ಬಾಲಿವುಡ್, ಹಾಲಿವುಡ್ ಎಲ್ಲೆಲ್ಲೂ ಸದ್ದು ಮಾಡ್ತಿರೋ ಈ ಸೂಪರ್ ಸ್ಟಾರ್ ಯಾರು ಗೆಸ್ ಮಾಡಿ

First Published | Oct 1, 2024, 3:52 PM IST

ಇಲ್ಲಿ ಕಾಣಿಸ್ತಿರೊ ಪುಟಾಣಿಯ ಫೋಟೊ ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಮಿಂಚಿದ ಸೂಪರ್ ಸ್ಟಾರ್ ಬಾಲ್ಯದ ಫೋಟೊ, ಇವರು ಯಾರು ಗೆಸ್ ಮಾಡ್ತೀರಾ? 
 

ಬಾಯ್ ಕಟ್ ಹೇರ್ ಸ್ಟೈಲ್, ಕಣ್ಣಿನಲ್ಲಿ ಅದೇ ಹೊಳಪು, ಮುಖದಲ್ಲಿ ಮುಗ್ಧತೆ, ಟೀ ಶರ್ಟ್ ಮೇಲೆ ಬೆಲ್ಟ್ ಬರುವಂತಹ ಡ್ರೆಸ್ ಧರಿಸಿ, ಫೋಟೊಗೆ ಪೋಸ್ ನೀಡಿದ ಈ ಪುಟಾಣಿ ಯಾರು ಅನ್ನೋದು ಗೊತ್ತಾಯ್ತಾ ನಿಮಗೆ? ಇಲ್ಲಾ ಅಂದ್ರೆ ಈ ಲೇಖನ ಪೂರ್ತಿಯಾಗಿ ಓದಿ. 
 

ಇವರ ಕಣ್ಣು ನೋಡಿದ್ರೇನೆ ಯಾರು ಅಂತ ಹೇಳಬಹುದು, ಅದ್ರೂ ಒಂದಷ್ಟು ಕ್ಲೂ ಕೊಡ್ತೀನಿ ನೋಡಿ. ಇವರು ಬಾಲಿವುಡ್ ನಲ್ಲಿ ಮಿಂಚಿದ ಸೂಪರ್ ಸ್ಟಾರ್ (Bollywood Superstar). ನಂತರ ಹಾಲಿವುಡ್ ಗೂ ಹಾರಿ, ಅಲ್ಲೂ ಇವತ್ತಿಗೂ ಬ್ಯುಸಿಯಾಗಿರೋ ಇವರು ತಮಗಿಂತ 15 ವರ್ಷ ಸಣ್ಣ ವಯಸ್ಸಿನವರನ್ನ ಮದ್ವೆಯಾಗಿ ಸುದ್ದಿಯಲ್ಲಿದ್ದರು. 
 

Tap to resize

ಈವಾಗ ಯಾರು ಅಂತ ಗೊತ್ತಾಗಿರ್ಬೇಕು ಅಲ್ವಾ? ಇವರೆ ಬಾಲಿವುಡ್ ಬ್ಯೂಟಿ, ಸದ್ಯ ಪತಿಯ ಜೊತೆ ವಿದೇಶದಲ್ಲಿ ನೆಲೆಸಿ, ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra). ಪಿಗ್ಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಾಲ್ಯದ ಫೋಟೊವನ್ನು ಶೇರ್ ಮಾಡೋ ಮೂಲಕ ತಮ್ಮ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ ಈ ಬ್ಯೂಟಿ, 
 

ಈ ಪೋಸ್ಟ್ನಲ್ಲಿ, ಪ್ರಿಯಾಂಕಾ ಚೋಪ್ರಾ ತಮ್ಮ ಬಾಲ್ಯದ ಫೋಟೋ (Childhood Photo)ಮತ್ತು ಹದಿಹರೆಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದೆಡೆ, ಈ ಪೋಸ್ಟ್ನಲ್ಲಿ ಬಾಯ್ ಕಟ್ ಹೇರ್ ಸ್ಟೈಲ್ ಹೊಂದಿರುವ ಪುಟ್ಟ ಹುಡುಗಿಯನ್ನು ಕಾಣಬಹುದು, ಆ ಫೋಟೊ ನೋಡಿದ್ರೆ ಯಾರಾದ್ರೂ ಹುಡುಗ ಅಂತ ತಪ್ಪಾಗಿ ಅರ್ಥಮಾಡಿಕೊಳ್ಳಬಹುದು, ಮತ್ತೊಂದು ಫೋಟೊದಲ್ಲಿ ಪ್ರಿಯಾಂಕಾ ಚೋಪ್ರಾ ಮಿಸ್ ಇಂಡಿಯಾ ವಿನ್ನರ್ ಆಗಿರುವ ಸಂದರ್ಭದಲ್ಲಿ ತೆಗೆದುಕೊಂಡಿರುವ ಫೋಟೊ ಆಗಿದೆ. 

ಪ್ರಿಯಾಂಕಾ ಚೋಪ್ರಾ ಈ ಪೋಸ್ಟ್ನ ಕ್ಯಾಪ್ಶನ್ ನಲ್ಲಿ, "ದಯವಿಟ್ಟು ನನ್ನ 9 ವರ್ಷ ವಯಸ್ಸಿನ ಲುಕ್ ನೋಡಿ ಯಾರೂ ಟ್ರೋಲ್ ಮಾಡಬೇಡಿ ಎಂದು ಮನವಿ ಮಾಡಿಕೊಂಡು ನಂತರ ತಮ್ಮ ಜರ್ನಿ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ಕಟೋರಿ ಕಟ್ ನಿಂದ ಬಾಯ್ ಕಟ್ ಮಾಡಿಸಿಕೊಂಡಾಗ ತನಗೆ ಎಷ್ಟೊಂದು ಸಂತೋಷವಾಗಿತ್ತು ಅನ್ನೋದನ್ನೂ ಸಹ ಪಿಗ್ಗಿ ಹೇಳಿದ್ದಾರೆ. 

ಪ್ರಿಯಾಂಕ ಚೋಪ್ರಾ ಪೂರ್ತಿ ಕ್ಯಾಪ್ಶನ್ ಹೀಗಿತ್ತು : ಎಚ್ಚರಿಕೆ: ನನ್ನ 9 ವರ್ಷದ ಲುಕ್ ನ್ನು ಟ್ರೋಲ್ ಮಾಡಬೇಡಿ. "ಪ್ರೌಢಾವಸ್ಥೆ ಮತ್ತು ಟೀನೇಜ್ ಹುಡುಗಿಯನ್ನು (Teenage Girl) ಎಷ್ಟು ಬದಲಾಯಿಸಬಹುದು ಎಂದು ಈಗ ಯೋಚನೆ ಮಾಡೋದೆ ಕ್ರೇಜಿ ಎನಿಸುತ್ತಿದೆ. ಎಡಭಾಗದಲ್ಲಿ ನಾನು, ನನ್ನ ವಿಚಿತ್ರ ಹದಿಹರೆಯದ ದಿನಗಳಲ್ಲಿ ಕಟೋರಿ ಕಟ್ ನಿಂದ ಬಾಯ್ ಕಟ್ ಗೆ ಬದಲಾಗಿ ನನಗೆ ಮೊದಲು ಗೆಲುವು ಸಿಕ್ಕ ಸಮಯ.

ಬಲಭಾಗದಲ್ಲಿ ನನಗೆ 17 ವರ್ಷ, ನಾನು 2000 ರಲ್ಲಿ ಮಿಸ್ ಇಂಡಿಯಾ (Miss India) ಕಿರೀಟವನ್ನು ಗೆದ್ದಾಗ ಮತ್ತು ನನ್ನ ಗೆಲುವನ್ನು ನನ್ನ ಕೂದಲು, ಮೇಕಪ್ ಮತ್ತು ಉಡುಗೆಯೊಂದಿಗೆ ಆಚರಿಸುತ್ತಿದ್ದೆ. ಈ ಎರಡೂ ಫೋಟೋಗಳನ್ನು 10 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ತೆಗೆದುಕೊಳ್ಳಲಾಗಿದೆ. ಬ್ರಿಟ್ನಿ ಸ್ಪಿಯರ್ಸ್ ಹೇಳಿದಂತೆ, "ನಾನು ಈಗ ಹುಡುಗಿಯಲ್ಲ, ಅಥವಾ ನಾನು ಈಗ ಮಹಿಳೆಯೂ ಅಲ್ಲ. ನಾನು ಮನರಂಜನೆಯ ವಿಶಾಲ ಜಗತ್ತಿಗೆ ಕಾಲಿಡುವಾಗ ನನಗೆ ಅದೇ ಅನಿಸಿತು ಎಂದು ಹೇಳಿದ್ದಾರೆ ಪಿಗ್ಗಿ. 

ನನ್ನ ಯಂಗರ್ ಸೆಲ್ಫ್ ನ್ನು ಹಿಂತಿರುಗಿ ನೋಡುವುದು ಇಂದು ನನ್ನ ಬಗ್ಗೆ ಕರುಣೆ ತೋರುತ್ತದೆ. ನಿಮ್ಮ ಯಂಗರ್ ಸೆಲ್ಫ್ ಬಗ್ಗೆ ಯೋಚಿಸಿ ಮತ್ತು ಅವಳು ನಿಮಗಾಗಿ ಏನು ಮಾಡಿದ್ದಾಳೆ ಅನ್ನೋದನ್ನ ನೆನಪಿಸಿ, ಇವತ್ತು ನೀವು ಯಾವ ಸ್ಥಾನದಲ್ಲಿದ್ದೀರೋ ಅಲ್ಲಿಗೆ ಬರೋದಕ್ಕೆ ನಿಮ್ಮ ಬಾಲ್ಯ ತುಂಬಾನೆ ಸಹಾಯ ಮಾಡಿದೆ ಎಂದು ಮುದ್ದಾದ ಸಾಲುಗಳನ್ನು ಬರೆದಿದ್ದಾರೆ. 
 

Latest Videos

click me!