ಬೆಂಗಳೂರಿಗರೇ ಹುಷಾರ್, ಯಾವುದೇ ಸಂಪರ್ಕವಿಲ್ಲದೇ ಹರಡುತ್ತಿದೆ ಸೋಂಕು

Apr 18, 2020, 3:25 PM IST

ಬೆಂಗಳೂರು(ಏ.18): ಬೆಂಗಳೂರಿನ ಜನರು ಅತ್ಯಂತ ಎಚ್ಚರಿಕೆ ಇರುವಂತಹ ಅಗತ್ಯವಿದೆ. ಶ್ವಾಸಕೋಶದ ಸಮಸ್ಯೆ, ಉಸಿರಾಟದ ಸಮಸ್ಯೆ ಇದ್ದವರು ಎಚ್ಚರಿಕೆ ವಹಿಸಬೇಕಿದೆ.

ಬೆಂಗಳೂರಿನಲ್ಲಿ ಸಾರಿ(SARI)ಪ್ರಕರಣಗಳು ಹೆಚ್ಚುತ್ತಿವೆ. ಯಾರದೇ ಸಂಪರ್ಕವಿಲ್ಲದೆ ಸೋಂಕು ಬಾಧಿಸಿದವರ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಿದೆ. 85 ಸೋಂಕಿತರು ಬೆಂಗಳೂರಿನಲ್ಲಿದ್ದು, ಇವರಲ್ಲಿ 13 ಜನ ಸಾರಿ ಸೋಂಕಿತರು ಎಂಬುದು ತಿಳಿದು ಬಂದಿದೆ.

ಬಿಎಸ್‌ವೈ ಸುದ್ದಿಗೋಷ್ಠಿ: ರಾಜ್ಯದಲ್ಲಿ ಲಾಕ್‌ಡೌನ್ ಭಾಗಶಃ ಸಡಿಲ...!

ತೀವ್ರ ಉಸಿರಾಟ ಸಮಸ್ಯೆ ಇದ್ದವರಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದ್ದು, ಹೆಚ್ಚಿನ ಜಾಗೃತೆ ವಹಿಸಬೇಕಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಕೆಲವು ಸ್ಥಳಗಳನ್ನು ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿದೆ.