ಹಾಫ್‌ ಹೆಲ್ಮೆಟ್‌ ನಿಷೇಧಿಸುವಂತೆ ಸರ್ಕಾರಕ್ಕೆ ನಿಮ್ಹಾನ್ಸ್‌ ಶಿಫಾರಸು..!

Jan 27, 2022, 11:10 AM IST

ಬೆಂಗಳೂರು(ಜ.27):  ರಾಜ್ಯದಲ್ಲಿ ಇನ್ಮುಂದೆ ಹಾಫ್‌ ಹೆಲ್ಮೆಟ್‌ ಧರಿಸಿದರೆ ದಂಡ ಬೀಳುತ್ತೆ. ಹೌದು, ಹಾಫ್‌ ಹೆಲ್ಮೆಟ್‌ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ನಿಮ್ಹಾನ್ಸ್‌ ಶಿಫಾರಸು ಮಾಡಿದೆ. ನಿಮ್ಹಾನ್ಸ್‌ ತಜ್ಞರು ಬರೋಬ್ಬರಿ 1 ಲಕ್ಷ ಬೈಕ್‌ ಸವಾರರ ಸರ್ವೇ ನಡೆಸಿದ್ದಾರೆ. ಬೆಂಗಳೂರು ಟ್ರಾಫಿಕ್‌ ಪೊಲೀಸರ ಜತೆ ನಿಮ್ಹಾನ್ಸ್‌ ತಜ್ಞರು ಸರ್ವೇ ನಡೆಸಿ ಹಾಫ್‌ ಹೆಲ್ಮೆಟ್‌ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆವರೆಗೆ ಬೆಂಗಳೂರಿನಲ್ಲಿ ಸರ್ವೇ ನಡೆಸಿದೆ. ಬೆಂಗಳೂರಿನ ಶೇ. 26 ರಷ್ಟು ಸವಾರರು ಹಾಫ್‌ ಹೆಲ್ಮೆಟ್‌ ಬಳಕೆ ಮಾಡುತ್ತಾರೆ. ಅಪಘಾತವಾದಾಗ ಕ್ಯಾಪ್‌ ಹೆಲ್ಮೆಟ್‌ ಧರಿಸಿದ್ರೂ ಗಂಭೀರವಾದ ಗಾಯಗಳಾಗುತ್ತವೆ. ಹೀಗಾಗಿ ಹಾಫ್‌ ಹೆಲ್ಮೆಟ್‌ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ನಿಮ್ಹಾನ್ಸ್‌ ಶಿಫಾರಸು ಮಾಡಿದೆ. 

UP Elections 2022: ಉತ್ತರಪ್ರದೇಶದಲ್ಲಿ ಹಿಂದುತ್ವಕ್ಕೆ ಜೈ ಎಂದ ಓವೈಸಿ : 4 ಹಿಂದೂ ಅಭ್ಯರ್ಥಿಗಳಿಗೆ ಟಿಕೇಟ್!