ಭಾಮಾ ಹರೀಶ್ ಮಗಳ ಮದುವೆಯದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು

Published : May 05, 2024, 04:37 PM ISTUpdated : May 05, 2024, 04:39 PM IST

ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಮಗಳ ಮದುವೆ, ಆರತಕ್ಷತೆ ಕಾರ್ಯಕ್ರಮಗಳಲ್ಲಿ ಮಿಂಚಿದ ಸ್ಯಾಂಡಲ್ ವುಡ್ ತಾರೆಯರು. 

PREV
110
ಭಾಮಾ ಹರೀಶ್ ಮಗಳ ಮದುವೆಯದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು

ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಭಾಮಾ ಹರೀಶ್ (BA MA Harish)ಮಗಳ ಮದುವೆ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದ್ದು, ಮದುವೆ ಮತ್ತು ಆರತಕ್ಷತೆ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ತಾರೆಯರು ಮಿಂಚಿದ್ದಾರೆ. 

210

ಭಾಮಾ ಹರೀಶ್ ಮಗಳು ಪ್ರಿಯಾಂಕಾ ಅವರು ಸಾತ್ವಿಕ್ ಅವರನ್ನು ಮದುವೆಯಾಗಿದ್ದಾರೆ. ಸಂಪ್ರದಾಯಬದ್ಧವಾಗಿ ಅದ್ಧೂರಿಯಾಗಿ ಭಾಮಾ ಹರೀಶ್ ತಮ್ಮ ಮಗಳ ಮದುವೆ ಮಾಡಿದ್ದಾರೆ. 

310

ಇನ್ನು ಭಾಮಾ ಹರೀಶ್ ಪುತ್ರಿ ಪ್ರಿಯಾಂಕಾ (Priyanka) ಮತ್ತು ಅಳಿಯ ಸಾತ್ವಿಕ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಅಷ್ಟೇ ಅಲ್ಲದೆ ಈ ಜೋಡಿಯದ್ದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಎನ್ನುವ ಬಗ್ಗೆಯೂ ತಿಳಿದಿಲ್ಲ. 

410

ಭಾಮಾ ಹರೀಶ್ ನಟ ದರ್ಶನ್ ತೂಗ್ ದೀಪ ನಟನೆಯ ‘ಮೆಜೆಸ್ಟಿಕ್’ , ‘ಮಾಗಡಿ’, ‘ಮಿ ಬಕ್ರಾ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದರು. 

510

ಭಾಮಾ ಹರೀಶ್ ಅವರ ಮಗಳ ಅದ್ಧೂರಿ ಮದುವೆ, ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿರುವ ಸ್ಯಾಂಡಲ್ ವುಡ್ ನ ಅತಿಥಿಗಳ ಸುಂದರ ಫೋಟೋಗಳು ಇಲ್ಲಿವೆ. 

610

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಆತ್ಮೀಯರನು ಹೊಂದಿದ್ದ ಭಾಮಾ ಹರೀಶ್ ಅವರ ಮಗಳ ಮದುವೆಗೆ ಹಿರಿಯ ನಟ ಅನಂತ್ ನಾಗ್, ವಸಿಷ್ಠ ಸಿಂಹ, ಅದಿತಿ ಪ್ರಭುದೇವ-ಯಶಸ್ ಪಟ್ಲಾ ದಂಪತಿ, ಸುಂದರ್ ರಾಜ್, ಅಶ್ವಿನಿ ಪುನೀತ್ ರಾಜ್‌ಕುಮಾರ್,  ಮೊದಲಾದವರು ಆಗಮಿಸಿದ್ದರು. 

710

ಅಲ್ಲದೇ ರಾಕ್ ಲೈನ್ ವೆಂಕಟೇಶ್, ಮಾಸ್ಟರ್ ಮಂಜುನಾಥ್, ನಿರ್ಮಾಪಕ ಮಂಜು, ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ, ಅವರ ತಂದೆ ರಾಮಕೃಷ್ಣ, ರಾಗಿಣಿ ದ್ವಿವೇದಿ, ಅಭಿಜಿತ್, ಶಶಿಕುಮಾರ್ ಮೊದಲಾದವರು ಆಗಮಿಸಿ ಶುಭ ಹಾರೈಸಿದ್ದರು. 
 

810

ಇನ್ನು ಕನ್ನಡ ನಟ ಅಜಯ್ ರಾವ್, ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮೀ , ನಟ ಹರೀಶ್ ರಾಜ್, ಸೃಜನ್ ಲೋಕೇಶ್, ಅಶ್ವಿತಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ, ನವೀನ್ ಕೃಷ್ಣ, ವನಿತಾ ವಾಸು, ಪೂಜಾ ಗಾಂಧಿ ಕೂಡ ಆಗಮಿಸಿದ್ದರು. 
 

910

ಜೊತೆಗೆ ನಟಿ ಶ್ರುತಿಯವರ ತಾಯಂದಿರಾದ ರಾಧಾ ಮತ್ತು ರುಕ್ಮಿಣಿ, ಸಹೋದರಿ, ಶ್ರೀನಗರ ಕಿಟ್ಟಿ, ಬಾಲಾಜಿ ಮನೋಹರ್,ಸೇರಿ ಹಲವು ಗಣ್ಯರು, ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದಾರೆ. 
 

1010

ಹಿರಿತೆರೆ ಮತ್ತು ಕಿರುತೆರೆಯಲ್ಲಿ ನಟನಾಗಿ, ನಿರ್ಮಾಪಕನಾಗಿ ಮಿಂಚುತ್ತಿರುವ ರಕ್ಷ್ ಗೌಡ ದಂಪತಿಗಳು ಸಹ ಆಗಮಿಸಿದ್ದರು. ಇನ್ನು ಅದಿತಿ ಪ್ರಭುದೇವ ಇದೇ ಮೊದಲ ಬಾರಿಗೆ ಮಗುವಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. 
 

Read more Photos on
click me!

Recommended Stories