ಹಳೆಯ ವೀಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗ್ತಿದೆ. ಈ ವೀಡಿಯೋ ನೋಡಿದವರಿಗೆ ಸಹಜವಾಗಿಯೇ ಪಕ್ಕದ ಟಾಲಿವುಡ್ ಸಿನಿರಂಗದ ಬಗ್ಗೆ ಒಂಥರಾ ಸಣ್ಣ ಕೋಪ ಹಾಗೂ ನಮ್ಮ ಕನ್ನಡದ ಹೆಮ್ಮೆಯ ನಟ ಯಶ್ ಬಗ್ಗೆ ಪ್ರೀತಿ ಮೂಡುತ್ತದೆ.
ರಾಕಿಂಗ್ ಸ್ಟಾರ್ ಯಶ್ ಇಂದು ಕನ್ನಡದ ಆಸ್ತಿ ಎಂಬಂತೆ ಬೆಳೆದಿದ್ದಾರೆ. ಆದರೆ ಅವರು ತಮ್ಮ ವೃತ್ತಿಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ನೋಡಿದ್ದಾರೆ. ಇಂದು ಮಾನ, ಸನ್ಮಾನ, ಬಹುಮಾನಗಳನ್ನು ಯಥೇಚ್ಛವಾಗಿ ಪಡೆಯುತ್ತಿರುವ ನಟ ಯಶ್, ಸಾಕಷ್ಟು ಬಾರಿ ಸಾರ್ವಜನಿಕವಾಗಿ ಮತ್ತು ವೈಯಕ್ತಿಕವಾಗಿ ಕನ್ನಡ ಸಿನಿರಂಗದ ಬಗ್ಗೆ, ಇಲ್ಲಿನ ಸ್ಥಿತಗತಿಗಳ ಬಗ್ಗೆ ಅವಹೇಳನ ಎದುರಿಸಿದ್ದಾರೆ. ಆದರೆ, ಇಂದು ಅದೇ ಯಶ್ ನಟನೆಯ ಕೆಜಿಎಫ್ ಮೂಲಕ ಕನ್ನಡ ಇಂಡಸ್ಟ್ರಿ ಟಾಪ್ ಲೆವೆಲ್‌ಗೆ ರೀಚ್ ಆಗಿದೆ.
ಯಶ್ ಬಗ್ಗೆ ಈಗ ಇಷ್ಟೆಲ್ಲಾ ಹೇಳಲು ಕಾರಣವಿದೆ. ಹಳೆಯ ವೀಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗ್ತಿದೆ. ಈ ವೀಡಿಯೋ ನೋಡಿದವರಿಗೆ ಸಹಜವಾಗಿಯೇ ಪಕ್ಕದ ಟಾಲಿವುಡ್ ಸಿನಿರಂಗದ ಬಗ್ಗೆ ಒಂಥರಾ ಸಣ್ಣ ಕೋಪ ಹಾಗೂ ನಮ್ಮ ಕನ್ನಡದ ಹೆಮ್ಮೆಯ ನಟ ಯಶ್ ಬಗ್ಗೆ ಪ್ರೀತಿ ಮೂಡುತ್ತದೆ. ಅದಕ್ಕೆ ಕಾರಣ, ಆ ವೀಡಿಯೋದಲ್ಲಿರುವ ಕಂಟೆಂಟ್. ಹಾಗಿದ್ದರೆ ಅದರಲ್ಲಿ ಅಂಥದ್ದೇನಿದೆ? ಆ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವುದು ಬೆಟರ್!
ಕೋವಿಡ್ ವ್ಯಾಕ್ಸಿನ್ ಅಡ್ಡ ಪರಿಣಾಮ, ಶ್ರೇಯಸ್ ತಲ್ಪಾಡೆ ಕಾರ್ಡಿಯಾಕ್ ಅರೆಸ್ಟ್ ಹಿಂದಿದ್ಯಾ ಲಸಿಕೆ ಎಫೆಕ್ಟ್?
ತೆಲುಗು ಭಾಷಿಕರ ನೆಲದಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ನಟ ಯಶ್ ಹಾಜರಿ ಇತ್ತು. ವೇದಿಕೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ 'ಕನ್ನಡ ಇಂಡಸ್ಟ್ರಿಯಲ್ಲಿ ಸಿನಿಮಾಗಳು 5 ಕೋಟಿ ಬಜೆಟ್ ಒಳಗೆ ನಿರ್ಮಾಣ ಆಗುತ್ತವೆ. ಮತ್ತು ವಾಪಸ್ ಐದರಿಂದ ಆರು ಕೋಟಿ ಕಲೆಕ್ಷನ್ ಮಾಡುತ್ತವೆ. ಸಿನಿಮಾ ವಿಷಯಕ್ಕೆ ಬಂದರೆ ಪಕ್ಕದ ಕರ್ನಾಟಕ ರಾಜ್ಯ ತುಂಬಾ ಸಣ್ಣದು' ಎಂದು ಮಾತನಾಡುತ್ತಾರೆ. ಬಳಿಕ ವೇದಿಕೆಗೆ ಎಂಟ್ರಿ ಕೊಟ್ಟು ಮಾತನಾಡಿದ ಕನ್ನಡದ ನಟ ಯಶ್ 'ನಮ್ಮ ಕನ್ನಡದ ಸಾಕಷ್ಟು ಸಿನಿಮಾಗಳು 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತವೆ. ಆದರೆ ಅದು ಹೇಗೆ ಕೆಲವರಿಗೆ ಅರಿವಾಗಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ' ಎಂದು ಹೇಳುತ್ತಾರೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಯನತಾರಾ, ಬಹುಮುಖ ಪ್ರತಿಭೆ ಎನಿಸಿಕೊಂಡ ಲೇಡಿ ಸೂಪರ್ ಸ್ಟಾರ್!
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಇದು ಸಾಕಷ್ಟು ಹಳೆಯ ವೀಡಿಯೋ. ಏಕೆಂದರೆ, ಇಂದು ಕನ್ನಡ ಸಿನಿಮಾಗಳು ಮಾಡಿರುವ ಕಲೆಕ್ಷನ್ ಬರೋಬ್ಬರಿ ಎರಡು ಸಾವಿರ (2000) ಕೋಟಿ ಮೀರಿದೆ. ಕೆಜಿಎಫ್ ಹಾಗೂ ಕಾಂತಾರದ ಕಲೆಕ್ಷನ್ ಹಾಗೂ ಜನಪ್ರಿಯತೆ ಇಂದು ಭಾರತವನ್ನೂ ಮೀರಿ ಸುದ್ದಿಯಾಗಿದೆ. ಹೀಗಾಗಿ, ಅಂದು ನಟ ಯಶ್ ಹೇಳಿದ್ದ 50 ಕೋಟಿ ಕಲೆಕ್ಷನ್ ಇಂದು ಏನೇನೂ ಅಲ್ಲ. ಬಜೆಟ್ ಕೂಡ ಅಷ್ಟೇ, 200-300 ಕೋಟಿ ಬಜೆಟ್ ಅನ್ನು ಕೂಡ ಇವತ್ತಿನ ದಿನಗಳಲ್ಲಿ ಕನ್ನಡ ಸಿನಿಮಾ ಉದ್ಯಮ ಭರಿಸಬಲ್ಲದು ಎಂಬುದು ಸಾಬೀತಾಗಿದೆ.
ಕೋವಿಡ್ ವ್ಯಾಕ್ಸಿನ್ ಅಡ್ಡ ಪರಿಣಾಮ, ಶ್ರೇಯಸ್ ತಲ್ಪಾಡೆ ಕಾರ್ಡಿಯಾಕ್ ಅರೆಸ್ಟ್ ಹಿಂದಿದ್ಯಾ ಲಸಿಕೆ ಎಫೆಕ್ಟ್?
ಆದರೆ, ಅಂದಿನ ಪರಿಸ್ಥಿನಿ ಹಾಗಿರಲಿಲ್ಲ. ಆದರೆ, ನಟ ಯಶ್ ಅಂದು ಕೂಡ ಕನ್ನಡ ಸಿನಿಮಾರಂಗದ ಬಗ್ಗೆ ಆಡಿದ್ದ ಅವಹೇಳನವನ್ನು ಸಹಿಸದೇ ಸರಿಯಾಗಿಯೇ ಕೌಂಟರ್ ಕೊಟ್ಟಿದ್ದರು. ಅಷ್ಟೇ ಅಲ್ಲ, ತಮ್ಮ ಸಿನಿಮಾ ಮೂಲಕವೇ ಕನ್ನಡ ಸಿನಿಮಾಗಳು ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿ ಅದರ ಹತ್ತು ಪಟ್ಟು ಕಲೆಕ್ಷನ್ ಮಾಡಬಲ್ಲವು ಎಂಬುದನ್ನು ಸಾಬೀತು ಮಾಡಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಅದು ಯಶ್ ಕನ್ನಡ ಪ್ರೀತಿ, ಸಿನಿಮಾ ಪ್ರೀತಿ ಹಾಗೂ ಸಾಧಿಸುವ ಛಲಕ್ಕೆ ಸಾಕ್ಷಿ.