ಬಲುಬೇಗ ಭಕ್ತರ ಪ್ರೀತಿಗೆ ಒಲಿಯುವ ದೇವರೆಂದ್ರೆ ಶಿವ. ಆತನ ಆರಾಧನೆಯನ್ನು ಭಕ್ತರು ಕಟ್ಟುನಿಟ್ಟಾಗಿ ಮಾಡಿದ್ರೆ ಈಶ್ವರನ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ. ಆದ್ರೆ ಪೂಜೆ ವೇಳೆ ನೀವು ಮಾಡುವ ಸಣ್ಣ ತಪ್ಪು ಕೂಡ ಶಿವನ ಕೋಪಕ್ಕೆ ಕಾರಣವಾಗುತ್ತದೆ.
ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನವನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಸೋಮವಾರ ಶಿವನ ಪೂಜೆ ನಡೆಯುತ್ತದೆ. ಸೋಮವಾರ ಶಿವನ ಪೂಜೆ ಮಾಡುವುದರಿಂದ ಮಹಾದೇವನ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ ಎಂದು ಭಕ್ತರು ನಂಬುತ್ತಾರೆ. ನೀವು ಎಷ್ಟೇ ಭಯ - ಭಕ್ತಿಯಿಂದ ಪೂಜೆ ಮಾಡಿ, ಪೂಜೆ ಮಾಡುವ ವೇಳೆ ಸಣ್ಣ ತಪ್ಪು ಮಾಡಿದ್ರೂ ಅದು ನಿಮಗೆ ಪೂಜೆ ಫಲವನ್ನು ನೀಡುವುದಿಲ್ಲ. ಅದ್ರಲ್ಲಿ ಹಾಲಿನ ಅಭಿಷೇಕ ಕೂಡ ಸೇರಿದೆ.
ಶಿವಲಿಂಗ (Shivlinga) ದ ಪೂಜೆಯಲ್ಲಿ ಹಾಲಿ (Milk) ಗೆ ಮಹತ್ವದ ಸ್ಥಾನವಿದೆ. ಶಿವನಿಗೆ ಹಾಲಿನ ಅಭಿಷೇಕವನ್ನು ಮಾಡಲಾಗುತ್ತದೆ. ಶಿವನಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಮಾಡುವ ವೇಳೆ ನೀವು ಯಾವುದೇ ಕಾರಣಕ್ಕೂ ತಾಮ್ರದ ಪಾತ್ರೆಯನ್ನು ಬಳಸಬೇಡಿ. ತಾಮ್ರದ ಪಾತ್ರೆಯಲ್ಲಿ ಹಾಲನ್ನು ಹಾಕಿ ಶಿವಲಿಂಗಕ್ಕೆ ಅರ್ಪಿಸಿದ್ರೆ ನಿಮ್ಮ ಪೂಜೆ ಫಲ ನೀಡುವ ಬದಲು ನಾಕಾರಾತ್ಮಕ ಪ್ರಭಾವಕ್ಕೆ ನೀವು ಒಳಗಾಗಬೇಕಾಗುತ್ತದೆ. ನಾವಿಂದು ತಾಮ್ರದ ಪಾತ್ರೆಯಲ್ಲಿ ಹಾಲಿನ ಅಭಿಷೇಕ ಯಾಕೆ ಮಾಡಬಾರದು ಎಂಬುದನ್ನು ಹೇಳ್ತೇವೆ.
ಮಂಗಳ ನಿಂದ ದುಪ್ಪಟ್ಟು ಹಣ ,ಈ ಮೂರು ರಾಶಿ ಸಂಪತ್ತು ಮತ್ತು ಅಪಾರ ಯಶಸ್ಸು
ನಮಗೆ ತಿಳಿದಂತೆ ಹಿಂದೂ ಧರ್ಮದಲ್ಲಿ ತಾಮ್ರ (Copper) ವನ್ನು ಶುದ್ಧ ಲೋಹ ಎಂದು ನಂಬಲಾಗಿದೆ. ತಾಮ್ರದ ಪಾತ್ರೆಯಲ್ಲಿ ಯಾವುದೇ ವಸ್ತುವನ್ನು ಇಟ್ಟರೂ ಅದು ಶುದ್ಧ ಎಂದು ಪರಿಗಣಿಸಲಾಗಿದೆ. ಆದ್ರೆ ತಾಮ್ರದ ಪಾತ್ರೆಯಲ್ಲಿ ಹಾಲಿಡೋದು ಅಥವಾ ಹಾಲಿನ ಅಭಿಷೇಕ ಮಾಡೋದು ನಿಷಿದ್ಧ. ಮನೆಗೆ ಬೆಳ್ಳಿ, ಚಿನ್ನ, ತಾಮ್ರ ಸೇರಿದಂತೆ ಯಾವುದೇ ಪಾತ್ರೆ ತಂದ್ರೂ ಅದಕ್ಕೆ ಹಾಲು ಹಾಕಿ ತೊಳೆಯಲಾಗುತ್ತದೆ. ಹೀಗೆ ಮಾಡಿದಲ್ಲಿ ಪಾತ್ರೆಯಲ್ಲಿರುವ ನಕಾರಾತ್ಮಕತೆ ನಾಶವಾಗಿ, ಪಾತ್ರೆ ಶುದ್ಧವಾಗುತ್ತದೆ. ತಾಮ್ರ ಹಾಗೂ ಹಾಲು ಎರಡೂ ಶುದ್ಧೀಕರಣಕ್ಕೆ ಸಂಬಂಧಿಸಿದ್ದಾದ್ರೂ ಅವೆರಡನ್ನು ಒಟ್ಟಿಗೆ ಅಭಿಷೇಕಕ್ಕೆ ಬಳಸಬಾರದು.
ಹಾಲು ನಕಾರಾತ್ಮಕತೆಯನ್ನು ಹೀರಿಕೊಳ್ಳುತ್ತದೆ. ತಾಮ್ರದ ಪಾತ್ರೆಯ ಸುತ್ತ ಯಾವುದಾದರೂ ಕಲ್ಮಶವಿದ್ದರೆ ತಾಮ್ರದ ಪಾತ್ರೆಯಲ್ಲಿ ಹಾಲನ್ನು ತುಂಬಿದ ಕೂಡಲೇ ಆ ಪಾತ್ರೆಯಲ್ಲಿ ಅಶುದ್ಧತೆ ಸಂಗ್ರಹವಾಗುತ್ತದೆ. ಪೂಜೆಯ ಸಮಯದಲ್ಲಿ ಹಾಲು, ಮೊಸರನ್ನು ಪಾತ್ರೆಯಲ್ಲಿ ಇಡುವುದರಿಂದ ಈ ಎಲ್ಲಾ ಪದಾರ್ಥಗಳು ಮದ್ಯದಂತಾಗುತ್ತದೆ.
ತಾಮ್ರದ ಪಾತ್ರೆಯಲ್ಲಿರುವ ಹಾಲನ್ನು ಶಿವನಿಗೆ ಅಭಿಷೇಕ ಮಾಡಿದಲ್ಲಿ ಅದು ಮದ್ಯವನ್ನು ಅಭಿಷೇಕ ಮಾಡಿದಂತಾಗುತ್ತದೆ. ಹಾಲು ಅಶುದ್ಧವಾಗುವ ಕಾರಣ ಅದನ್ನು ಶಿವನಿಗೆ ಅರ್ಪಿಸುವುದು ಯೋಗ್ಯವಲ್ಲ. ಇದ್ರಿಂದ ಪುಣ್ಯ ಪ್ರಾಪ್ತಿಯಾಗುವ ಬದಲು ಪಾಪ ಸುತ್ತಿಕೊಳ್ಳುತ್ತದೆ. ಹಾಗಾಗಿ ನೀವು ಅಪ್ಪಿತಪ್ಪಿಯೂ ಪೂಜೆ ವೇಳೆ ಶಿವಲಿಂಗಕ್ಕೆ ತಾಮ್ರದ ಪಾತ್ರೆಯಿಂದ ಹಾಲಿನ ಅಭಿಷೇಕ ಮಾಡಬೇಡಿ. ನೀವು ಶಿವನಿಗೆ ಹಾಲಿನ ಅಭಿಷೇಕ ಮಾಡಲು ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಯನ್ನು ಬಳಸಿ.
ಶಿವನಿಗೆ ಈ ವಸ್ತುಗಳನ್ನೂ ಅರ್ಪಿಸಬೇಡಿ : ಪ್ರತಿ ಸೋಮವಾರ ಹಾಗೂ ಶ್ರಾವಣ ಮಾಸದ ಪ್ರತಿ ದಿನ ಶಿವನಿಗೆ ಪೂಜೆ ಮಾಡುವವರು, ಶಿವಲಿಂಗಕ್ಕೆ ಅಭಿಷೇಕ ಮಾಡುವವರು ನೀವಾಗಿದ್ದರೆ ಶಿವಲಿಂಗಕ್ಕೆ ಅರಿಶಿನವನ್ನು (Turmeric) ಅರ್ಪಿಸಬಾರದು. ಇದನ್ನು ಮುಖ್ಯವಾಗಿ ಸೌಂದರ್ಯಕ್ಕಾಗಿ ಬಳಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಶಿವಲಿಂಗವು ಪುರುಷತ್ವದ (Musculine) ಸಂಕೇತವಾಗಿದೆ, ಆದ್ದರಿಂದ ಮಹಾದೇವನಿಗೆ ಅರಿಶಿನವನ್ನು ಅರ್ಪಿಸಬಾರದು. ಇದಲ್ಲದೆ ಶಿವನಿಗೆ ಕೆಂಪು ಹೂವುಗಳು ಇಷ್ಟವಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಶಂಖವು ಶಿವನಿಗೆ ಪ್ರಿಯವಾಗಿದ್ದರೂ, ಶಂಖಚೂರ್ ಎಂಬ ರಾಕ್ಷಸನನ್ನು ಮಹಾದೇವನು ಕೊಂದಿದ್ದರಿಂದ ಶಿವನ ಪೂಜೆಯಲ್ಲಿ ಶಂಖವನ್ನು ನಿಷೇಧಿಸಲಾಗಿದೆ.
ಹುಚ್ಚರಂತೆ ಪ್ರೀತಿಸೋರು ಸಿಗಬೇಕು ಅಂದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ!
ಶಿವಲಿಂಗದ ಪೂಜೆಯಲ್ಲಿ ಇದನ್ನು ನೆನಪಿಡಿ : ಶಿವನ ಪೂಜೆಯಲ್ಲಿ ಗಂಗಾಜಲವನ್ನು ಬಳಸುವುದು ಮುಖ್ಯವಾಗಿದೆ. ಗಂಗಾಜಲವು ಶಿವನಿಗೆ ಅತ್ಯಂತ ಪ್ರಿಯವಾದುದೆಂದು ನಂಬಲಾಗಿದೆ. ಶಿವನ ಜೊತೆಗೆ ಪಾರ್ವತಿ, ಗಣಪತಿ, ಕಾರ್ತಿಕೇಯ ಮತ್ತು ನಾಗದೇವತೆಯನ್ನು ನೀವು ಪೂಜಿಸಬೇಕಾಗುತ್ತದೆ. ಎಲ್ಲರನ್ನೂ ಒಟ್ಟಿಗೆ ಪೂಜಿಸಿದಾಗ ಮಾತ್ರ ಫಲ ಸಿಗಲು ಸಾಧ್ಯ. ಇದಲ್ಲದೆ ಹಾಲು, ಮೊಸರು, ಜೇನುತುಪ್ಪ ಇತ್ಯಾದಿಗಳನ್ನು ಶಿವನಿಗೆ ಅರ್ಪಿಸಿ. ಶ್ರೀಗಂಧ, ಅಕ್ಷತ, ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿ. ತುಪ್ಪ, ಸಕ್ಕರೆ ಮತ್ತು ಗೋಧಿ ಹಿಟ್ಟಿನಿಂದ ಮಾಡಿದ ಪ್ರಸಾದವನ್ನು ಸಹ ಶಿವನಿಗೆ ನೈವೇದ್ಯವಾಗಿ ನೀಡಬೇಕು.