ಬ್ರಹ್ಮಗಂಟು ಸೀರಿಯಲ್ ಸೌಂದರ್ಯ, ಚಿರು, ದೀಪಾ ನೇರಪ್ರಸಾರದಲ್ಲಿ ವೀಕ್ಷಕರ ಜೊತೆ ಸಂವಾದ ಮಾಡಿದ್ದಾರೆ. ಲೈವ್‌ನಲ್ಲಿಯೇ ಸೌಂದರ್ಯ ಚಿರುಗೆ ಕೊಟ್ಟ ಎಚ್ಚರಿಕೆ ಏನು?
ಸೌಂದರ್ಯಳಿಗೆ ಸೌಂದರ್ಯನೇ ಮುಖ್ಯ. ಇದೇ ಕಾರಣಕ್ಕೆ ಸೌಂದರ್ಯ ಎಲ್ಲಿ ಹಾಳಾಗಿ ಹೋಗುತ್ತೋ ಎಂದು ಮಕ್ಕಳನ್ನು ಮಾಡಿಕೊಂಡಿಲ್ಲ. ಬೇರೆಯವರಿಗೆ ಮಕ್ಕಳು ಆಗುವುದೂ ಅವಳಿಗೆ ಇಷ್ಟವಿಲ್ಲ. ಇದನ್ನೆಲ್ಲಾ ಮುಚ್ಚಿಟ್ಟು, ಮೈದುನ ಚಿರು ಸಲುವಾಗ ತಾನು ಮಕ್ಕಳನ್ನು ಮಾಡಿಕೊಂಡಿಲ್ಲ ಎಂದೇ ಹೇಳುತ್ತಿದ್ದಾಳೆ. ಚಿರು ನನಗೆ ಮಗ ಇದ್ದ ಹಾಗೆ. ಅತ್ತಿಗೆ ಅಂದರೆ ಅಮ್ಮನ ಸಮಾನ. ಅವನಿಗೆ ಅಮ್ಮ ಇಲ್ಲದೇ ಇರುವ ಕಾರಣ, ಅಮ್ಮನ ಜಾಗದಲ್ಲಿ ನಾನು ಇದ್ದೇನೆ. ನನಗೆ ಮಕ್ಕಳಾದರೆ ಎಲ್ಲಿ ಚಿರು ಮೇಲೆ ಪ್ರೀತಿ ಕಡಿಮೆಯಾಗುತ್ತದೆಯೋ ಎಂದು ಮಕ್ಕಳನ್ನು ಮಾಡಿಕೊಂಡಿಲ್ಲ ಎಂದೇ ಎಲ್ಲರನ್ನೂ ನಂಬಿಸಿದ್ದಾಳೆ. ಇದೇ ಕಾರಣಕ್ಕೆ ಚಿರುಗೆ ಅತ್ತಿಗೆ ಎಂದರೆ ಪಂಚಪ್ರಾಣ, ಆಕೆಯ ಮಾತು ವೇದವಾಕ್ಯ. ಆದರೆ ಅಸಲಿಯತ್ತು ಗೊತ್ತಿರೋದು ಅವಳ ಅಣ್ಣನಿಗೆ ಮಾತ್ರ. ಆದರೆ ಉಳಿದವರ ಪಾಲಿಗೆ ಅವಳು ದೇವತೆ. ಆದರೆ ನಿಜವಾಗಿಯೂ ವಿಲನ್!
ಇನ್ನು ದೀಪಾಳೋ ಮುಗ್ಧೆ. ನೋಡಲು ಚೆನ್ನಾಗಿಲ್ಲ ಎನ್ನುವ ಹಣೆಪಟ್ಟಿ ಕಟ್ಟುಕೊಂಡಾಕೆ. ಇವಳ ಅಕ್ಕನ ಜೊತೆ ಚಿರು ಮದ್ವೆಫಿಕ್ಸ್ ಆಗಿತ್ತು. ಆದರೆ ಅಕ್ಕ ಮದುವೆ ದಿನ ಓಡಿ ಹೋದ ಕಾರಣ, ಎಲ್ಲರ ಮರ್ಯಾದೆ ಉಳಿಸಲು ದೀಪಾ ಚಿರುನ ಮದುವೆಯಾಗಿದ್ದಾಳೆ. ಆದರೆ ಆಕೆ ಚೆನ್ನಾಗಿಲ್ಲ, ಹಾಗೂ ತಾನು ಇಷ್ಟಪಟ್ಟ ಹುಡುಗಿ ಅಲ್ಲ ಎನ್ನುವ ಕಾರಣಕ್ಕೆ ಚಿರುಗೆ ಅವಳನ್ನು ಕಂಡರೆ ವಿಪರೀತ ಕೋಪ. ಅವರಿಬ್ಬರೂ ಒಂದಾಗಿ ಬಿಟ್ಟು ಎಲ್ಲಿ ಮಕ್ಕಳಾದರೆ ಎನ್ನುವ ಆತಂಕ ಸೌಂದರ್ಯಳಿಗೆ. ಇದೇ ಕಾರಣಕ್ಕೆ ಸಿಕ್ಕಿದ್ದೇ ಛಾನ್ಸ್ ಎಂದು ಚಿರುವನ್ನು ಎತ್ತಿಕಟ್ಟುತ್ತಿದ್ದಾಳೆ. ಇದು ಇಷ್ಟವಿಲ್ಲದ ಮದುವೆ ಎಂದು ಪದೇಪದೇ ಆತನಿಗೆ ಜ್ಞಾಪಿಸುತ್ತಾ ಪತ್ನಿಯಿಂದ ಇನ್ನಷ್ಟು ದೂರ ಆಗುವಂತೆ ಮಾಡುತ್ತಿದ್ದಾಳೆ.
ದೀಪಾ ಗೆಟಪ್ ಯಾವಾಗ ಚೇಂಜ್ ಆಗತ್ತೆ? ವೀಕ್ಷಕರ ಪ್ರಶ್ನೆಗೆ ಲೈವ್‌ನಲ್ಲಿ ಬಂದು ಉತ್ತರ ಕೊಟ್ಟೇ ಬಿಟ್ಲು!
ಆದರೆ, ಎಲ್ಲಿ ದೀಪಾಳ ಮೇಲೆ ಅವನ ಒಲವು ಬದಲಾಗುತ್ತದೋ ಎನ್ನುವ ಆತಂಕ ಸೌಂದರ್ಯಳಿಗೆ ಇದ್ದೇ ಇದೆ! ಸೌಂದರ್ಯ, ಚಿರು ಮತ್ತು ದೀಪಾ ಮೂವರೂ ನೇರಪ್ರಸಾರದಲ್ಲಿ ವೀಕ್ಷಕರ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ, ಕೇಳಿದ ಪ್ರಶ್ನೆಯೊಂದಕ್ಕೆ ದೀಪಾ, ಮುಂದೆ ದೀಪಾಳ ಗೆಟಪ್ ಚೇಂಜ್ ಆದ್ರೂ ಆಗ್ಬೋದು ಎಂದಿದ್ದಾಳೆ. ಅದೇ ರೀತಿ ಚಿರು ಕೂಡ ಸದ್ಯ ಅತ್ತೆ ಮತ್ತು ಸೊಸೆ ನಡುವೆ ಸಿಲುಕಿರುವ ಗಂಡನ ರೀತಿ ಆಗಿದೆ ಚಿರು ಸ್ಥಿತಿ. ಆದರೆ ಅತ್ತಿಗೆ ನನ್ನ ದೇವರು. ಅವರು ಹೇಳಿದಂತೆಯೇ ಕೇಳುತ್ತೇನೆ ಎಂದಿದ್ದಾರೆ. ಮುಂದೇ ಬದಲಾಗುವ ಚಾನ್ಸೇ ಇಲ್ವಾ? ಪತ್ನಿಯ ಒಳ್ಳೆಯತನ, ಅತ್ತಿಗೆಯ ಕೆಟ್ಟತನ ಗೊತ್ತಾಗುವ ಚಾನ್ಸೇ ಇಲ್ವಾ ಕೇಳಿದಾಗ ಸೌಂದರ್ಯ ಪಾತ್ರಧಾರಿ ಪ್ರೀತಿ ಅವರು ನೇರಪ್ರಸಾರದಲ್ಲಿಯೇ ಚಿರುಗೆ ಧಮ್ಕಿ ಹಾಕಿದ್ದಾರೆ! ನೀನು ಡೈರೆಕ್ಟರ್ ಹೇಳಿದ್ರೂ ಚೇಂಜ್ ಆಗಬಾರದು ನೋಡು, ಯಾವಾಗ್ಲೂ ನನ್ನ ಪರವಾಗಿಯೇ ಇರಬೇಕು ಎಂದಿದ್ದಾರೆ. ಹೀಗೆ ಪ್ರೀತಿ ಅವರು ತಮಾಷೆಯಾಗಿ ಹೇಳಿದ್ದಾರೆ. ಅಲ್ಲಿಗೆ ಚಿರು ಮುಂದೆ ದೀಪಾಳ ಪರವಾಗಿ ನಿಲ್ಲುತ್ತಾನೆ ಎನ್ನುವ ಗುಟ್ಟೊಂದನ್ನು ಬಿಟ್ಟುಕೊಡಲಾಗಿದೆ. ಆದರೆ ಆ ದಿನ ಬರಲು ವೀಕ್ಷಕರು ಇನ್ನೆಷ್ಟು ವರ್ಷ ಕಾಯಬೇಕು ಎನ್ನುವುದು ಗೊತ್ತಿಲ್ಲ!
ಇನ್ನು ಬ್ರಹ್ಮಗಂಟು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಇಷ್ಟು ದಿನ ದೀಪಾ ಎಲ್ಲವನ್ನೂ ಸಹಿಸಿಕೊಂಡಳು. ಅಪ್ಪ-ಅಮ್ಮನಿಗೆ ತಾನು ಅನುಭವಿಸುತ್ತಿರುವ ಕಷ್ಟ ಗೊತ್ತಾಗಬಾರದು ಎಂದು ಇದನ್ನೆಲ್ಲಾ ಮಾಡಿದಳು. ಆದರೆ ಅಪ್ಪ-ಅಮ್ಮನಿಗೇ ಸೌಂದರ್ಯ ಬೈದ ಕಾರಣ, ಅದನ್ನು ಸಹಿಸಿಕೊಳ್ಳದೇ ಸಿಡಿದೆದ್ದಿದ್ದಾಳೆ. ನೀವೋ, ನಾನು ನೋಡಿಯೇ ಬಿಡೋಣ ಎಂದು ಚಾಲೆಂಜ್ ಹಾಕಿದ್ದಾಳೆ. ಸೇರನ್ನು ಒದ್ದು ಮತ್ತೊಮ್ಮೆ ಹೊಸ ರೂಪದ ಸಿಂಹಿಣಿಯಾಗಿ ಒಳಕ್ಕೆ ಹೋಗಿದ್ದಾಳೆ. ಈಗ ಅಸಲಿ ಆಟ ಶುರುವಾಗಿದೆ.
ಕೊನೆಗೂ ಆ ದಿನ ಬಂದೇ ಬಿಡ್ತು! ದೀಪಾ ಒದ್ದಿದ್ದು ಸೇರನ್ನಲ್ಲ, ಸೌಂದರ್ಯಳ ಅಹಂ ಎಂಬ ಕೋಟೆಯನ್ನು