ಈ ಬಾರಿಯ IPL ಸಮರ ಜೋರಾಗಿದೆ. ಹೈವೋಲ್ಟೇಜ್ ಪಂದ್ಯಗಳು ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡ್ತಿವೆ.ಮತ್ತೊಂದೆಡೆ ಪ್ಲೇ ಆಫ್ ಲೆಕ್ಕಾಚಾರ ಶುರುವಾಗಿದೆ. ಯುವ ಆಟಗಾರರು ಅದ್ಭುತ ಆಟದ ಮೂಲಕ ಅಬ್ಬರಿಸ್ತಿದ್ದಾರೆ. ಸೀನಿಯರ್ಗಳು ಕೂಡ ಯಂಗ್ಸ್ಟರ್ಗಳಿಗೆ ಸೆಡ್ಡು ಹೊಡೆಯುವಂತೆ ಮಿಂಚ್ತಿದ್ದಾರೆ. ಆದ್ರೆ, ಈ ನಡುವೆ ಕೆಲ ಅನುಭವಿ ಆಟಗಾರರಿಗೆ ಮಾತ್ರ ಫೀಲ್ಡ್ಗಿಳಿಯುವ ಚಾನ್ಸ್ ಸಿಕ್ಕಿಲ್ಲ.
ಬೆಂಗಳೂರು(ಮೇ.05) ವಿಶ್ವ ಕ್ರಿಕೆಟ್‌ನಲ್ಲಿ ಈ ನಾಲ್ವರು ಆಟಗಾರರು ತಮ್ಮ ಟ್ಯಾಲೆಂಟ್, ಅದ್ಭುತ ಆಟದ ಮೂಲಕ ಮಿಂಚಿದ್ದಾರೆ. ಹಲವು ಪಂದ್ಯಗಳಲ್ಲಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆದ್ರೆ, ಇಂತಹ ಆಟಗಾರರಿಗೆ ಈ ಬಾರಿಯ IPLನಲ್ಲಿ ಮಾತ್ರ ಅವಕಾಶವೇ ಸಿಗ್ತಿಲ್ಲ. ಯಾರು ಆ ಅವಕಾಶ ವಂಚಿತ ನಾಲ್ವರು ಆಟಗಾರರು ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ..
IPLನಲ್ಲಿ ಟ್ಯಾಲೆಂಟೆಡ್ ಪ್ಲೇಯರ್ಸ್ ಬೆಂಚ್‌ಗೆ ಸೀಮಿತ..!
ಈ ಬಾರಿಯ IPL ಸಮರ ಜೋರಾಗಿದೆ. ಹೈವೋಲ್ಟೇಜ್ ಪಂದ್ಯಗಳು ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡ್ತಿವೆ.ಮತ್ತೊಂದೆಡೆ ಪ್ಲೇ ಆಫ್ ಲೆಕ್ಕಾಚಾರ ಶುರುವಾಗಿದೆ. ಯುವ ಆಟಗಾರರು ಅದ್ಭುತ ಆಟದ ಮೂಲಕ ಅಬ್ಬರಿಸ್ತಿದ್ದಾರೆ. ಸೀನಿಯರ್ಗಳು ಕೂಡ ಯಂಗ್ಸ್ಟರ್ಗಳಿಗೆ ಸೆಡ್ಡು ಹೊಡೆಯುವಂತೆ ಮಿಂಚ್ತಿದ್ದಾರೆ. ಆದ್ರೆ, ಈ ನಡುವೆ ಕೆಲ ಅನುಭವಿ ಆಟಗಾರರಿಗೆ ಮಾತ್ರ ಫೀಲ್ಡ್ಗಿಳಿಯುವ ಚಾನ್ಸ್ ಸಿಕ್ಕಿಲ್ಲ.
ಮುಂಬೈ ಇಂಡಿಯನ್ಸ್ ನಾಕೌಟ್ ಸ್ಟೇಜ್‌ಗೆ ಎಂಟ್ರಿ ನೀಡದೇ ಇದ್ದದ್ದೇ ಒಳ್ಳೇದಾಯ್ತಾ..? ಟೀಮ್ ಇಂಡಿಯಾಗೆ ಲಾಭ..!
ಈವರೆಗೂ ಒಂದೇ ಒಂದು ಪಂದ್ಯವಾಡಿಲ್ಲ ಮೇಯರ್ಸ್..!
ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿರೋ ವೆಸ್ಟ್ ಇಂಡೀಸ್‌ನ ಕೈಲ್ ಮೇಯರ್ಸ್, ಈ IPLನಲ್ಲಿ ಈವರೆಗು ಒಂದೇ ಒಂದು ಪಂದ್ಯವಾಡಿಲ್ಲ. ಕಳೆದ ಸೀಸನ್ನಲ್ಲಿ ಮೇಯರ್ಸ್ ಅದ್ಭುತ ಪ್ರದರ್ಶನ ನೀಡಿದ್ರು. 13 ಪಂದ್ಯಗಳನ್ನಾಡಿ, 379 ರನ್ ಬಾರಿಸಿದ್ರು. ಆದ್ರೆ, ಈ ಬಾರಿ ಮೇಯರ್ಸ್ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಅಬ್ಬರಿಸ್ತಿದ್ದಾರೆ.
ಸ್ಫೋಟಕ ಬ್ಯಾಟರ್ ಪಿಲಿಫ್ಸ್‌ಗೂ ಸಿಕ್ಕಿಲ್ಲ ಚಾನ್ಸ್..!
ನ್ಯೂಜಿಲೆಂಡ್‌ನ ಸ್ಪೋಟಕ ಪ್ಲೇಯರ್ ಗ್ಲೇನ್ ಪಿಲಿಫ್ಸ್‌ಗೂ ಈ ಬಾರಿ IPLನಲ್ಲಿ ಆಡೋ ಚಾನ್ಸ್ ಸಿಕ್ಕಿಲ್ಲ. ಸನ್‌ರೈಸರ್ಸ್ ಹೈದರಭಾದ್ ತಂಡದಲ್ಲಿರೋ ಪಿಲಿಫ್ಸ್, ಕಳೆದ ವರ್ಷ 5 ಪಂದ್ಯಗಳನ್ನಾಡಿ, ಕೇವಲ 39 ರನ್‌ಗಳಿಸಿದ್ರು. ಈ ಬಾರಿ SRH ಬ್ಯಾಟಿಂಗ್ ಲೈನ್ ಅಪ್ ಸಖತ್ ಸ್ಟ್ರಾಂಗ್ ಆಗಿರೋದ್ರಿಂದ, ಪಿಲಿಫ್ಸ್‌ಗೆ ಇನ್ನು ಅಂಗಳಕ್ಕಿಳಿಯೋ ಅದೃಷ್ಟ ಕೂಡಿ ಬಂದಿಲ್ಲ.
ಟಿ20ಯಲ್ಲಿ ಕಿಂಗ್ಸ್ ಕೊಹ್ಲಿ ಹೊಸ ಮೈಲುಗಲ್ಲು..! ಈ ಸಾಧನೆ ಮಾಡಿದ ಮೊದಲ ಭಾರತೀಯ
ಈ ವರ್ಷವೂ ವೇಗಿ ನವ್‌ದೀಪ್ ಸೈನಿಗೆ ನಿರಾಸೆ..!
ಟೀಂ ಇಂಡಿಯಾ ಪರ 11 ಟಿ20 ಪಂದ್ಯಗಳನ್ನಾಡಿರೋ ವೇಗಿ ನವ್‌ದೀಪ್ ಸೈನಿ, IPL ಸೀಸನ್ 17ರಲ್ಲಿ ಸಿಂಗಲ್ ಮ್ಯಾಚ್ ಅಡಿಲ್ಲ. RCB ತಂಡದಲ್ಲಿದ್ದ ಸೈನಿ, 2022ರಲ್ಲಿ ನಡೆದ ಮೆಗಾ ಆಕ್ಷನ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡ್ರು. 2022 ಮತ್ತು 23ರಲ್ಲೂ ಸೈನಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಕಳೆದೆರೆಡು ವರ್ಷಗಳಲ್ಲಿ ಸೈನಿ ಆಡಿರೋದು ಕೇವಲ ಎರಡು ಪಂದ್ಯಗಳು ಮಾತ್ರ.
ಅಪ್ಘಾನಿಸ್ತಾನದ ಯಂಗ್ ಪ್ಲೇಯರ್, ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಕೂಡ ಈ ವರ್ಷ ಬೆಂಚ್ ಕಾಯ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಉತ್ತಮ ದಾಖಲೆ ಹೊಂದಿರೋ ಗುರ್ಬಾಜ್, ಕಳೆದ ವರ್ಷ KKR ಪರ ಮಿಂಚಿದ್ರು. 11 ಮ್ಯಾಚ್ಗಳಲ್ಲಿ ಬ್ಯಾಟಿಂಗ್ ಮಾಡಿ, 227 ರನ್ ಕಲೆಹಾಕಿದ್ರು. ಒಟ್ಟಿನಲ್ಲಿ ಈ ಐವರು ಆಟಗಾರರು ಮೊದಲ ಅವಕಾಶಕ್ಕಾಗಿ ಎದುರು ನೋಡ್ತಿದ್ದಾರೆ. ಮುಂದಿನ ಪಂದ್ಯಗಳನ್ನಾದ್ರೂ ಇವರಿಗೆ ಅವಾಕಶ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್