ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್, ನಮ್ಮ ಶಾಸಕರು ಮಾರಾಟಕ್ಕಿಲ್ಲ: ಲಕ್ಷ್ಮಣ ಸವದಿ

By Kannadaprabha News  |  First Published Nov 16, 2024, 12:54 PM IST

ರಾಜ್ಯದ ಮುಖ್ಯಮಂತ್ರಿಯಾಗಿ ಹೇಳಿಕೆ ನೀಡಿದ್ದಾರೆ ಎಂದರೆ ಅವರ ಬಳಿ ಏನಾದರೂ ಮಾಹಿತಿ ಇರಬಹುದು. ಆದರೆ, ಬಿಜೆಪಿಯವರು 50 ಕೋಟಿ ಕೊಡಲಿ, 100 ಕೋಟಿ ಕೊಡಲಿ. ಕಾಂಗ್ರೆಸ್ ಶಾಸಕರಾರೂ ಬಿಜೆಪಿಗೆ ಹೋಗಲ್ಲ ಎಂದು ತಿಳಿಸಿದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ 


ಕಾಗವಾಡ(ನ.16): ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ರು. ಆಫರ್ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆಂದರೆ ಅವರ ಬಳಿ ದಾಖಲೆ ಇರಬೇಕು. ಬಿಜೆಪಿಯವರು ಎಷ್ಟೇ ಆಮಿಷವೊಡ್ಡಿದರೂ ನಮ್ಮಲ್ಲಿ ಯಾರೂ ಮಾರಾಟಕ್ಕಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ ಹೇಳಿಕೆ ನೀಡಿದ್ದಾರೆ ಎಂದರೆ ಅವರ ಬಳಿ ಏನಾದರೂ ಮಾಹಿತಿ ಇರಬಹುದು. ಆದರೆ, ಬಿಜೆಪಿಯವರು 50 ಕೋಟಿ ಕೊಡಲಿ, 100 ಕೋಟಿ ಕೊಡಲಿ. ಕಾಂಗ್ರೆಸ್ ಶಾಸಕರಾರೂ ಬಿಜೆಪಿಗೆ ಹೋಗಲ್ಲ ಎಂದು ತಿಳಿಸಿದ್ದಾರೆ. 

Tap to resize

Latest Videos

undefined

ಶಿಗ್ಗಾಂವಿಯಲ್ಲಿ ನಾವೇ ಗೆಲ್ಲೋದು: ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ

ಅವರು ಎಷ್ಟೇ ಡಿಮ್ಯಾಂಡ್‌ ಮಾಡಲಿ, ನಮ್ಮ ಶಾಸಕರು ಮಾರಾಟಕ್ಕಿಲ್ಲ. ಎಲ್ಲ ಶಾಸಕರು ಸ್ವಾಭಿಮಾನದಿಂದ ಇದ್ದಾರೆ ಎಂದು ಹೇಳಿದರು.

click me!