ನಿಜವಾಯ್ತು 2021 ಬಬಲಾದಿ ಮಠದ ಭವಿಷ್ಯ..!! ಕಣ್ಮುಂದೆ ನಡೆಯುತ್ತಿವೆ ಎಲ್ಲವೂ

Sep 5, 2021, 1:46 PM IST

ವಿಜಯಪುರ (ಸೆ.05):  ನಿಜವಾಯ್ತು ಬಬಲಾದಿ ಮಠದ ಭವಿಷ್ಯ..! ಬಬಲಾದಿ ಮಠದ 2021ರ ಭವಿಷ್ಯದಲ್ಲಿ ಭೂಕಂಪನದ ಬಗ್ಗೆ ಹೇಳಲಾಗಿತ್ತು. "ಭೂಮಿ ಕುಪ್ಪಳಿಸಿತ್ತೊ ಮಕ್ಕಳಿರ್ಯಾ..!" ಎಂದು ಸಿದ್ದು ಮುತ್ಯಾ.. ಭವಿಷ್ಯ ನುಡಿದಿದ್ದರು.  ಅದರಂತೆ ನಿನ್ನೆ ರಾತ್ರಿ ವಿಜಯಪುರ ಜಿಲ್ಲೆಯಾದ್ಯಂತ, ಮಹಾರಾಷ್ಟ್ರದ ಕೊಲ್ಲಾಪುರ ‌ಸೇರಿ ಹಲವೆಡೆ ಭೂಕಂಪನವಾಗಿದೆ.  3.9ರಷ್ಟು ಭೂಕಂಪನ ತೀವ್ರತೆಯು ದಾಖಲಾಗಿದೆ.  ಈ ಮೂಲಕ ಬಬಲಾದಿ ಮಠದ ಸದಾಶಿವ ಅಜ್ಜನ ಭವಿಷ್ಯ ನಿಜವಾದಂತಾಗಿದೆ. ಇದೀಗ ಸಿದ್ದು ಮುತ್ತ್ಯಾ ನುಡಿದಿದ್ದ 2021ರ  ಶಿವರಾತ್ರಿ ಭವಿಷ್ಯ ನಿಜವಾಗಿದೆ. 

ಕೊರೋನಾ ರೂಲ್ಸ್‌ ಕೇಳೋರಿಲ್ಲ.. ಮದ್ದು ಗುಂಡಿನ ಹಾವಳಿ ಎಂದ ಕಾರಣಿಕ!

500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನವನ್ನು ಪ್ರತಿ ವರ್ಷ ಶಿವರಾತ್ರಿಯಂದು ಓದಲಾಗುತ್ತೆ. ರಾಜಕೀಯದಲ್ಲಿ ಏರಿಳಿತ, ಓರ್ವ ಗಣ್ಯ ವ್ಯಕ್ತಿಯ ಏರಿಳಿತವಾಗುತ್ತೆ ಎಂದೂ ಬಬಲಾದಿ ಮಠದ ಭವಿಷ್ಯ ಹೇಳಿದ್ದು, ಅದೂ ನಿಜವಾಗಿದೆ. ಅದರಂತೆ ಬಿಎಸ್ವೈ ಸಿಎಂ ಸ್ಥಾನದಿಂದ ಬದಲಾವಣೆಯಾದರು. ತಾಲಿಬಾನ್‌ ಬಗ್ಗೆಯು ಹೇಳಲಾಗಿತ್ತು.