ಯಾವೆಲ್ಲಾ ದೇಶಗಳ ಜನ ದೀರ್ಘಾಯಸ್ಸು ಹೊಂದಿರುತ್ತಾರೆ ಗೊತ್ತಾ?

First Published | May 5, 2024, 4:44 PM IST

ಸರಾಸರಿ ಜೀವಿತಾವಧಿಯು ಪ್ರಸ್ತುತ ಮರಣ ಪ್ರಮಾಣಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯು ಬದುಕುವ ನಿರೀಕ್ಷೆಯಿರುವ ಸರಾಸರಿ ವರ್ಷಗಳ ಅಂಕಿಅಂಶದ ಅಂದಾಜು ಆಗಿದೆ. ಪ್ರಪಂಚದ ಯಾವ ದೇಶದ ಜನರು ಹೆಚ್ಚು ದೀರ್ಘಾಯಸ್ಸು ಹೊಂದಿದ್ದಾರೆ ಅನ್ನೋದನ್ನು ನೋಡೊಣ. 

ಸಿಂಗಾಪುರ್ (Singapore) : ಸುಧಾರಿತ ವೈದ್ಯಕೀಯ ವ್ಯವಸ್ಥೆ ಮತ್ತು ಸರಾಸರಿ ಜೀವಿತಾವಧಿ 84.39 ಹೊಂದಿರುವ ಸಿಂಗಾಪುರ ದೀರ್ಘಾಯಸ್ಸು ಹೊಂದಿರುವ ಜನರಿರುವ ದೇಶಗಳ ಲಿಸ್ಟ್ ನಲ್ಲಿ 7 ನೇ ಸ್ಥಾನದಲ್ಲಿದೆ. 

ಸ್ವಿಟ್ಜರ್ಲ್ಯಾಂಡ್ (Switzerland) : ಅತ್ಯಂತ ಸುರಕ್ಷಿತವಾಗಿರುವ, ನೆಮ್ಮದಿಯಾಗಿರುವ ಜೊತೆಗೆ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಸ್ವಿಟ್ಜರ್ಲ್ಯಾಂಡ್ 84.52 ಸರಾಸರಿ ಜೀವಿತಾವಧಿಯೊಂದಿಗೆ 6 ನೇ ಸ್ಥಾನದಲ್ಲಿದೆ. 
 

Tap to resize

ಲಿಚೆನ್ಸ್ಟೇನ್ (Lichtenstein) : ಉನ್ನತ ಜೀವನ ಮಟ್ಟವನ್ನು ಹೊಂದಿರುವ ರಾಷ್ಟ್ರವಾದ ಲಿಚೆನ್ಸ್ಟೇನ್ 84.92 ಸರಾಸರಿ ಜೀವಿತಾವಧಿಯೊಂದಿಗೆ 5 ನೇ ಸ್ಥಾನದಲ್ಲಿದೆ. ಇಲ್ಲಿನ ಜನರು ಹೆಚ್ಚು ಕಾಲ ಬದುಕುತ್ತಾರೆ. 
 

ಜಪಾನ್ (Japan) : 5 ನೇ ಸ್ಥಾನ ಜಪಾನ್ ಇದೆ. ಇಲ್ಲಿನ ಜನರು ಸಕ್ರಿಯ ಜೀವನಶೈಲಿಯನ್ನು ಅನುಸರಿಸುತ್ತಾರೆ. ಜೊತೆಗೆ ಆರೋಗ್ಯಕರ ಆಹಾರ ಕೂಡ ಸೇವಿಸುತ್ತಾರೆ. ಈ  ದೇಶದ ಸರಾಸರಿ ಜೀವಿತಾವಧಿ 85.08. 
 

ಮಕಾವು (Macau) : ಮಕಾವು ಸರಾಸರಿ ಜೀವಿತಾವಧಿ 85.65 ಆಗಿದ್ದು, ಅತಿ ಹೆಚ್ಚು ಜೀವಿತಾವಧಿಯನ್ನು ಹೊಂದಿರುವ ರಾಷ್ಟ್ರಗಳಲ್ಲಿ 6 ನೇ ಸ್ಥಾನದಲ್ಲಿದೆ. ಚೀನಾದ ಈ ದೇಶ ಅತ್ಯಂತ ಶ್ರೀಮಂತ ದೇಶವೂ ಹೌದು. 
 

ಹಾಂಗ್ ಕಾಂಗ್ (Hong Kong) : 85.96 ಸರಾಸರಿ ಜೀವಿತಾವಧಿಯೊಂದಿಗೆ ಹಾಂಗ್ ಕಾಂಗ್ ಟಾಪ್ 2 ಸ್ಥಾನವನ್ನು ಪಡೆದಿದೆ. ಹೆಚ್ಚು ಜನಸಂಖ್ಯೆಯುಳ್ಳ ಈ ದೇಶದಲ್ಲಿ ಜನರ ಜೀವಿತಾವಧಿ ಕೂಡ ಹೆಚ್ಚಾಗಿದೆ. 

ಮೊನಾಕೊ (Monaco) : ಮೊನಾಕೊ 87.14 ಸರಾಸರಿ ಜೀವಿತಾವಧಿಯೊಂದಿಗೆ ದೀರ್ಘಾಯಸ್ಸು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿನ ಮಹಿಳೆಯರು ಸುಮಾರು 93 ವರ್ಷಗಳವರೆಗೆ ಆರೋಗ್ಯವಾಗಿ ಬದುಕುತ್ತಾರೆ, ಇನ್ನು ಇಲ್ಲಿನ ಪುರುಷರು 85 ವರ್ಷಗಳವರೆಗೆ ಬದುಕುತ್ತಾರೆ. 
 

Latest Videos

click me!