ವೀಕೆಂಡ್ ಶಾಪಿಂಗ್ ಪ್ಲಾನ್ ಇದ್ರೆ ಖರೀದಿಸಿ ಚಿನ್ನ; 2 ದಿನದ ಹಿಂದಿನ ದರದಲ್ಲಿ ನಿಮ್ಮದಾಗಿಸಿಕೊಳ್ಳಿ ಬಂಗಾರ

First Published | Nov 16, 2024, 12:48 PM IST

Gold And Silver Price Today: ವಾರಾಂತ್ಯದ ಶಾಪಿಂಗ್‌ನಲ್ಲಿ ಚಿನ್ನ ಖರೀದಿಸಲು ಪರಿಗಣಿಸಿ. ಇಂದು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 1 ಗ್ರಾಂಗೆ ₹6,935 ರಂತೆ ಲಭ್ಯವಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ವೀಕೆಂಡ್‌ಗೆ ಶಾಪಿಂಗ್ ಮಾಡುವ ಪ್ಲಾನ್ ಮಾಡಿಕೊಂಡಿದ್ರೆ ಬಟ್ಟೆ ಬದಲು ಚಿನ್ನವನ್ನೇ ಖರೀದಿಸಿ. ಒಂದು ಗ್ರಾಂ ಚಿನ್ನ ಖರೀದಿಸಿರೂ ಅದು ಭವಿಷ್ಯದಲ್ಲಿ ನಿಮ್ಮ ಕಷ್ಟಕಾಲಕ್ಕೆ ಸಹಾಯ ಆಗುತ್ತದೆ. ಹಾಗಾಗಿಯೇ ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕರೆಯಲಾಗುತ್ತದೆ.

ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 6,935 ರೂಪಾಯಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನ ಸಿಗುತ್ತದೆ. ನವೆಂಬರ್ 15ರಂದು 22 ಕ್ಯಾರಟ್ ಚಿನ್ನದ ಮೇಲೆ 10 ರೂ.ಗಳಷ್ಟು ಏರಿಕೆಯಾಗಿತ್ತು. ಇಂದು ಅದೇ 10 ರೂ. ಇಳಿಕೆಯಾಗಿದೆ. ಹಾಗಾಗಿ ನಿಮಗೆ ಇಂದು ಎರಡು ದಿನದ ಹಿಂದಿನ ಬೆಲೆಯಲ್ಲಿ ಚಿನ್ನ ಸಿಗಲಿದೆ.

Latest Videos


ನವೆಂಬರ್ 14ರಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಮೇಲೆ 1,110 ರೂ.ಗಳಷ್ಟು ಇಳಿಕೆಯಾಗಿತ್ತು. ಕಳೆದ 15 ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಹಾಗಾದ್ರೆ ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದ ಎಂಬುದನ್ನು ನೋಡೋಣ ಬನ್ನಿ.

22 ಕ್ಯಾರಟ್ ಚಿನ್ನದ ಬೆಲೆಯ ಮಾಹಿತಿ

1 ಗ್ರಾಂ: 6,935 ರೂಪಾಯಿ (10 ರೂ. ಇಳಿಕೆ)
8 ಗ್ರಾಂ: 55,480 ರೂಪಾಯಿ (80 ರೂ. ಇಳಿಕೆ)
10 ಗ್ರಾಂ: 69,350 ರೂಪಾಯಿ (100 ರೂ. ಇಳಿಕೆ)
100 ಗ್ರಾಂ: 6,93,500 ರೂಪಾಯಿ (1000 ರೂ. ಇಳಿಕೆ)

24 ಕ್ಯಾರಟ್ ಚಿನ್ನದ ಬೆಲೆಯ ಮಾಹಿತಿ

1 ಗ್ರಾಂ: 7,565 ರೂಪಾಯಿ (11 ರೂ. ಇಳಿಕೆ)
8 ಗ್ರಾಂ: 60,520 ರೂಪಾಯಿ (88 ರೂ. ಇಳಿಕೆ)
10 ಗ್ರಾಂ: 75,650 ರೂಪಾಯಿ (110 ರೂ. ಇಳಿಕೆ)
100 ಗ್ರಾಂ: 7,56,500 ರೂಪಾಯಿ (1,100 ರೂ.ಇಳಿಕೆ)

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ಇಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ. ಚೆನ್ನೈ: 69,350  ರೂ., ಮುಂಬೈ: 6,935 ರೂ., ದೆಹಲಿ: 69,500 ರೂ., ಕೋಲ್ಕತ್ತಾ: 69,350 ರೂ., ಬೆಂಗಳೂರು: 69,350 ರೂ., ಹೈದರಾಬಾದ್: 69,350 ರೂ.

ಇಂದಿನ ಬೆಳ್ಳಿ ಬೆಲೆ

ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.

10 ಗ್ರಾಂ: 895 ರೂಪಾಯಿ
100 ಗ್ರಾಂ:8,950 ರೂಪಾಯಿ
1  ಕೆಜಿ: 89,500  ರೂಪಾಯಿ

click me!