ಗರ್ಲ್​ಫ್ರೆಂಡ್​ ಜೊತೆ ಗಂಡನ ಮದ್ವೆ ಮಾಡಿಸಲು ತಾನೇ ತಾಳಿ ರೆಡಿ ಮಾಡಿದ ಭಾಗ್ಯ! ಮುಂದೆ?

By Suchethana D  |  First Published Nov 16, 2024, 1:20 PM IST

ಭಾಗ್ಯಳಿಗೆ ಸಿಕ್ಕಿರೋ ಲಾಟರಿ ಟಿಕೆಟ್​ನಲ್ಲಿ  ​ಟೂರ್​ ಮಾಡ್ತಿರೋ ಶ್ರೇಷ್ಠಾ ಮತ್ತು ತಾಂಡವ್​ ಮದ್ವೆಯಾಗಲು ಸಿದ್ಧರಾಗಿದ್ದು ಭಾಗ್ಯಳೇ ತಾಳಿ ರೆಡಿ ಮಾಡಿದ್ದಾಳೆ. ಇದೇನಿದು ಟ್ವಿಸ್ಟ್​?
 


ಗರ್ಲ್​ಫ್ರೆಂಡ್​ ಶ್ರೇಷ್ಠಾ ಜೊತೆ ರೆಸಾರ್ಟ್​ನಲ್ಲಿ ಎಂಜಾಯ್​ ಮಾಡ್ತಿದ್ದಾನೆ ತಾಂಡವ್​. ಅಷ್ಟಕ್ಕೂ ಇಲ್ಲಿಗೆ ಹೋಗಲು ಅವರಿಗೆ ಟಿಕೆಟ್​ ಸಿಕ್ಕಿದ್ದು ಭಾಗ್ಯಳಿಂದ. ತನ್ನ ಸಂಬಳದಲ್ಲಿ ಭಾಗ್ಯ ಮನೆಗೆ ಹೊಸ ಫ್ರಿಜ್​ ತಂದಿದ್ದಾಳೆ. ಆ ಫ್ರಿಜ್​ ಖರೀದಿ ಸಂದರ್ಭದಲ್ಲಿ ಇಟ್ಟ ಲಾಟರಿ ಭಾಗ್ಯಳಿಗೇ ಹೊಡೆದಿದೆ. ದಂಪತಿ ಪ್ರವಾಸಕ್ಕೆ ಹೋಗುವ ಒಂದು ಟಿಕೆಟ್​ ಅವಳಿಗೆ ಸಿಕ್ಕಿದೆ. ಮನೆಯವರೆಲ್ಲರೂ ಸೇರಿ ಭಾಗ್ಯ ಮತ್ತು ತಾಂಡವ್​ನನ್ನು ಪ್ರಯಾಣಕ್ಕೆ ಕಳುಹಿಸುವ ಯೋಚನೆಯಲ್ಲಿ ಇದ್ದಾರೆ. ತಾಂಡವ್​ನ ಬುದ್ಧಿ ಗೊತ್ತಿದ್ದರೂ ತಾಂಡವ್​, ಭಾಗ್ಯಳನ್ನು ಒಪ್ಪಿಕೊಳ್ತಾನೆ ಎನ್ನುವ ಹುಚ್ಚು ಕಲ್ಪನೆ ಕುಸುಮಳದ್ದು. ಇದೇ ಕಾರಣಕ್ಕೆ ಇಬ್ಬರೂ ಟ್ರಿಪ್​ಗೆ ಹೋಗುವಂತೆ ಹೇಳಿದ್ದಾಳೆ. ಆ ಟಿಕೆಟ್​ ಪಡೆದುಕೊಂಡಿರೋ ತಾಂಡವ್​, ಭಾಗ್ಯಳ ಜೊತೆ ಹೋಗಲು ಸುತರಾಂ ಒಪ್ಪಲಿಲ್ಲ. ಅವಳನ್ನು ಮನಸೋ ಇಚ್ಛೆ ಮಾಮೂಲಿನಂತೆ ಬೈದು, ಈ ಟಿಕೆಟ್​ ಅನ್ನು ಬೇರೆ ಯಾರಿಗಾದ್ರೂ ಕೊಡುವಂತೆ ಹೇಳುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾನೆ.


ಇತ್ತ ಹೋಟೆಲ್​ನಲ್ಲಿ, ಓನರ್​ ಬಂದು ಭಾಗ್ಯಳಿಗೆ ನಮಗೆ ಒಂದು ಒಳ್ಳೆಯ ಆಫರ್​ ಬಂದಿದೆ. ಟೂರ್​ ಪ್ಯಾಕೇಜ್​ನವರಿಗೆ ನಮ್ಮದೇ ಹೋಟೆಲ್​ ಅಡುಗೆ, ನೀವೇ ಹೋಗಬೇಕು ಎಂದಿದ್ದಾನೆ. ಆಗ ಮಾತುಮಾತಿನಲ್ಲಿ ಭಾಗ್ಯಳಿಗೆ ಇದು ತನಗೆ ಸಿಕ್ಕಿರುವ ಲಾಟರಿ ಟಿಕೆಟ್​ ಟೂರ್​ ಪ್ಯಾಕೇಜ್​ ಎನ್ನುವುದು ತಿಳಿದಿದೆ. ಆ ಅದೃಷ್ಟ ತನಗಂತೂ ಸಿಕ್ಕಿಲ್ಲ.  ಆದರೆ ತನಗೆ ಸಿಕ್ಕಿರುವ ಲಾಟರಿಯಲ್ಲಿ ಬೇರೆ ಯಾರೋ ದಂಪತಿ ಹೋಗುತ್ತಿದ್ದಾರಲ್ಲ, ಅವರನ್ನು ನೋಡುವ ಭಾಗ್ಯ ಆದರೂ ತನಗೆ ಸಿಗಲಿ ಎನ್ನುವ ಕಾರಣಕ್ಕೆ ಅಲ್ಲಿ ತಾನೇ ಹೋಗುವುದಾಗಿ ಹೇಳಿದ್ದಾಳೆ. ಆದರೆ ಇಲ್ಲಿ ಇರುವುದೇ ಟ್ವಿಸ್ಟ್​. ಅಷ್ಟಕ್ಕೂ ಭಾಗ್ಯಳಿಗೆ ಸಿಕ್ಕಿರುವ ಟಿಕೆಟ್​ ಪಡೆದು ಲವರ್​ ಜೊತೆ ಹನಿಮೂನ್​ ಪ್ಲ್ಯಾನ್​ ಮಾಡಿದ್ದಾನೆ ಭಾಗ್ಯಳಾ ಪತಿದೇವ! ಹೌದು. ಆ ಟಿಕೆಟ್​ ಅನ್ನು ಬೇರೆ ಯಾರಿಗೂ ಕೊಡದೇ ಶ್ರೇಷ್ಠಾಳ ಜೊತೆ ತಾನೇ ಗಂಡ-ಹೆಂಡತಿ ರೂಪದಲ್ಲಿ ಪ್ರವಾಸಕ್ಕೆ ಹೋಗಿದ್ದಾನೆ.

Tap to resize

Latest Videos

undefined

ಹಾಸನದ ಹುಡ್ಗೀರು ನಟ ಜೆಕೆಗೆ ಚಿವುಟಿ, ಕಚ್ಚಿ, ಹರಿದು ತಿಂದೇಬಿಟ್ರು! ಆ ದಿನ ನೆನೆದ ನಿರ್ದೇಶಕ ಆರೂರು ಜಗದೀಶ್​

ತನಗೆ ಸಿಕ್ಕಿರೋ ಟಿಕೆಟ್​ನಿಂದ ಒಂದು ಜೋಡಿ ಟ್ರಿಪ್​ಗೆ ಹೋಗ್ತಿದೆ ಎಂದು ಭಾಗ್ಯಳಿಗೆ ಗೊತ್ತಿದ್ದರೂ, ಅದು ತನ್ನ ಗಂಡನೇ ಎಂದು ತಿಳಿದಿಲ್ಲ. ಅದಕ್ಕಾಗಿ ಆ ಜೋಡಿಗೆ ರೊಮ್ಯಾಂಟಿಕ್ ಮೂಡ್​ ಬರಲು ಸಾಕಷ್ಟು ಸಿದ್ಧತೆ ಮಾಡಿದ್ದಾಳೆ. ತಾಂಡವ್​ ಜೊತೆ ತಾನು ಇಂಥ ಟ್ರಿಪ್​ಗೆ ಹೋದರೆ ಅಲ್ಲಿಯ ವಾತಾವರಣ ಹೇಗಿರಬೇಕು ಎಂದು ಕನಸು ಕಾಣುತ್ತಿದ್ದ ಭಾಗ್ಯ, ಈಗ ಈ ಜೋಡಿಗೆ ಅದೇ ರೀತಿ ಅರೇಂಜ್​  ಮಾಡುತ್ತಿದ್ದಾಳೆ. ಅಲ್ಲಿ ಅರೇಂಜ್​ ಮಾಡಿರುವುದು ಭಾಗ್ಯ ಎನ್ನುವುದು ಗೊತ್ತಿಲ್ಲದೇ ತಾಂಡವ್​ ಮತ್ತು ಶ್ರೇಷ್ಠಾ ಅರೇಂಜ್​ಮೆಂಟ್ ಅನ್ನು ಹಾಡಿ ಹೊಗಳುತ್ತಿದ್ದಾರೆ. ಅಲ್ಲಿಯ ಎಲ್ಲಾ ಸೌಕರ್ಯಕ್ಕೂ ಭಾಗ್ಯಳಿಗೆ ಥ್ಯಾಂಕ್ಸ್​ ಹೇಳ್ತಿದ್ದಾನೆ ತಾಂಡವ್​. ಇಂಥ ಅರೇಂಜ್​ಮೆಂಟ್​ ಬೇರೆ ಯಾರೋ ಮಾಡಿದ್ದು ಎನ್ನುವುದು ಅವನ ಕಲ್ಪನೆ.

ಇದೀಗ ಮತ್ತೊಂದು ಟ್ವಿಸ್ಟ್​ ಬಂದಿದೆ. ಅದೇನೆಂದರೆ, ಅಲ್ಲಿಗೆ ಬಂದಿರೋ ಜೋಡಿ ಮದುವೆಯಾಗುತ್ತಿದೆ ಎಂದು ಸಹಾಯಕಿ ಬಂದು ಭಾಗ್ಯಳಿಗೆ ಹೇಳಿದಾಗ, ಇದರ ಅರಿವೇ ಇಲ್ಲದ ಭಾಗ್ಯ ತಾಳಿಯನ್ನು ರೆಡಿ ಮಾಡಿದ್ದಾಳೆ. ಶಾಸ್ತ್ರೋಕ್ತವಾಗಿ ಅದನ್ನು ರೆಡಿ ಮಾಡಿ ತಾನೇ ತನ್ನ ಕೈಯಾರೆ ಆ ಜೋಡಿಗೆ ಕೊಡಲು ಬಂದಿದ್ದಾಳೆ. ಅಷ್ಟರಲ್ಲಿ ಕಂಠಪೂರ್ತಿ ಕುಡಿದಿದ್ದ ತಾಂಡವ್​ ಮತ್ತು ಶ್ರೇಷ್ಠಾ ರೊಮ್ಯಾಂಟಿಕ್​ ಮೂಡ್​ನಲ್ಲಿ ಇದ್ದಾರೆ. ಈಗಲೇ ನನಗೆ ಐ ಲವ್​ ಯೂ ಹೇಳು ಎಂದು ಶ್ರೇಷ್ಠಾ ಹೇಳಿದ್ದರಿಂದ ತಾಂಡವ್​ ಜೋರಾಗಿ ಕೂಗಿ ಕೂಗಿ I LOVE YOU ಎಂದಿದ್ದಾನೆ. ಭಾಗ್ಯಳನ್ನು ಮೂದಲಿಸಿದ್ದಾನೆ. ಏನು ಆಗಬಾರದು ಎಂದು ಕುಸುಮಾ ಮತ್ತು ಮನೆಯವರು ಅಂದುಕೊಂಡಿದ್ರೋ ಅದೆಲ್ಲಾ ಆಗಿಯೇ ಹೋಗಿದೆ. ಇವರಿಬ್ಬರ ಅಸಲಿಯತ್ತು ಭಾಗ್ಯಳಿಗೆ ತಿಳಿದಿದೆ. ತಾಳಿ ತೆಗೆದುಕೊಂಡು ಬಂದಿರೋ ಭಾಗ್ಯ ಎಲ್ಲವನ್ನೂ ಕಣ್ಣಾರೆ ಕಂಡಿದ್ದಾಳೆ! ಇದೀಗ ಮುಂದೇನು ಎನ್ನುವ ಕುತೂಹಲ ಸೀರಿಯಲ್​ದು.

ಸಂಜನಾ ಸೀರಿಯಲ್​ ಬಿಟ್ಟಿರೋ ನಿಜ ಕಾರಣ ವಿವರಿಸುತ್ತಲೇ ವೀಕ್ಷಕರಿಗೆ ಸಿಹಿ ಸುದ್ದಿ ಕೊಟ್ಟ ಪುಟ್ಟಕ್ಕನ ಮಕ್ಕಳು ನಿರ್ದೇಶಕ!

click me!