ಕೋವಿಶೀಲ್ಡ್ ಅಡ್ಡ ಪರಿಣಾಮವಿದ್ರೂ ತೀರಾ ವಿರಳ: ಲಸಿಕೆ ಪಡೆದವರಿಗೆ ಆತಂಕ ಬೇಡ

By Kannadaprabha News  |  First Published May 6, 2024, 1:02 PM IST

ಕೊರೋನಾ ಸಮಯದಲ್ಲಿ ಪಡೆದಿರುವ ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುವುದು ಸತ್ಯ. ಆದರೆ ಅಡ್ಡಪರಿಣಾಮ ಪ್ರಕರಣಗಳು ಬಹಳ ವಿರಳವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 


ಬೆಂಗಳೂರು (ಮೇ.06): ಕೊರೋನಾ ಸಮಯದಲ್ಲಿ ಪಡೆದಿರುವ ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುವುದು ಸತ್ಯ. ಆದರೆ ಅಡ್ಡಪರಿಣಾಮ ಪ್ರಕರಣಗಳು ಬಹಳ ವಿರಳವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಸ್ಟಾಜೆನಿಕಾತನ್ನ ಕೊರೋನಾಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಒಪ್ಪಿಕೊಂಡಿದೆ. ಲಸಿಕೆಯಿಂದ ಬೋಸಿಸ್ ವಿತ್ ಂಬೋಸೈಟೋಪೇ ನಿಯಾ ಸಿಂಡೋಮ್ (ಟಿಎಸ್‌ಎಸ್) ಎಂಬ ಸಮಸ್ಯೆ ಉಂಟಾಗುವುದಾಗಿ ಹೇಳಿದೆ. 

ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತ ಕಣಗಳ ಸಂಖ್ಯೆ ಕಡಿಮೆ ಆಗುತ್ತದೆ.  ಇದೇ ವೇಳೆ ಇದು ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತದೆ ಎಂದೂ ಸ್ಪಷ್ಟಪಡಿಸಿದೆ.  ಇದರ ಬೆನ್ನಲ್ಲೇ ಅಸ್ಸಾಜೆನಿಕಾ ಸಂಸ್ಥೆಯ ಭಾರತೀಯ ಆವೃತ್ತಿಯಾದ ಕೋವಿಶೀ ಲಸಿಕೆ ಪಡೆದವರಲ್ಲಿ ಆತಂಕ ಶುರುವಾಗಿದೆ. ನಮ್ಮ ದೇಶದಲ್ಲಿ ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲು ಸರ್ಕಾರ ಅನುಮತಿಸಿದ್ದು ಯಾಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಶುರುವಾಗಿದೆ. 

Tap to resize

Latest Videos

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಒಬಿಸಿಗೆ ಸಂಕಷ್ಟ: ಬಿ.ಎಸ್.ಯಡಿಯೂರಪ್ಪ

ಈ ಲಸಿಕೆಯಿಂದ ಬಹುತೇಕ ಭಾರತೀಯರು ಟಿಎಸ್‌ಎಸ್‌ ಸಮಸ್ಯೆಗೆ ತುತ್ತಾಗಿದ್ದು, ಚಿಕ್ಕ ವಯಸ್ಸಿನವರಲ್ಲೇ ಹೃದಯಾ ಘಾತಗಳು ಹೆಚ್ಚಾಗಿವೆ ಎಂಬ ಆರೋಪ ಕೇಳಿ ಬಂದಿದೆ. ಟಿಎಸ್‌ಎಸ್‌ ಸಮಸ್ಯೆ ಉಂಟಾದರೆ ಉಸಿರಾಟ ತಗ್ಗುವಿಕೆ, ಎದೆ ನೋವು, ಊದಿಕೊಳ್ಳುವುದು, ನಿರಂತರ ತಲೆ ನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ರಕ್ತ ಹೆಪ್ಪುಗಟ್ಟುವಿಕೆಯಿಂದಹೃದಯಾಘಾತವೂ ಸಂಭವಿಸಬಹುದು ಎನ್ನಲಾಗಿದೆ. ಕಂಪನಿಯ ಈ ಹೇಳಿಕೆ ಬಗ್ಗೆ ತಜ್ಞರು ಹಲವು ಸ್ಪಷ್ಟನೆ ನೀಡಿ ಆತಂಕದ ಅಗತ್ಯವಿಲ್ಲ ಎಂದಿದ್ದಾರೆ.

ಅತ್ಯಂತ ವಿರಳ- ತಜ್ಞರು: 'ಕೋವಿಶೀಲ್ಡ್‌ನಿಂದ ಟಿಎಸ್‌ಎಸ್‌ ಅಡ್ಡ ಪರಿಣಾಮ ಉಂಟಾಗುವುದು ಅತ್ಯಂತ ವಿರಳ. ಒಂದು ವೇಳೆ ಲಸಿಕೆ ಪಡೆದ ಜನರ ಪೈಕಿ ಭಾರೀ ಪ್ರಮಾಣದಲ್ಲಿ ಟಿಎಸ್‌ಎಸ್‌ನಿಂದ ಸಾವು ಸಂಭವಿಸಿದ್ದರೆ ಆತಂಕ ಪಡಬೇಕಾಗಿತ್ತು. ಆದರೆ ಐಸಿಎಂಆರ್‌ನ ಮಾಜಿ ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಅವರು 10 ಲಕ್ಷದಲ್ಲಿ ಏಳು ಮಂದಿಗೆ ಮಾತ್ರ ಕೋವಿಶೀಲ್ಡ್ ಲಸಿಕೆಯಿಂದ ಸಮಸ್ಯೆಯಾಗುತ್ತಿದೆ. 

ಹೀಗಾಗಿ ಅಡ್ಡ ಪರಿಣಾಮ ವಿರಳ' ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ. ನಾಗರಾಜು, 'ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮಗಳ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಕೇವಲ ಕೋವಿಶೀಲ್ಡ್ ಲಸಿಕೆ ಮಾತ್ರವಲ್ಲ ಬೇರೆ ಕೊರೋನಾ ಲಸಿಕೆಗಳಿಂದಲೂ ಅಡ್ಡ ಪರಿಣಾಮ ಇರುತ್ತದೆ. ಅಷ್ಟೇಕೆ ಬೇರೆ ಕಾಯಿಲೆಗಳಿಗೆ ನೀಡುವ ಲಸಿಕೆಗಳಿಂದಲೂ ಅಡ್ಡ ಪರಿಣಾಮ ಇರುತ್ತದೆ. ಹೆಚ್ಚು ಮಂದಿಗೆ ಸಮಸ್ಯೆಯಾದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. 

ಮತ್ತೆ ಕೈ ಕೊಟ್ಟ ಪೂರ್ವ ಮುಂಗಾರು: ಚಾಮರಾಜನಗರ ಜಿಲ್ಲೆಯಲ್ಲಿ ಅಂತರ್ಜಲ‌ ಕುಸಿತ

ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, 'ಕಳೆದ 15 ವರ್ಷಗಳಿಂದ ಯುವಕರಲ್ಲಿ ಹೃದಯಾಘಾತ ಪ್ರಮಾಣ ಶೇ.22 ರಷ್ಟು ಹೆಚ್ಚಾಗಿದೆ. ಹೀಗಾಗಿ ಸಣ್ಣ ವಯಸ್ಸಿನವರಲ್ಲಿನ ಹೃದಯಾ ಘಾತಕ್ಕೆ ಲಸಿಕೆ ಕಾರಣ ಎನ್ನಲಾಗದು. ಇನ್ನು ಲಸಿಕೆ ಪಡೆದು 3 ವರ್ಷ ಕಳೆದಿದ್ದು, ಈ ಹಿಂದೆಯೂ ಇಂತಹ ಸುದ್ದಿ ಹರ ಡಿತ್ತು. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ' ಎಂದಿದ್ದಾರೆ.

click me!