ಶಿಕ್ಷಣ ಇಲಾಖೆ ಲೋಪ ಬಿಚ್ಚಿಟ್ಟ ಶಾಲಾ ಮಕ್ಕಳು

By Kannadaprabha News  |  First Published Nov 26, 2024, 8:29 AM IST

ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಯೂನಿಸೆಫ್ ಸೇರಿದಂತೆ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಅಕ್ಷರಶಃ ಮಕ್ಕಳ ಧನಿ ಮೊಳಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರು ಹಾಜರಿಯಿಂದಾಗಿ ಮಕ್ಕಳ ಪ್ರಶ್ನೆಗಳ ಸುಳಿಗೆ ಸಿಕ್ಕಿಕೊಂಡ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಮಕ್ಕಳ ಸಮಸ್ಯೆಗಳನ್ನು ಆಲಿಸಿ ಸಮಾಲೋಚನೆ ನಡೆಸಿದರು. 
 


ಬೆಂಗಳೂರು(ನ.26):  'ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು ಅವುಗಳನ್ನು ಶೀಘ್ರ ಭರ್ತಿ ಮಾಡಿ. 40 ಸಾವಿರ ಅತಿಥಿ ಶಿಕ್ಷಕರಿದ್ದರೂ ಇಂಗ್ಲೀಷ್, ವಿಜ್ಞಾನ ವಿಷಯ ಬೋಧಿಸು ವವರಿಲ್ಲ. ಶಾಲಾ ಹಂತದಿಂದಲೇ ಕೌಶಲ್ಯ ಆಧಾರಿತ ಶಿಕ್ಷಣ ಕೊಡಿ. ಹೆಣ್ಣು ಮಕ್ಕಳು ದೌರ್ಜನ್ಯಗಳಿಂದ ರಕ್ಷಿಸಿಕೊಳ್ಳಲು ಶಾಲೆಯಲ್ಲಿ ಕರಾಟೆ ಕಲಿಸಿ....' ಇವು, ವಿಧಾನಸೌಧದಲ್ಲಿ ಸೋಮವಾರ ನಡೆದ 'ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ -2024' ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ಆಗಮಿಸಿದ್ದ ಮಕ್ಕಳ ಪ್ರತಿನಿಧಿಗಳು ಸರ್ಕಾರದ ಮುಂದಿಟ್ಟ ಮಕ್ಕಳ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸುವಂತೆ ವ್ಯಕ್ತಪಡಿಸಿದ ಆಗ್ರಹದ ಪರಿ. 

ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಯೂನಿಸೆಫ್ ಸೇರಿದಂತೆ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಅಕ್ಷರಶಃ ಮಕ್ಕಳ ಧನಿ ಮೊಳಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರು ಹಾಜರಿಯಿಂದಾಗಿ ಮಕ್ಕಳ ಪ್ರಶ್ನೆಗಳ ಸುಳಿಗೆ ಸಿಕ್ಕಿಕೊಂಡ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಮಕ್ಕಳ ಸಮಸ್ಯೆಗಳನ್ನು ಆಲಿಸಿ ಸಮಾಲೋಚನೆ ನಡೆಸಿದರು. ಮಕ್ಕಳಿಂದ ಬಂದ ಪ್ರತಿಯೊಂದು ಆಗ್ರಹ, ಮನವಿಗೂ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಇಲಾಖಾ ಸಚಿವರ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡುವ ಸಿದ್ದ ಉತ್ತರ ನೀಡಿದರು. 

Tap to resize

Latest Videos

ಮಕ್ಕಳ ದಿನಾಚರಣೆಯಂದೇ ಹೀನಾಯ ಕೃತ್ಯ; ಮಗನ ಸೇವೆ ಮಾಡದ್ದಕ್ಕೆ ವಿದ್ಯಾರ್ಥಿನಿಗೆ ಥಳಿಸಿದ ಪ್ರಿನ್ಸಿಪಾಲ್!

ಇಂಗ್ಲಿಷ್-ವಿಜ್ಞಾನ ಶಿಕ್ಷಕರಿಗೆ ಆದ್ಯತೆ: 

ಖಾಲಿ ಇರುವ ಶಿಕ್ಷಕ ಹುದ್ದೆಗಳ ಭರ್ತಿ ಮಾಡಬೇಕೆಂಬ ಮಕ್ಕಳ ಆಗ್ರಹಕ್ಕೆ ಉತ್ತರಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರ ಹುದ್ದೆ ಖಾಲಿ ಇರುವುದು ನಿಜ, ಪ್ರಸ್ತುತ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 5500 ಶಿಕ್ಷಕ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುದ್ದೆಗಳ ಭರ್ತಿಗೆ ಅನುಮತಿ ಸಿಗುವ ಸಾಧ್ಯತೆ ಇದೆ. ಮುಂದಿ ವರ್ಷಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ಇಂಗ್ಲೀಷ್, ವಿಜ್ಞಾನ ವಿಷಯಗಳ ಬೋಧಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಲೆಗೆ ಮಗು ಬಿಡಲು ಬಂದ ತಾಯಿ ಮೇಲೆ ಕಣ್ಣು ಹಾಕಿದ ಸರ್ಕಾರಿ ಶಿಕ್ಷಕ!

ಹೆಣ್ಣು ಮಕ್ಕಳಿಗೆ ಶಾಲೆಯಲ್ಲೇ ಕರಾಟಿ ಕಲಿಸಿ: 

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಆನೇಕ ಕಾನೂನುಗಳನ್ನು ತಂದಿದೆ. ಆದರೆ, ಎಲ್ಲ ಸಮಯದಲ್ಲೂ ಆ ಕಾನೂನು ಕೆಲಸಕ್ಕೆ ಬರಲ್ಲ. ಹಾಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಶಾಲಾ ಹಂತದಿಂದಲೇ ಕರಾಟೆ ಕಲಿಸಿ ಎಂದು ವಿದ್ಯಾರ್ಥಿನಿಯೊಬ್ಬಳು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಿತೇಶ್ ಕುಮಾರ್, ಶಾಲೆಗಳಲ್ಲಿ ಕರಾಟೆ ಕಲಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿಲ್ಲ. ಕೆಲವೆಡೆ ಸ್ಥಳೀಯ ಅಧಿಕಾರಿಗಳು, ಸಂಘ ಸಂಸ್ಥೆಗಳು, ಪೋಷಕರ ಸಹಕಾರದೊಂದಿಗೆ ಕೆಲ ಶಾಲೆಗಳಲ್ಲಿ ಕರಾಟೆ ಕಲಿಸಲು ಅವಕಾಶ ನೀಡಿರಬಹುದು. ಆದರೂ, ನಿಮ್ಮ ಸಲಹೆ ಉಪಯುಕ್ತವಾಗಿದ್ದು ಇದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಸ್ಯಾನಿಟರಿ ನ್ಯಾಪ್‌ಕಿನ್ ಬಂದಿಲ್ಲ: 

ಶಾಲಾ ಮಕ್ಕಳಿಗೆ 'ಶುಚಿ' ಯೋಜನೆಯಡಿ ಸಿಗಬೇಕಾದ ಸ್ಯಾನಿಟರಿ ನ್ಯಾಪ್‌ಕಿನ್ ಸರಿಯಾಗಿ ಸರಬರಾಜಾಗುತ್ತಿಲ್ಲ, ಪ್ರತೀ ತಿಂಗಳು ನೀಡಬೇಕಾದನ್ಯಾಪ್ಕಿನ್ ಅನ್ನು ಇದುವರೆಗೆ ಒಂದು ತಿಂಗಳಷ್ಟೇ ನೀಡಲಾಗಿದೆ. ಕೆಲವೆಡೆ ಶಾಲೆಗಳಿಗೆ ಬಂದಿದ್ದರೂ ಶಿಕ್ಷಕರು ಕೊಡುತ್ತಿಲ್ಲ ಎಂದು ಅನೇಕ ವಿಧ್ಯಾರ್ಥಿನಿಯರು ಆರೋಪಿಸಿದ ಘಟನೆ ನಡೆಯಿತು. ಇದಕ್ಕೆ ರಿತೇಶ್ ಕುಮಾರ್ ಅವರು, ಆರೋಗ್ಯ ಇಲಾಖೆಯ ಗಮನಕ್ಕೆ ನ್ಯಾಪ್‌ಕಿನ್ ಸಮಸ್ಯೆ ಪರಿಹರಿಸಲಾಗುವುದು. ಶೌಚಾಲಯ ವಿಸ್ತೀರ್ಣ ದೊಡ್ಡದು ಮಾಡಲು ಚರ್ಚಿಸುತ್ತೇವೆ ಎಂದರು.

click me!