾಂಬ್ ಬೆದರಿಕೆ! ಉಗ್ರರ ಕೃತ್ಯ?

ರಷ್ಯಾ ಮೂಲದ ಡೊಮೈನ್‌ನಿಂದ ಇಮೇಲ್ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಮೇಲ್ ಬೆದರಿಕೆ ಕುರಿತು ತನಿಖೆ ನಡೆಸುತ್ತಿರುವ ಗುಜರಾತ್ ಪೊಲೀಸರು ಡಾರ್ಕ್ ವೆಬ್ ಮೂಲಕ ಇಮೇಲ್ ಕಳುಹಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನವ್ಯಕ್ತಪಡಿಸಿದ್ದಾರೆ. ಈ ಡಾರ್ಕ್ ವೆಬ್ ಎನ್‌ಕ್ರಿಪ್ಟೆಡ್ ಆನ್‌ಲೈನ್ ಕಂಟೆಟ್ ಮೂಲಕ ಇಮೇಲ್ ಕಳುಹಿಸುವವರ ಲೋಕೇಶನ್ ಹಾಗೂ ಗುರುತು ರಹಸ್ಯವಾಗಿಡಲು ಸಾಧ್ಯವಿದೆ. ಇದೇ ಡಾರ್ಕ್ ವೆಬ್ ಬಳಸಿ ಬೆದರಿಕೆ ಇಮೇಲ್ ಕಳುಹಿಸಿರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ.

sawariim@mail.ru ಅನ್ನೋ ಇಮೇಲ್ ಐಡಿಯಿಂದ ಬಾಂಬ್ ಬೆದರಿಕೆ ಬಂದಿದೆ. sawariim ಅನ್ನೋ ಪದ ಅರೇಬಿಕ್ ಆಗಿದೆ. ಮುಖ್ಯವಾಗಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗಳು ಭಯೋತ್ಪಾದನೆ ಸಂದೇಶ, ವಿಡಿಯೋ ಸಂದೇಶಗಳಲ್ಲಿ ಈ ಪದ ಹೆಚ್ಚಾಗಿ ಬಳಸಿದ್ದಾರೆ. 

Breaking: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ದೊಡ್ಡ ರಕ್ತಪಾತದ ಸೂಚನೆ

ದೆಹಲಿಯ 150 ಶಾಲೆಗಳಿಗೆ ಇದೇ ರೀತಿ ಡಾರ್ಕ್ ವೆಬ್ ಬಳಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ನಿನ್ನೆ ಬೆಳಗ್ಗೆ 6 ಗಂಟೆಗೆ ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. 150 ಶಾಲೆಗಳು ಹಾಗೂ ಅದರ ಸುತ್ತಮುತ್ತಲಿನ ಶಾಲೆಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದರು. ಇದು ಹುಸಿ ಬಾಂಬ್ ಕರೆಯಾಗಿತ್ತು. ಆದರೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಹೆಚ್ಚಿಲಾಗಿದೆ.

click me!