ಕಾವೇರಿ ವಿಚಾರದಲ್ಲಿ ಬಿಜೆಪಿ ಸಂಸದರು ಏನ್ಮಾಡ್ತಿದ್ದಾರೆ ? ಪಿಎಂ ಮೋದಿ ಯಾಕೆ ಮಧ್ಯಪ್ರವೇಶ ಮಾಡಲ್ಲ?

Oct 8, 2023, 11:50 AM IST

ಕಾವೇರಿ ವಿವಾದದ ಬಗ್ಗೆ ಸಂಸದ ತೇಜಸ್ವಿ ಸೂರ್ಯ(MP Tejasvi Surya) ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದಾರೆ. ನಮ್ಮ ಕೇಸ್‌ ತುಂಬಾ ಸ್ಟ್ರಾಂಗ್‌ ಆಗಿದ್ದರೂ, ಆದೇಶ ಮಾತ್ರ ನಮ್ಮ ವಿರುದ್ಧವಾಗಿ ಬರುತ್ತಿದೆ. ನಮ್ಮ ರಾಜ್ಯ ಸರ್ಕಾರ ಈ ವಿಷಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡತೆ ಕಾಣುತ್ತಿಲ್ಲ ಅನಿಸುತ್ತದೆ. ಇನ್ನೂ ಕಾವೇರಿ(Caveri water dispute) ವಿಷಯವಾಗಿ ಕರ್ನಾಟಕದವರಾಗಿರುವ ಮಲ್ಲಿಕಾರ್ಜುನ ಖರ್ಗೆ ಒಂದೇ ಒಂದು ಮಾತನ್ನು ಆಡಿಲ್ಲ ಏಕೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಲಾಭವಾಗಲಿದೆ. ಅಲ್ಲದೇ ತಮಿಳುನಾಡಿನಲ್ಲಿ ಶೀಘ್ರದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಆರ್‌ಎಸ್‌ಎಸ್‌ನೋರು ಯಾವ ಬಿಲದಲ್ಲಿ ಅವಿತಿದ್ದಾರೆ? ಬುದ್ದಿ ಜೀವಿಗಳು ಯಾವ ಬಿಲದಲ್ಲಿ ಅಡಗಿದ್ದಾರೆ ಕೇಳಿ? ಕನ್ನಡ ಪರ ಹೋರಾಟಕ್ಕೆ  ಕಾಂಟ್ರಾಕ್ಟ್ ಕೊಟ್ಟಿದ್ದೀವಾ ? ಎಂದು ಸಂಸದರು ಪ್ರಶ್ನಿಸಿದರು. ಅಲ್ಲದೇ ಕನ್ನಡ ಹೋರಾಟದಲ್ಲಿ ಆರ್‌ಎಸ್‌ಎಸ್‌ನವರು ಇದ್ದಾರೆ ಎಂದು ಅವರು ಹೇಳಿದರು.

ಇದನ್ನೂ ವೀಕ್ಷಿಸಿ:  ಅಸ್ಪೃಶ್ಯತೆಗೆ ಸನಾತನ ಧರ್ಮ ಕಾರಣನಾ ? ಎಲ್ಲರೂ ವೇದ- ಸಂಸ್ಕೃತಗಳನ್ನು ಯಾಕೆ ಕಲೀಬೇಕು?