Karnataka Govt School : ಕೋಟೆನಾಡಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ ಹೊಸ ಪ್ಲಾನ್

Dec 26, 2021, 10:52 AM IST

ಚಿತ್ರದುರ್ಗ (ಡಿ.26): ತಂತ್ರಜ್ಞಾನ ಮುಂದುವರಿದಂತೆ ಸರ್ಕಾರಿ ಶಾಲೆಗೆ (Govt School ) ಮಕ್ಕಳನ್ನು (Children)  ಸೇರಿಸಲು ಪೋಷಕರು ಹಿಂದೇಟು ಹಾಕುತ್ತಾರೆ. ದೊಡ್ಡ ದೊಡ್ಡ ಶಾಲೆಗಳಲ್ಲಿ ಓದಬೇಕೆಂದು ಬಯಸುತ್ತಾರೆ. ಆದರೆ ಕೋಟೆ ನಾಡು ಚಿತ್ರದುರ್ಗದ  ಹೊಳಲ್ಕೆರೆ ತಾಲೂಕಿನ ಶಿಕ್ಷಣ ಇಲಾಖೆ ಹಾಗೂ ಬಿಇಒ ತಿಪ್ಪೆಸ್ವಾಮಿ ಶಾಲೆಗಳ ಉಳಿವಿಗಾಗಿ ಮಾಸ್ಟರ್ ಪ್ಲಾನ್ ಮಾಡಿದ್ದು,  ನಮ್ಮ ಶಾಲೆ ನಮ್ಮ ಕೊಡುಗೆ ಅಭಿಯಾನ ಆರಂಭಿಸಿದ್ದಾರೆ. ಆಯಾ ಗ್ರಾಮದ ಜನ ಕೊಟ್ಟಿರುವ  ದೇಣಿಗೆಯಿಂದ ಶಾಲೆ (School) ಅಭಿವೃದ್ಧಿ ಮಾಡಲಾಗುತ್ತಿದೆ. 

Omicron Panic: ಶಾಲೆಗಳನ್ನು ಮತ್ತೆ ಮುಚ್ಚಲು ಪೋಷಕರ ಒತ್ತಾಯ?

ಸಂಗ್ರಹವಾದ ಒಂದೂವರೆ ಕೋಟಿಯಲ್ಲಿ ಶಾಲೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನುಕೊಳ್ಳಲಾಗುತ್ತಿದೆ.  ಅಗತ್ಯವಿರುವ ಎಲ್ಲಾ ಪರಿಕರಗಳನ್ನು  ಕೊಳ್ಳಲು ಅನುಕೂಲವಾಗಿದೆ. ಈ ಅಭಿಯಾನ ಸಾಕಷ್ಟು ಯಶಸ್ವಿಯಾಗಿದೆ.