ಬೆಂಗಳೂರಿನಲ್ಲಿ 'ಸ್ಟೈಲ್ ಐಕಾನ್‌ ಆಫ್‌ ದಿ ಇಯರ್‌' ಕಾರ್ಯಕ್ರಮ

Jan 14, 2023, 12:25 PM IST

ಸಿಲಿಕಾನ್ ಸಿಟಿಯಲ್ಲಿ ವರ್ಷದ ಸ್ಟೈಲ್ ಐಕಾನ್‌ ಸ್ಪರ್ಧಾತ್ಮಕ ಕಾರ್ಯಕ್ರಮ ನಡೆಯಿತು. ಯೋಜನೆ ಸೃಜನ ಶೀಲತೆ, ಸ್ವಂತಿಕೆ  ಶೈಲಿಯ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಯಿತು. ಬೌರಿಂಗ್‌ ಇನ್ಸ್‌ಟಿಟ್ಯೂಟ್‌ನ ಓಪನ್‌ ಸ್ಟೇಜ್‌ನಲ್ಲಿ ಗ್ರಾಂಡ್‌ ಫಿನಾಲೆ ನಡೆದಿದ್ದು, 18 ರಿಂದ 25 ವಯಸ್ಸಿನ ಯುವ ಉದಯೋನ್ಮಕ ಪ್ರತಿಭೆಗಳಿಗೆ ವೇದಿಕೆ ಮೇಲೆ ಅವಕಾಶ ಕಲ್ಪಿಸಲಾಗಿತ್ತು. ರ್ಯಾಂಪ್‌ ಮೇಲೆ 100ಕ್ಕೂ ಹೆಚ್ಚು ಪ್ರತಿಭೆಗಳು ಹೆಜ್ಜೆ ಹಾಕಿದರು‌.  ಮನಮೋಹಕ ಉಡುಗೆ ತೊಟ್ಟು ಲಲನೆಯರ ರ್ಯಾಂಪ್‌ ವಾಕ್‌ ನಡೆಯಿತು‌. ಬೆಂಗಳೂರಿನ 20ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಕೋಲಾರದಲ್ಲಿ ಸಿದ್ದರಾಮಯ್ಯ ಹರಕೆಯ ಕುರಿ: ಟಗರಿಗೆ ಹೆಚ್.ಡಿ ಕುಮಾರಸ್ವಾಮ ...