ವಿಶ್ವದಲ್ಲೇ ಅತ್ಯಂತ ಸುರಕ್ಷಿತ ರಾಷ್ಟ್ರಗಳಿವು; ಇಲ್ಲಿ ನಿಮಗೆ ಯಾವ ಭಯವೂ ಇರೋಲ್ಲ

Published : May 05, 2024, 04:49 PM ISTUpdated : May 06, 2024, 02:12 PM IST

ಪ್ರಪಂಚದಲ್ಲಿ ಹೆಚ್ಚಿನ ದೇಶಗಳಲ್ಲಿ ದರೋಡೆ, ಕೊಲೆ, ಭಯೋತ್ಪಾದಕ ಸಂಖ್ಯೆಯೇ ಹೆಚ್ಚಾಗಿದ್ದು, ವಾಸಿಸೋಕೆ ಅಥವಾ ಒಬ್ಬರೇ ಹೋಗೋದಕ್ಕೆ ಭಯಪಡುವಂತಹ ಸ್ಥಿತಿ ಇರುತ್ತದೆ. ಇಂತಹ ದೇಶಗಳ ನಡುವೆ ಈ 10 ದೇಶಗಳು ಪ್ರಪಂಚದ ಅತ್ಯಂತ ಸುರಕ್ಷಿತ ರಾಷ್ಟ್ರಗಳ ಲಿಸ್ಟ್ ನಲ್ಲಿ ಸ್ಥಾನಪಡೆದಿವೆ. ಅವುಗಳ ಬಗ್ಗೆ ತಿಳಿಯೋಣ. 

PREV
110
ವಿಶ್ವದಲ್ಲೇ ಅತ್ಯಂತ ಸುರಕ್ಷಿತ ರಾಷ್ಟ್ರಗಳಿವು; ಇಲ್ಲಿ ನಿಮಗೆ ಯಾವ ಭಯವೂ ಇರೋಲ್ಲ

ಐಸ್ ಲ್ಯಾಂಡ್ (Iceland): ಇದು ಪ್ರಪಂಚದ ಅತ್ಯಂತ ಸುರಕ್ಷಿತ ದೇಶಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಕಳೆದ 14 ವರ್ಷಗಳಿಂದ ಗ್ಲೋಬಲ್ ಪಿಸ್ ಇಂಡೆಕ್ಸ್ ಪ್ರಕಾರ ಐಸ್ ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಐಸ್ಲ್ಯಾಂಡ್ ಅತ್ಯಂತ ಕಡಿಮೆ ಮಟ್ಟದ ಅಪರಾಧವನ್ನು ಹೊಂದಿದೆ,  ಅಲ್ಲಿನ ಜನರ ಉನ್ನತ ಜೀವನ ಮಟ್ಟ, ಸಣ್ಣ ಜನಸಂಖ್ಯೆ, ಅಪರಾಧದ ವಿರುದ್ಧ ಬಲವಾದ ಸಾಮಾಜಿಕ ವರ್ತನೆಗಳು, ಉತ್ತಮ ತರಬೇತಿ ಪಡೆದ ಪೊಲೀಸ್ ಪಡೆಯಲ್ಲಿ ಉನ್ನತ ಮಟ್ಟದ ನಂಬಿಕೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ವರ್ಗಗಳ ನಡುವೆ ಉದ್ವಿಗ್ನತೆಯ ಕೊರತೆ ಇರೋದರಿಂದಲೇ ಇದು ಸುರಕ್ಷಿತ ತಾಣ ಎನಿಸಿಕೊಂಡಿದೆ. 
 

210

ಡೆನ್ಮಾರ್ಕ್ (Denmark) : 2008 ರಿಂದಲೇ ಡೆನ್ಮಾರ್ಕ್ ಐದನೇ ಸ್ಥಾನದಲ್ಲಿತ್ತು, ಆದರೆ ಇದೀಗ ಎರಡನೇ ಸ್ಥಾನಕ್ಕೇರಿದೆ. ಮಕ್ಕಳು ಸೇರಿದಂತೆ ಹಗಲು ಅಥವಾ ರಾತ್ರಿಯ ಯಾವುದೇ ಸಮಯದಲ್ಲಿ ಜನರು ಸುರಕ್ಷಿತವೆಂದು ಫೀಲ್ ಮಾಡುವ ಕೆಲವೇ ದೇಶಗಳಲ್ಲಿ ಡೆನ್ಮಾರ್ಕ್ ಕೂಡ ಒಂದಾಗಿದೆ. ಡೆನ್ಮಾರ್ಕ್ ಉನ್ನತ ಮಟ್ಟದ ಸಮಾನತೆ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಜನಪ್ರಿಯತೆ ಪಡೆದಿದೆ. 
 

310

ಐರ್ ಲ್ಯಾಂಡ್ (Ireland): ಐರ್ಲೆಂಡ್ 2021 ರ ತನಕ 11ನೇ ಸ್ಥಾನದಲ್ಲಿತ್ತು. ಇದೀಗ ಐರ್ಲ್ಯಾಂಡ್ ಗಮನಾರ್ಹವಾಗಿ ಹೆಚ್ಚು ಶಾಂತಿಯುತವಾದ ಪರಿಣಾಮವಾಗಿ ಇದೀಗ ಮೂರನೇ ಸ್ಥಾನಕ್ಕೇರಿದೆ.. ಕೆಲವು ನಗರಗಳ ನೆರೆಹೊರೆಗಳ ಹೊರಗೆ ಅಪರಾಧವು ಸಾಕಷ್ಟು ಕಡಿಮೆಯಾಗಿದೆ. 
 

410

ನ್ಯೂಝಿಲ್ಯಾಂಡ್ (New Zealand): ಸೌತ್ ವೆಸ್ಟರ್ನ್ ಪೆಸಿಫಿಕ್ ಓಸಿಯನ್ ನಲ್ಲಿ ನೆಲೆಸಿರುವ ಈ ದ್ವೀಪ ದೇಶ ನಾಲ್ಕನೇ ಅತ್ಯಂತ ಸುರಕ್ಷಿತ ರಾಷ್ಟ್ರವಾಗಿದೆ. ನ್ಯೂಝಿಲ್ಯಾಂಡ್ ಅತ್ಯಂತ ಕಡಿಮೆ ಅಪರಾಧ ಪ್ರಮಾಣವನ್ನು ಹೊಂದಿದೆ, ಮತ್ತು ಹಿಂಸಾತ್ಮಕ ಅಪರಾಧವು ವಿಶೇಷವಾಗಿ ಅಪರೂಪ. ಕಳ್ಳತನದ ವಿರುದ್ಧ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಆದರೆ ಒಟ್ಟಾರೆ ಹೇಳೋದಾದರೆ ಕ್ರೈಂ ರೇಟ್ ಕಡಿಮೆ. 
 

510

ಆಸ್ಟ್ರಿಯಾ (Austria): ಸೆಂಟ್ರಲ್ ಯೂರೋಪ್ ನಲ್ಲಿರುವ ಆಸ್ಟ್ರೀಯಾದ ಐದನೇ ಸುರಕ್ಷಿತ ದೇಶವಾಗಿದೆ. ನಡೆಯುತ್ತಿರುವ ಸಾಮಾಜಿಕ ಅಶಾಂತಿಯ ಹಿನ್ನೆಲೆಯಲ್ಲಿ ಹಿಂಸಾತ್ಮಕ ಪ್ರದರ್ಶನಗಳು ಕೆಲವೊಮ್ಮೆ ಕಳವಳಕಾರಿಯಾಗಿ ಉಳಿದಿದ್ದರೂ, ಇವುಗಳನ್ನು ತಪ್ಪಿಸೋದು ಸಹ ಸುಲಭ, ಮತ್ತು ಇಲ್ಲದಿದ್ದರೆ, ಆಸ್ಟ್ರಿಯಾ ಭೇಟಿ ನೀಡಲು ಬಹಳ ಸುರಕ್ಷಿತ ದೇಶವಾಗಿದೆ. ಗಂಭೀರ ಅಪರಾಧಗಳು ಕೂಡ ತುಂಬಾ ಅಪರೂಪ. 
 

610

ಸಿಂಗಾಪುರ್ (Singapore) : ಆರನೇ ಸುರಕ್ಷಿತ ದೇಶವಾಗಿರುವ ಸಿಂಗಾಪುರದ ನಿವಾಸಿಗಳು ವೈಯಕ್ತಿಕ ಸುರಕ್ಷತೆಯ ಬಗ್ಗೆ ಹ್ಯಾಪಿಯಾಗಿದ್ದಾರೆ ಮತ್ತು ಇತರ ಯಾವುದೇ ದೇಶದ ನಿವಾಸಿಗಳಿಗಿಂತ ಕಾನೂನು ಜಾರಿಯಲ್ಲಿ ಹೆಚ್ಚು ಸಕಾರಾತ್ಮಕ ಅನುಭವಗಳನ್ನು ಹೊಂದಿದ್ದಾರೆ. ಸಿಂಗಾಪುರವು ವಿಶ್ವದಲ್ಲೇ ಅತ್ಯಂತ ಕಡಿಮೆ ಅಪರಾಧ ಪ್ರಮಾಣವನ್ನು ಹೊಂದಿದೆ, ಬಹುಶಃ ಸಣ್ಣ ಅಪರಾಧಗಳಿಗೆ ಸಹ ನೀಡಲಾಗುವ ಕಠಿಣ ದಂಡಗಳಿಂದಾಗಿ ಇಲ್ಲಿ ಅಪರಾಧ ಕಡಿಮೆ. ಸರ್ಕಾರ ಮತ್ತು ಪೊಲೀಸರು ಬಂದೂಕುಗಳು ಮತ್ತು ಇತರ ಹಾನಿಕಾರಕ ಆಯುಧಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಾರೆ, ಮತ್ತು ಹಿಂಸಾತ್ಮಕ ಮತ್ತು ಘರ್ಷಣೆಯ ಅಪರಾಧಗಳು ಸಿಂಗಾಪುರದಲ್ಲಿ ಅಪರೂಪ.
 

710

ಪೋರ್ಚುಗಲ್ (Portugal):  ಸುರಕ್ಷಿತ ದೇಶಗಳ ಪೈಕಿ ಪೋರ್ಚುಗಲ್ 7ನೇ ಸ್ಥಾನದಲ್ಲಿದೆ. ಈ ದೇಶ ಸಶಸ್ತ್ರ ಪೊಲೀಸರನ್ನು ಹೊಂದಿದೆ; ಆದಾಗ್ಯೂ, ಹೆಚ್ಚಿದ ಪೊಲೀಸ್ ಉಪಸ್ಥಿತಿಯು ದೇಶದಲ್ಲಿ ಅಪರಾಧ ಪ್ರಮಾಣವನ್ನು ಕಡಿಮೆ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ, ಪೋರ್ಚುಗಲ್ ಆರ್ಥಿಕ ಪುನರುತ್ಥಾನವನ್ನು ಅನುಭವಿಸಿದೆ, ಅದರ ನಿರುದ್ಯೋಗ ದರ 17% ದಿಂದ 7% ಕ್ಕೆ ಇಳಿದಿದೆ. 
 

810

ಸ್ಲೋವೆನಿಯಾ (Slovenia): ಸ್ಲೊವೇನಿಯಾ ಉನ್ನತ ಸುರಕ್ಷತಾ ಶ್ರೇಯಾಂಕವನ್ನು ಹೊಂದಿದೆ, ಇದು ಮೂರು ವಿಭಾಗಗಳಲ್ಲಿ ಅಂದರೆ ಪ್ರಯಾಣ ಭದ್ರತೆ, ವೈದ್ಯಕೀಯ ಅಪಾಯಗಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸುತ್ತೆ. ಅನೇಕ ಸ್ಲಾವಿಕ್ ರಾಜ್ಯಗಳಂತೆ, ಸ್ಲೊವೇನಿಯಾ 1990 ರ ದಶಕದ ಮಧ್ಯಭಾಗದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸಿತು ಮತ್ತು ಈಗ ಸುರಕ್ಷತೆ ಮತ್ತು ಸುಸ್ಥಿರತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಿದೆ.
 

910

ಜಪಾನ್ (Japan): ಸುರಕ್ಷಿತ ದೇಶಗಳ ಪಟ್ಟಿಯಲ್ಲಿ ಜಪಾನ್ 9ನೇ ಸ್ಥಾನದಲ್ಲಿದೆ.  ಕಡಿಮೆ ಅಪರಾಧ ಪ್ರಮಾಣಗಳು, ಕನಿಷ್ಠ ಆಂತರಿಕ ಸಂಘರ್ಷ ಮತ್ತು ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲದ ರಾಜಕೀಯ ಅಶಾಂತಿಯಿಂದಾಗಿ ಇದು ಸುರಕ್ಷಿತ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. 
 

1010

ಸ್ವಿಟ್ಜರ್ಲ್ಯಾಂಡ್ (Switzerland): ಸರೋವರಗಳು, ಗ್ರಾಮಗಳು, ಬೆಟ್ಟಗುಡ್ಡ, ಒಟ್ಟಲ್ಲಿ ಸುಂದರ ಪ್ರಕೃತಿಯಿಂದ ಆವೃತವಾಗಿರುವ ಸ್ವಿಟ್ಜರ್ಲ್ಯಾಂಡ್ ಸುರಕ್ಷಿತ ತಾಣಗಳ ಪಟ್ಟಿಯಲ್ಲೂ ಸಹ ಸ್ಥಾನ ಪಡೆದಿದೆ. ಇಲ್ಲಿನ ಕ್ರೈಂ ರೇಟ್ ಕೂಡ ಕಡಿಮೆ. ಇಲ್ಲಿನ ಜನರು ನೆಮ್ಮದಿಯಿಂದ ವಾಸಿಸುತ್ತಾರೆ. 
 

Read more Photos on
click me!

Recommended Stories