ಲಕ್ಷ್ಮೀ ನಿವಾಸದಲ್ಲಿ ಇಲ್ಲೀವರೆಗೆ ದುರಾದೃಷ್ಟವಂತೆ ಅಂತ ಗುರುತಿಸಿಕೊಂಡಿದ್ದ ಭಾವನಾ ಮೇಡಂ ಇದೀಗ ಮನೆ ಬೆಳಗೋ ಮಹಾಲಕ್ಷ್ಮಿ ಆಗಿ ಬದಲಾಗಿದ್ದಾರೆ. ಫುಲ್ ಗೇಮ್ ಚೇಂಜ್ ಆಗಿರೋದು ನೋಡಿ ಫ್ಯಾನ್ಸ್ ಖುಷಿಯಲ್ಲಿದ್ದಾರೆ.
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಹೈ ಡ್ರಾಮಗಳ ಸರಣಿಯೇ ನಡೀತಿದೆ. ಒಂದು ಕಡೆ ಚಿನ್ನುಮರಿ ತಾಯಿ ಆಗೋ ಸಂಭ್ರಮ. ಇನ್ನೊಂದು ಕಡೆ ಮೂಕ ವೆಂಕಿಯನ್ನು ದುಷ್ಟ ಸಂತೋಷ ಮನೆಯಿಂದ ಆಚೆ ಹಾಕಿದ್ದಾನೆ. ಮಗದೊಂದು ಕಡೆ ಜವರೇಗೌಡರ ಮನೆಗೆ ತ್ರಿಕಾಲ ಜ್ಞಾನಿಗಳ ಎಂಟ್ರಿ ಆಗಿದೆ. ಅವರು ಅಂದ ಆ ಒಂದು ಮಾತು ಗೇಮ್ ಚೇಂಜರ್ ಆಗ್ಬಿಟ್ಟಿದೆ. ಇಲ್ಲೀವರೆಗೆ ಮಹಾ ದುರಾದೃಷ್ಟವಂತೆ ಅನ್ನೋ ಬಿರುದು ಹೊತ್ತಿದ್ದ ಭಾವನಾ ಮಹಾ ಅದೃಷ್ಟವಂತೆ ಮನೆ ಬೆಳಗೋ ಮಹಾಲಕ್ಷ್ಮಿ ಆಗಿ ಬದಲಾಗಿದ್ದಾಳೆ. ಈ ಹಿಂದೆ ಇವಳನ್ನು ಜವರೇಗೌಡರು ಮನೆಯ ಅದೃಷ್ಟವನ್ನ ತೊಳೆದು ಹಾಕೋಳು ಅಂತ ಭಾವಿಸಿದ್ರು. ಅದಕ್ಕೆ ಸರಿಯಾಗಿ ಹಿಂದೆ ಒಂದಿಷ್ಟು ಘಟನೆಗಳೂ ನಡೆದಿದ್ದವು. ಇದಾದ ಮೇಲೆ ಜವರೇಗೌಡ್ರ ಮಗ ಸಿದ್ದೇಗೌಡ ಎಲ್ಲರೆದುರೂ. 'ಈಕೆಯೇ ನನ್ನ ಪತ್ನಿ' ಅಂತ ಘೋಷಿಸಿಬಿಟ್ಟಿದ್ದರು. ಸಿದ್ದೇಗೌಡನಿಗೆ ಬೇರೆ ಹುಡುಗಿನ ಕಟ್ಟಬೇಕೆಂದಿದ್ದ ಜವರೇಗೌಡರ ಪ್ಲಾನೆಲ್ಲ ತಲೆ ಕೆಳಗಾಗಿತ್ತು.
ಇದು ಭಾವನಾ ಮನಸ್ಸಲ್ಲಿ, ಅವಳ ಮನೆಯಲ್ಲಿ ಕೋಲಾಹಲ ಎಬ್ಬಿಸಿತ್ತು. ಈಗ ಎಲ್ಲ ಒಂದೊಂದಾಗಿ ತಣ್ಣಗಾಗ್ತಿದೆ. ಇಂಥಾ ವೇಳೆಯಲ್ಲಿ ಜವರೇಗೌಡರ ಮನೆಗೆ ತ್ರಿಕಾಲ ಜ್ಞಾನಿಯೊಬ್ಬರ ಆಗಮನವಾಗಿದೆ. ಆ ಮಹಾನುಭಾವರು ಭಾವನಾ ಮೇಲೆ ಈ ಹಿಂದೆ ಇದ್ದ ಆರೋಪಗಳನ್ನೆಲ್ಲ ನಿವಾಳಿಸಿ ಎಸೆದು ಭಾವನಾ ಈ ಮನೆಯನ್ನು ಬೆಳಗೋ ಮಹಾಲಕ್ಷ್ಮೀ ಅಂದುಬಿಟ್ಟಿದ್ದಾರೆ. ಅಲ್ಲಿಗೆ ಮಹಾ ಗೇಮ್ ಚೇಂಜ್ ಅನ್ನು ವೀಕ್ಷಕರು ಸಂಭ್ರಮಿಸಿದ್ದಾರೆ.
ಹೆತ್ತತಾಯಿಗೇ ಭಿಕ್ಷೆ ಹಾಕಿದ ಗೌತಮ್ ದಿವಾನ್! ವಿಲನ್ ಲಕ್ಷ್ಮೀಕಾಂತ್ ಭಾಗ್ಯನ್ನ ನೋಡೇ ಬಿಟ್ಟ.. ಮುಂದೈತೆ ಮಾರಿಹಬ್ಬ
ಇದಕ್ಕೂ ಹಿಂದೆ ಇದೇ ಜವರೇಗೌಡರ ಮನೆಯಲ್ಲಿ ಎಲೆಕ್ಷನ್ ರಿಸಲ್ಟ್‌ನ ಹೈ ಡ್ರಾಮಾ ನಡೆದಿತ್ತು. ಚುನಾವಣೆ ಫಲಿತಾಂಶದ ದಿನ ಎಲ್ಲರೂ ಟಿವಿಯಲ್ಲಿ ರಿಸ್ಟಲ್ಟ್ ಪ್ರಕಟವಾಗುತ್ತೆ. ಮೊದಲೆರಡು ಸುತ್ತಿನಲ್ಲಿ ಜವರೇಗೌಡ ಮುನ್ನಡೆ ಸಾಧಿಸಿದರೂ ನಂತರದ ಸುತ್ತುಗಳಲ್ಲಿ ಮುನಿಸ್ವಾಮಿ ಮುನ್ನಡೆ ಸಾಧಿಸುತ್ತಾನೆ. ಇದರಿಂದ ಜವರೇಗೌಡನಿಗೆ ಭಯ ಶುರುವಾಗುತ್ತದೆ. ನಾನು ಇನ್ನು ಸೋಲುವುದು ಖಚಿತ ಎಂದು ಜವರೇಗೌಡ ನಿರ್ಧರಿಸುತ್ತಾನೆ. ಎಲ್ಲರೂ ಹಾಲ್‌ನಲ್ಲಿ ಟಿವಿ ನೋಡುತ್ತಾ ಕುಳಿತರೆ, ಇತ್ತ ಸಿದ್ದೇಗೌಡ ಹಾಗೂ ಭಾವನಾ ರಿಸಲ್ಟ್ ಕೇಳಿಸಿಕೊಂಡು ರೂಮ್‌ನಲ್ಲಿ ಉಳಿಯುತ್ತಾರೆ. ಕೊನೆಗೂ ಅಂತಿಮ ಫಲಿತಾಂಶ ಪ್ರಕಟಗೊಂಡು ಜವರೇಗೌಡ ಗೆಲುವು ಸಾಧಿಸುತ್ತಾನೆ.
ಅಪ್ಪ ಗೆದ್ದ ಖುಷಿಗೆ ಸಿದ್ದೇಗೌಡ ರೂಮ್‌ನಲ್ಲೇ ಕುಳಿದು ಕುಪ್ಪಳಿಸುತ್ತಾನೆ. ರೇಣುಕಾ ಎಲ್ಲರಿಗೂ ಸಿಹಿ ತಂದು ತಿನ್ನಿಸುತ್ತಾಳೆ. ಆದರೆ ಜವರೇಗೌಡ ಗೆದ್ದಿರುವುದು ಸಿದ್ದು ಅತ್ತಿಗೆಗೆ ಮಾತ್ರ ಖುಷಿ ನೀಡುವುದಿಲ್ಲ. ಇವರು ಸೋಲುತ್ತಾರೆ ಎಂದುಕೊಂಡಿದ್ದೆ, ಆದರೆ ಹೇಗೆ ಗೆದ್ದರು ಎಂದು ತನ್ನಲ್ಲೇ ಪ್ರಶ್ನಿಸಿಕೊಳ್ಳುತ್ತಾಳೆ. ಆದರೆ ಮನೆಯವರ ಮುಂದೆ ತನಗೂ ಖುಷಿ ಆದಂತೆ ನಟಿಸುತ್ತಾಳೆ. ಸೋಲುತ್ತೇನೆ ಎಂದುಕೊಂಡಿದ್ದ ಜವರೇಗೌಡ, ಗೆದ್ದಿದ್ದಕ್ಕೆ ಶಾಕ್ ಆಗುತ್ತಾನೆ. ಆತನಿಗೆ ಗೆಲುವನ್ನು ಸಂಭ್ರಮಿಸಲೂ ಆಗುವುದಿಲ್ಲ.
ಭಾವೀ ಗಂಡನ ಜೊತೆಗೆ ಚಿನ್ನುಮರಿ ಡ್ಯಾನ್ಸ್, ಪ್ರಿ ವೆಡ್ಡಿಂಗ್ ಪ್ರೋಗ್ರಾಂನಲ್ಲಿ ಚಂದನಾ ಫುಲ್ ಮಿಂಚಿಂಗ್!
ಆದರೆ ಇದೀಗ ಮನೆಗೆ ಬಂದಿರೋ ತ್ರಿಕಾಲ ಜ್ಞಾನಿಗಳು ಭಾವನಾಳನ್ನು ಈ ಮನೆಯ ಅದೃಷ್ಟರತ್ನ, ಅವಳು ಮನೇಲಿದ್ರೆ ಸಮಸ್ತ ಅದೃಷ್ಟ ಬರುತ್ತೆ. ಮನೆಯಿಂದ ಆಚೆ ಹೋದರೆ ಮನೆಯೆಲ್ಲ ಕೊಚ್ಕೊಂಡು ಹೋಗುತ್ತೆ' ಅನ್ನೋ ರೀತಿ ಭವಿಷ್ಯ ನುಡಿದಿದ್ದಾರೆ. ಇದರಿಂದ ಭಾವನಾಗೆ ಶಾಕ್ ಆಗಿದೆ. ಸಿದ್ದೇಗೌಡ ಖುಷಿಯಲ್ಲಿ ಹಾರಾಡ್ತಿದ್ದಾನೆ. ಶುರುವಿಗೆ ಶಾಕ್‌ಗೆ ಬಿದ್ದ ಜವರೇಗೌಡರು ಆ ಬಳಿಕ ತಾನು ದುರಾದೃಷ್ಟವಂತೆ ಅಂದುಕೊಂಡಿದ್ದ ಸೊಸೆಯಿಂದ ಹರಿದುಬಂದ ಅದೃಷ್ಟವನ್ನು ನೆನೆದುಕೊಂಡು ಖುಷಿ ಖುಷಿಯಾದ ಹಾಗೆ ಕಾಣ್ತಾರೆ. ಬಹುಶಃ ಈ ಮಹಾನುಭಾವರಿಂದ ಮುಂದೆ ಕಥೆಗೆ ಹೈ ವೋಲ್ಟೇಜ್ ಬರಲಿದೆ. ಇಲ್ಲೀವರೆಗೆ ಮನೆಯಲ್ಲಿ ಯಾವ ಸ್ಥಾನವೂ ಇಲ್ಲದ ಭಾವನಾ ಮುಂದೊಂದು ದಿನ ಜವರೇಗೌಡರ ಬಳಿಕ ತಾನೇ ಎಲೆಕ್ಷನ್‌ಗೆ ನಿಲ್ಲೋ ಸುಳಿವು ಕಾಣ್ತಿದೆ.