1.10 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲಾದ ಬಿಹಾರ ಮೂಲದ 13 ವರ್ಷದ ಆಟಗಾರ ವೈಭವ್ 2025ರ ಐಪಿಎಲ್ ಟೂರ್ನಿಯಲ್ಲಿ ಆಡಲು ಅರ್ಹತೆ ಇದೆಯಾ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಪೈಕಿ ಹೆಚ್ಚು ಗಮನ ಸೆಳೆದಿದ್ದು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಖರೀದಿಸಿದ 13 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವನ್ಶಿ ಎನ್ನುವ ಆಟಗಾರ. 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಬಿಹಾರ ಮೂಲದ ಯುವ ಬ್ಯಾಟರ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬರೋಬ್ಬರಿ 1.10 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ವೈಭವ್ ಸೂರ್ಯವನ್ಶಿ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳು ಆರಂಭದಿಂದಲೇ ಪೈಪೋಟಿ ನಡೆಸಿದವು. ಅಂತಿಮವಾಗಿ ವೈಭವ್ ಸೂರ್ಯವನ್ಶಿ ರಾಜಸ್ಥಾನ ರಾಯಲ್ಸ್ ಪಾಲಾದರು. ಈ ಮೂಲಕ ವೈಭವ್, ಐಪಿಎಲ್ ಇತಿಹಾಸದಲ್ಲೇ ಹರಾಜಾದ ಅತಿಕಿರಿಯ ಆಟಗಾರ ಎನ್ನುವ ಇತಿಹಾಸ ನಿರ್ಮಿಸಿದರು.
𝗔 𝗵𝗶𝘀𝘁𝗼𝗿𝗶𝗰 𝗺𝗼𝗺𝗲𝗻𝘁 𝗶𝗻 𝘁𝗵𝗲 ! 👏 👏
𝘿𝙊 𝙉𝙊𝙏 𝙈𝙄𝙎𝙎:
Here's how the 13-year-old Vaibhav Suryavanshi - the youngest ever player to be bought in the auction - joined 👌 👌 | pic.twitter.com/eme92pM7jy
'ಚಾಣಕ್ಯನಿಗಿಂತ ಮಾಸ್ಟರ್‌ಮೈಂಡ್..' ಡೆಲ್ಲಿ ಮಾಲೀಕ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್!
ಐಪಿಎಲ್ ಹರಾಜಿಗೆ ಶಾರ್ಟ್‌ಲಿಸ್ಟ್ ಆದ ಆಟಗಾರರಲ್ಲಿ ಅತಿಕಿರಿಯ ಕ್ರಿಕೆಟರ್ ಎನ್ನುವ ದಾಖಲೆ ಬರೆದಿದ್ದ ವೈಭವ್, ಇದೀಗ ಹರಾಜಿನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಇದೀಗ ಇಷ್ಟು ಸಣ್ಣ ವಯಸ್ಸಿನ ವೈಭವ್ ಸೂರ್ಯವನ್ಶಿ, ಐಪಿಎಲ್ ಆಡಲು ಅರ್ಹವೇ ಎನ್ನುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮೂಡುತ್ತಿದೆ. ಯಾಕೆಂದರೆ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಯಾವುದೇ ಆಟಗಾರ ಜಾಗತಿಕ ಮಟ್ಟದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಬೇಕೆಂದರೆ ಕನಿಷ್ಠ 15 ವರ್ಷ ವಯಸ್ಸಾಗಿರಬೇಕು ಎನ್ನುವ ನಿಯಮವನ್ನು ಜಾರಿಗೊಳಿಸಿದೆ.
ಈ ಶಿಷ್ಟಾಚಾರದ ನಿಯಮದ ಪ್ರಕಾರ ಆಟಗಾರನೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು 15 ವರ್ಷವಾಗಿರಲೇಬೇಕಾಗುತ್ತದೆ. ಆದರೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಆ ದೇಶದ ಕ್ರಿಕೆಟ್ ಬೋರ್ಡ್ ಐಸಿಸಿ ಬಳಿ ಮನವಿ ಮಾಡಿಕೊಂಡರೆ, ಐಸಿಸಿ 15 ವರ್ಷದೊಳಗಿನ ಆಟಗಾರರಿಗೂ ತಮ್ಮ ದೇಶವನ್ನು ಪ್ರತಿನಿಧಿಸಲು ಅನುಮತಿಸಲಾಗುವುದು ಎಂದು ಒಂದು ಗೈಡ್ ಲೈನ್ ಮಾಡಿದೆ.
ಐಪಿಎಲ್ ಹರಾಜಿನ ಬಳಿಕ ಯಾವ ತಂಡ ಬಲಿಷ್ಠ? ಇಲ್ಲಿದೆ 10 ತಂಡಗಳ ಕಂಪ್ಲೀಟ್ ಮಾಹಿತಿ
ಇನ್ನು ವೈಭವ್ ಸೂರ್ಯವನ್ಶಿ ವಿಚಾರದಲ್ಲಿ ಐಸಿಸಿ ನಿಯಮವೇನು?
ಐಸಿಸಿ ರೂಪಿಸಿರುವ ವಯೋಮಿತಿಯ ರೂಲ್ಸ್, ಆಟಗಾರರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಇದು ಐಸಿಸಿ ಟೂರ್ನಿಗಳಿಗೆ, ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಿಗೆ ಹಾಗೂ ಅಂಡರ್-19 ಕ್ರಿಕೆಟ್ ಪಂದ್ಯಗಳಿಗೂ ಅನ್ವಯವಾಗುತ್ತದೆ. ಹೀಗಾಗಿ ಪುರುಷ ಅಥವಾ ಮಹಿಳಾ ಆಟಗಾರರು ಯಾವುದೇ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿ ಆಡಬೇಕೆಂದರೂ ಅವರ ವಯಸ್ಸು 15 ವರ್ಷಗಳಾಗಿರಲೇಬೇಕಾಗುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಆ ದೇಶದ ಕ್ರಿಕೆಟ್ ಬೋರ್ಡ್ ಐಸಿಸಿ ಬಳಿ 15 ವರ್ಷದೊಳಗಿನ ಆಟಗಾರನನ್ನು ತಂಡದೊಳಗೆ ಆಡಿಸುವ ಬಗ್ಗೆ ಮನವಿ ಮಾಡಿಕೊಂಡರೆ, ಆಟಗಾರನ ಕ್ರಿಕೆಟ್ ಅನುಭವ, ಮಾನಸಿಕ ಸಾಮರ್ಥ್ಯ ಹಾಗೂ ಆತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸವಾಲನ್ನು ಎದುರಿಸಲು ಶಕ್ತನಾಗಿದ್ದರೇ ಮಾತ್ರ ಐಸಿಸಿ ವಿಶೇಷ ಸಂದರ್ಭದಲ್ಲಿ ಅನುವು ಮಾಡಿ ಕೊಡುತ್ತೆ.
2025ರ ಐಪಿಎಲ್ ಆಡ್ತಾರಾ ವೈಭವ್?
ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಯಾವುದೇ ವಯೋಮಿತಿ ಹೇರಿಲ್ಲ. ಆಟಗಾರರನ್ನು ಆಡುವ ಹನ್ನೊಂದರ ಬಳಗದಲ್ಲಿ ಆಡಿಸುವ ತೀರ್ಮಾನವನ್ನು ಆ ತಂಡದ ಫ್ರಾಂಚೈಸಿ ವಿವೇಚನೆಗೆ ಬಿಡಲಾಗಿದೆ. ಇನ್ನು ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಸದ್ಯ ಪ್ರಯಾಸ್ ರೇ ಬರ್ಮನ್ ಇಲ್ಲಿಯವರೆಗೆ ಐಪಿಎಲ್ ಆಡಿದ ಅತಿ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2019ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪ್ರಯಾಸ್ ಬರ್ಮನ್, ತಾವು 16 ವರ್ಷ 157 ದಿನಗಳಿದ್ದಾಗ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ವೈಭವ್ ಸೂರ್ಯವನ್ಶಿ ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಹಾಗೂ ಕುಮಾರ ಸಂಗಕ್ಕರ ಮಾರ್ಗದರ್ಶನದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರೂ ಅಚ್ಚರಿಯಿಲ್ಲ.