ಚುಕ್ಕಿತಾರೆ: ಮಲ್ಲಿಕಾರ್ಜುನ ಸಾವು; ನವೀನ್ ಸಜ್ಜುಗೋಸ್ಕರ ಸೀರಿಯಲ್ ನೋಡ್ತಿದ್ದೋರಿಂದ ನಿರ್ದೇಶಕರಿಗೆ ಶಾಪ

Published : May 05, 2024, 04:52 PM ISTUpdated : May 06, 2024, 02:05 PM IST

ಚುಕ್ಕಿ ತಾರೆ ಸೀರಿಯಲ್ ನಲ್ಲಿ ಚುಕ್ಕಿಯ ತಂದೆ ಮಲ್ಲಿಕಾರ್ಜುನನ ಪಾತ್ರ ಕೊನೆಗೊಂಡಿದ್ದು, ನವೀನ್ ಸಜ್ಜು ಅವರ ಪಾತ್ರ ಇಷ್ಟು ಬೇಗ ಕೊನೆಗೊಂಡಿರೋದಕ್ಕೆ ಜನ ಕೋಪಗೊಂಡಿದ್ದಾರೆ.   

PREV
17
ಚುಕ್ಕಿತಾರೆ: ಮಲ್ಲಿಕಾರ್ಜುನ ಸಾವು; ನವೀನ್ ಸಜ್ಜುಗೋಸ್ಕರ ಸೀರಿಯಲ್ ನೋಡ್ತಿದ್ದೋರಿಂದ ನಿರ್ದೇಶಕರಿಗೆ ಶಾಪ

ಕಲರ್ಸ್ ಕನ್ನಡದಲ್ಲಿ (Colors Kannada)ಇತ್ತೀಚೆಗಷ್ಟೆ ಆರಂಭವಾದ ಪುಟಾಣಿ ಮಕ್ಕಳ ಕಥೆಯನ್ನು ಹೊತ್ತು ತಂದ ಧಾರಾವಾಹಿ ಚುಕ್ಕಿ ತಾರೆ.  ಅಪ್ಪ -ಮಗಳ ಬಾಂಧವ್ಯವನ್ನು ಒತ್ತಿ ಹೇಳಿದ ಸೀರಿಯಲ್ ಕೂಡ ಹೌದು, ಅಪ್ಪ ಮಗಳನ್ನು ವೀಕ್ಷಕರು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದರು. 
 

27

ಕಾಲೇ ಇಲ್ಲದ ಮಗಳನ್ನು ರಾಜಕುಮಾರಿಯಂತೆ ನೋಡಿಕೊಳ್ಳುವ ಸೈಕಲ್ ಸವಾರಿ ಮಾಡುವ ಅಪ್ಪ ಮಲ್ಲಿಕಾರ್ಜುನ, ಮಗಳ ಕಾಲಿನ ಚಿಕಿತ್ಸೆಗಾಗಿ ತನ್ನ ಕಿಡ್ನಿಯನ್ನೇ ಮಾರಿದ್ದನು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಅಪ್ಪನ ಬರ್ತ್ ಡೇಗೆ ಚುಕ್ಕಿ ಸರ್ಪ್ರೈಸ್ ತಯಾರಿ ಕೂಡ ನಡೆಸಿದ್ದಳು. 
 

37

ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿರುವ ಮಧ್ಯೆದಲ್ಲೇ ಚುಕ್ಕಿ ತಾರೆಯಲ್ಲಿ, ಚುಕ್ಕಿ ತಂದೆ ಮಲ್ಲಿಕಾರ್ಜುನ ಇಬ್ಬನಿಯ ತಂದೆಯ ಕಾರು ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾನೆ. 
 

47

ಮಲ್ಲಿಕಾರ್ಜುನನ ಪಾತ್ರದಲ್ಲಿ ಇಷ್ಟು ದಿನ ನವೀನ್ ಸಜ್ಜು(Naveen Sajju) ಅದ್ಭುತವಾಗಿ ನಟಿಸಿದ್ದರು. ಅಪ್ಪ ಮಗಳ ಸುಂದರ ಬಾಂಧವ್ಯಕ್ಕೆ, ನವೀನ್ ಸಜ್ಜು ನೈಜ್ಯ ಅಭಿನಯಕ್ಕೆ ಜನರು ತಲೆದೂಗಿದ್ದರು. ಆದರೆ ಇದೀಗ  ಮಲ್ಲಿಕಾರ್ಜುನ ಪಾತ್ರ ಕೊನೆಗೊಂಡಿದ್ದು, ವೀಕ್ಷಕರ ಕೋಪಕ್ಕೆ ಕಾರಣವಾಗಿದೆ. 
 

57

ಮಲ್ಲಿಕಾರ್ಜುನನ ಪಾತ್ರ ಕೊನೆಯಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ವೀಕ್ಷಕರು ನಿರ್ದೇಶಕರಿಗೆ ಬೈದು ಕಾಮೆಂಟ್ ಮಾಡಿದ್ದಾರೆ. ಯಾವನೋ ಅವನು ಡೈರೆಕ್ಟರ್ ಲೇ ಈ ತರ ಬೇಜಾರು ಮಾಡಿಸಬೇಡಿ, ತುಂಬಾ ಬೇಜರು ಆಗುತ್ತೆ.  ಧಾರವಾಹಿ ನೋಡೋಕೆ ಆಗ್ತಿಲ್ಲ ಎಂದಿದ್ದಾರೆ. 
 

67

ಮತ್ತೊಬ್ಬರು  ಮಲ್ಲಿಕಾರ್ಜುನನನ್ನು ಯಾಕೆ ಸಾಯಿಸಿಬಿಟ್ರಿ. ಕೆಂಡಸಂಪಿಗೆ ಯಲ್ಲಿ ರಾಜೇಶ್ ನನ್ನು ಹೀಗೆ ಸಡನ್ ಆಗಿ ಸಾಯಿಸಿದ್ದೀರಿ. ಹೀಗೆ ಮೈನ್ ಕ್ಯಾರೆಕ್ಟರ್ ಗಳನ್ನೇ ಇಲ್ಲ ಅನ್ನಿಸಿ ಬಿಡ್ತೀರ... ನಮಗೆ ಮಲ್ಲಿಕಾರ್ಜುನನೇ ಇಷ್ಟ ವಾಗಿತ್ತು . ಇಂತಹ ಕೆಟ್ಟ ಸೀರಿಯಲ್ ಯಾಕಾದ್ರೂ ಮಾಡ್ತೀರಾ. ಮಲ್ಲಿಕಾರ್ಜುನ ಇಲ್ಲದೇ ಸೀರಿಯಲ್ ನೋಡೋದೆ ವೇಸ್ಟ್ ಎಂದು ಹೇಳಿದ್ದಾರೆ. 
 

77

ಮತ್ತೊಬ್ಬರು ಮಲ್ಲಿಕಾರ್ಜುನಿಗಾಗಿಯೇ ಅಂದರೆ ನವೀನ್ ಸಜ್ಜು ಅವರಿಗೋಸ್ಕರನೇ ಈ ಸೀರಿಯಲ್ ನೋಡ್ತಾ ಇದ್ದದ್ದು, ಮತ್ತೆ ಮಲ್ಲಿಕಾರ್ಜುನ ಎದ್ದು ಬರೋ ಹಾಗೆ ಮಾಡಿ ಎಂದರೆ, ಇನ್ನೊಬ್ಬರು ಇನ್ನು ಮುಂದೆ ನಾನು ಈ ಸೀರಿಯಲ್ ನೋಡೋದೆ ಇಲ್ಲ ಎಂದು ಹೇಳಿದ್ದಾರೆ. 
 

Read more Photos on
click me!

Recommended Stories