Nov 14, 2022, 11:01 AM IST
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಂಸ್ಕೃತ ಶಾಲೆಗಳನ್ನು ಆರಂಭಿಸಲು ಹಿಂದೂ ಸಂಘಟನೆಗಳು ಒತ್ತಾಯಿಸಿದ್ದು, ಮುಸ್ಲಿಂ ಸಂಘಟನೆಗಳಿಗೆ ಟಕ್ಕರ್ ನೀಡಲು ತಯಾರಿ ನಡೆಸಿವೆ. ಮುಸ್ಲಿಂ ಸಮುದಾಯದ ಮಕ್ಕಳಿಗಾಗಿ ಉರ್ದು ಹಾಗೂ ಅರೇಬಿಕ್ ಶಾಲೆಗಳಿವೆ. ಮುಸ್ಲಿಂ ಸಮುದಾಯದ ಮಕ್ಕಳು ಮದರಾಸಗಳಲ್ಲೂ ಶಿಕ್ಷಣ ಪಡೆಯುತ್ತಾರೆ. ಅದೇ ರೀತಿ ಶಾಲಾ ಮಕ್ಕಳಿಗೆ ಹಿಂದೂ ಹಬ್ಬಗಳು, ಆಚರಣೆಯನ್ನು ಪರಿಚಯಿಸಿ. ರಾಮಾಯಣ, ಭಗವದ್ಗೀತೆ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಕೃತ ಭೋದನೆ ಜೊತೆಗೆ ಹಿಂದೂ ಧರ್ಮದ ಪರಿಚಯ ಮಾಡಬೇಕು. ಉರ್ದು, ಅರೇಬಿಕ್ ಶಾಲೆಗಳಂತೆ ಸಂಸ್ಕೃತ ಶಾಲೆಗಳ ಆರಂಭಕ್ಕೆ ಪಟ್ಟು ಹಿಡಿಯಲಾಗಿದೆ.