ಸೀರೆಗೂ ಗ್ಲಾಮರಸ್ ಟಚ್ ನೀಡ್ತಾಳೆ ಈ ಚೆಲುವೆ…. ಮೌನಿ ರಾಯ್ ಸೀರೆ ಲುಕ್ ನೋಡಿ ಪಡ್ಡೆಗಳ ನಿದ್ದೆ ಮಾಯ!

First Published | Nov 27, 2024, 12:31 PM IST

ಬಾಲಿವುಡ್ ನಟಿ ಮೌನಿ ರಾಯ್ ಈವಾಗಂತೂ ಝೀರೋ ಫಿಗರ್ ಆಗೋ ಮೂಲಕ, ಸಖತ್ ಬೋಲ್ಡ್ ಕೂಡ ಆಗಿದ್ದಾರೆ. ಸೀರೆಯಲ್ಲಿ ಇವರನ್ನ ನೋಡಿದ್ರೆ ಯುವಕರ ಹೃದಯ ಬಡಿತ ಜೋರಾಗೋದು ಖಚಿತ. 

ಟಿವಿ ಸೀರಿಯಲ್ ನಿಂದ ಹಿಡಿದು ಚಲನಚಿತ್ರಗಳವರೆಗೆ ತನ್ನ ಛಾಪು ಮೂಡಿಸಿರುವ ನಟಿ ಮೌನಿ ರಾಯ್ (Mouni Roy) ತನ್ನ ಅದ್ಭುತ ನಟನೆ ಮತ್ತು ಫ್ಯಾಶನ್ ಟ್ರೆಂಡ್ ಗೆ ಹೆಸರುವಾಸಿಯಾಗಿದ್ದಾರೆ. ನಟಿ ಪ್ರತಿದಿನ ತನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇದರಲ್ಲಿ ಅವರು ಕೆಲವೊಮ್ಮೆ ವೆಸ್ಟರ್ನ್ ಉಡುಪಿನಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವೊಮ್ಮೆ ಸಾಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. 
 

ಅದರಲ್ಲೂ ಮೌನಿ ರಾಯ್ ಸೀರೆ ಉಟ್ಟರೆ ಕೇಳಬೇಕೆ? ಪಡ್ಡೆಗಳ ಕಣ್ಣು ಅತ್ತಿಂದಿತ ಹೋಗಲ್ಲ, ಅಷ್ಟೊಂದು ಗ್ಲಾಮರಸ್ ಆಗಿ ಕಾಣಿಸ್ತಾರೆ ಈ ಬೆಡಗಿ. ಇದಿಗ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಒಂದಷ್ಟು ಥ್ರೋಬ್ಯಾಕ್ ಸೀರೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವೆಸ್ಟರ್ನ್ ಡ್ರೆಸ್ ಗಳಿಗಿಂತ ಸೀರೆಯಲ್ಲಿ ಮೌನಿ ರಾಯ್ ಅಂದ ಮತ್ತಷ್ಟು ಹೆಚ್ಚಾಗಿದೆ ಅನ್ಸುತ್ತೆ. 
 

Tap to resize

ಈ ಫೋಟೊಗಳಲ್ಲಿ ಕೆಲವೊಂದರಲ್ಲಿ ಮೌನಿ ಬೆಂಗಾಳಿ ಬಾಲೆಯಾಗಿ ಮ್ಯಾಜಿಕ್ ಮಾಡಿದ್ರೆ, ಇನ್ನು ಕೆಲವು ಫೋಟೊಗಳಲ್ಲಿ ಕಾರ್ಸೆಟ್ ರವಿಕೆಯೊಂದಿಗೆ ಸೀರೆಗೆ ಮಾಡರ್ನ್ ಟಚ್ ನೀಡುವ ಮೂಲಕ, ಮನಸನ್ನ ಸೆಲೆಯುತ್ತಿದ್ದಾರೆ. ಮೌನಿ ರಾಯ್ ಸೀರೆಯಲ್ಲಿ ಹೇಗೆಲ್ಲಾ ಕಾಣಿಸ್ತಿದ್ದಾರೆ ಅನ್ನೋದನ್ನ ನೀವೇ ನೋಡಿ. 
 

ಮೌನಿ ಇಲ್ಲಿ ಬ್ಲ್ಯಾಕ್ ಬ್ಯೂಟಿಯಾಗುವ ಮೂಲಕ ತನ್ನ ಲುಕ್ ನಿಂದ ಹೃದಯ ಗೆದ್ದಿದ್ದಾಳೆ. ಮೌನಿ ಕಪ್ಪು ಸಕ್ವಿನ್ ಸೀರೆಯೊಂದಿಗೆ ಕಾರ್ಸೆಟ್ ಬ್ಲೌಸ್ ಧರಿಸಿದ್ದು, ಐಲೈನರ್ ಮತ್ತು ಮಸ್ಕರಾದೊಂದಿಗೆ ಕಣ್ಣಿನ ಮೇಕಪ್ಗೆ ವಿಂಗ್ಸ್ ಲುಕ್ ನೀಡಿದ್ದಾರೆ. 
 

ಇಲ್ಲಿ ಮೌನಿ ನೀಲಿ ಬಣ್ಣದ ಕಾಟನ್ ಸೀರೆಯಲ್ಲಿ (blue cotton saree) ಕಾಣಿಸಿಕೊಂಡಿದ್ದಾರೆ. ಅದರ ಮೇಲೆ ಬಿಳಿ ಬಣ್ಣದ ಪ್ರಿಂಟ್ ಗಳಿವೆ. ಅದರ ಜೊತೆಗೆ ನಟಿ ಸ್ಲೀವ್ ಲೆಸ್ ರವಿಕೆ ಧರಿಸಿದ್ದಾರೆ. ಜೊತೆಗೆ  ಕೈಯಲ್ಲಿ ಆಕ್ಸಿಡೈಸ್ಡ್ ಬ್ರೇಸ್ಲೆಟ್ ಮತ್ತುಕಾಲಿಗೆ ಗೆಜೆ ಧರಿಸಿ, ಸಣ್ಣ ಕಪ್ಪು ಬಿಂದಿಯನ್ನು ಧರಿಸಿದ್ದು, ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ. 
 

ಇದು ಇನ್ನೂ ಸುಂದರವಾಗಿದೆ,ಗ್ಲಿಟರ್  ವರ್ಕ್ ಮಾಡಿರುವ ಬಿಳಿ ಬಣ್ಣದ ನೆಟ್ ಸೀರೆ ಜೊತೆಗೆ ಟ್ಯೂಬ್ ಬ್ಲೌಸ್ ಧರಿಸಿರುವ ಮೌನಿ, ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. ಇದರ ಜೊತೆಗೆ ನಟಿ ಸಿಲ್ವರ್ ಮುಂದಾಲೆ, ಕಣ್ಣುಗಳನ್ನು ಕಾಡಿಯೆಯಿಂದ ಅಲಂಕರಿಸುವ ಮೂಲಕ ಬೋಲ್ಡ್ ಲುಕ್ ನೀಡಿದ್ದಾರೆ. 
 

ಈ ಫೋಟೊದಲ್ಲಿ ಸ್ಲಿಮ್ ಬ್ಯೂಟಿ ಮೌನಿ ರಾಯ್ ಕೆಂಪು ಅಂಚು ಹೊಂದಿರುವ ಕಪ್ಪು ಸೀರೆಯೊಂದಿಗೆ ಸ್ಲೀವ್ ಲೆಸ್ ಬ್ಲೌಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ನಟಿ ಒಂದು ಕೈಯಲ್ಲಿ ಕೆಂಪು ಬಳೆಗಳನ್ನು ಧರಿಸುವ ಮೂಲಕ ತನ್ನ ಟ್ರೆಡಿಶನಲ್ ಲುಕ್ ಗೆ ಗ್ಲಾಮರಸ್ ಟಚ್ ಕೊಟ್ಟಿದ್ದಾರೆ. 
 

ಮೌನಿ ಬಂಗಾಳಿ ಬಾಲೆಯ ಶೈಲಿಯಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಸೀರೆಯನ್ನು ಧರಿಸಿರೋದನ್ನ ಕಾಣಬಹುದು.ಬೆಂಗಾಳಿ ಶೈಲಿಯಲ್ಲಿ  (Bengali Saree)ಸೀರೆಯುಟ್ಟಿದ್ದು, ಬ್ಲೌಸ್ ಧರಿಸಿದೇ ನಗ್ನ ಬೆನ್ನನ್ನು ತೋರಿಸಿದ್ದಾರೆ. ಇದರಿಂದ ಗ್ಲಾಮರಸ್ ಆಗಿ ಕಾಣಿಸ್ತಿದ್ದಾರೆ ಬೆಡಗೊ. ಜೊತೆಗೆ ಮಧ್ಯ ಪಾರ್ಟಿಶನ್ ಮಾಡಿ ಜಡೆ ಹೆಣೆದು ಕುಂಕುಮ ಹಚ್ಚಿದ್ದು, ಇದರ ಜೊತೆಗೆ ನಟಿ ಸಣ್ಣ ಕೆಂಪು ಬಿಂದಿ ಧರಿಸಿದ್ದಾರೆ. 
 

Latest Videos

click me!