ಅಶ್ವಿನಿ ನಕ್ಷತ್ರ ಸೀರಿಯಲ್ ಸಂದರ್ಭದಲ್ಲಿ ಅದರ ನಟ ಜಯರಾಮ್ ಕಾರ್ತಿಕ್ ಅಂದ್ರೆ ಜೆಕೆ ಅವರನ್ನು ಹಾಸನದ ಹುಡುಗಿಯರು ಏನೆಲ್ಲಾ ಮಾಡಿದ್ರು ಎಂಬುದನ್ನು ನಿರ್ದೇಶಕ ಆರೂರು ಜಗದೀಶ್ ನೆನಪಿಸಿಕೊಂಡಿದ್ದಾರೆ.
ಸೀರಿಯಲ್ಗಳು ಅಂದ್ರೆ ಹಾಗೇನೇ. ಸಿನಿಮಾ ತಾರೆಯರಿಗೂ ಇಲ್ಲದಷ್ಟು ಫೇಮಸ್ ಆಗ್ತಿದ್ದಾರೆ ಕೆಲವು ಧಾರಾವಾಹಿ ನಟ-ನಟಿಯರು. ಏಕೆಂದ್ರೆ ಸಿನಿಮಾಕ್ಕಿಂತಲೂ ಹೆಚ್ಚು ಕ್ರೇಜ್ ಈಗ ಸೀರಿಯಲ್ಗಳ ಮೇಲಿದೆ. ಅದರಲ್ಲಿಯೂ ಸಿನಿಮಾ ತಾರೆಯರನ್ನು ತಮ್ಮ ದೇವರು ಎಂದುಕೊಂಡು ಅವರ ಒಂದು ಲುಕ್ಗಾಗಿ ಹಲವು ಅಭಿಮಾನಿಗಳು ಜೀವವನ್ನೇ ಪಣಕ್ಕಿಟ್ಟು ಅವರನ್ನು ನೋಡಲು ನಿಲ್ಲುವುದು ಒಂದೆಡೆಯಾದರೆ, ಸೀರಿಯಲ್ ನಟ-ನಟಿಯರ ಮೇಲೂ ಹುಚ್ಚು ಅಭಿಮಾನ ಇರುವುದು ಸಹಜವೇ. ಪ್ರತಿದಿನವೂ ತಮ್ಮ ಮನೆಯ ಟಿವಿಯಲ್ಲಿ ಬರುವ ಈ ನಟ-ನಟಿಯರನ್ನು ನೋಡಿ ಹುಚ್ಚೆದ್ದು ಹೋಗುವುದು ಸಹಜವೇ. ಅದರಲ್ಲಿಯೂ ಸಿಕ್ಸ್ಪ್ಯಾಕ್ ಯುವಕರನ್ನು ನೋಡಿದರೆ ಯುವತಿಯರಿಗೆ ಅದೇನೋ ರೋಮಾಂಚನ. ಅದಕ್ಕಾಗಿಯೇ ಅಂಥ ನಟರ ಮೇಲೆ ಬಹುಬೇಗ ಕ್ರಷ್ ಆಗಿಬಿಡುತ್ತದೆ. ಇನ್ನು ಇವರು ಸೀರಿಯಲ್ ಸಂತೆ ಅಂತನೋ, ಶೂಟಿಂಗ್ಗೆ ಅಂತನೋ ಬೇರೆ ಕಡೆ ಹೋದ್ರೆ ಸ್ಥಿತಿ ಹೇಗಿರಬೇಡ?
ಅಂಥದ್ದೇ ಒಂದು ಕುತೂಹಲದ ಮಾಹಿತಿಯನ್ನು ಶೇರ್ ಮಾಡಿದ್ದಾರೆ ನಿರ್ದೇಶಕ ಆರೂರು ಜಗದೀಶ್. ಪುಟ್ಟಕ್ಕನ ಮಕ್ಕಳು, ಜೊತೆ ಜೊತೆಯಲಿ, ಭೂಮಿಗೆ ಬಂದ ಭಗವಂತ, ಅಶ್ವಿನಿ ನಕ್ಷತ್ರ... ಹೀಗೆ ಹಲವಾರು ಹಿಟ್ ಸೀರಿಯಲ್ಗಳನ್ನು ನೀಡಿದವರು. ಇದೀಗ ಅವರು 2013ರಲ್ಲಿ ಪ್ರಸಾರ ಆಗ್ತಿದ್ದ ಅಶ್ವಿನಿ ನಕ್ಷತ್ರ ಸೀರಿಯಲ್ ಹೀರೋ ಜೆಕೆ ಅಂದ್ರೆ ಜಯರಾಮ್ ಕಾರ್ತಿಕ್ ಅವರ ಕುರಿತು ಒಂದು ರಸವತ್ತಾದ ಪ್ರಸಂಗವನ್ನು ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಈ ಸೀರಿಯಲ್‌ನಲ್ಲಿ ನಟ ತನ್ನ ಹೆಂಡತಿಗೆ ಹೆಂಡ್ತಿ ಎಂದು ಕರೆಯುತ್ತಿದ್ದುದು ನೆನಪಿರಬಹುದು. ಅದನ್ನೇ ಫಾಲೋ ಮಾಡಿ ಹಲವು ಗಂಡಂದಿರು ತಮ್ಮ ಪತ್ನಿಗೆ ಹೆಂಡ್ತಿ ಎಂದು ಕರೆಯುವ ಟ್ರೆಂಡ್ ಶುರುವಾಗಿತ್ತು.
undefined
ಸಿಕ್ಸ್ ಪ್ಯಾಕ್ ಜೆಕೆ ಅವರು ಹಾಸನದ ಒಂದು ಲೇಡೀಸ್ ಕಾಲೇಜ್ನಲ್ಲಿ ಶೂಟಿಂಗ್ಗೆ ಹೋದಾಗ ಆದ ಅನುಭವವನ್ನು ಈಗ ಆರೂರು ಜಗದೀಶ್ ಹೇಳಿದ್ದಾರೆ. ಆ ಕಾಲೇಜಿನ ಯುವತಿಯರಿಗೆ ಲೈನ್ನಲ್ಲಿ ಬರುವಂತೆ ಹೇಳಲಾಗಿತ್ತು. ನೀಟ್ ಆಗಿ ಹೇಗೆ ಬರಬೇಕು ಎಂದೆಲ್ಲಾ ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ ಅಲ್ಲಿ ಆದದ್ದೇ ಬೇರೆ. ಜಯರಾಮ್ ಕಾರ್ತಿಕ್ ಅವ್ರು ಬರ್ತಿದ್ದಂತೆಯೇ ಹುಡುಗಿಯರು ತಳ್ಳಾಡಿ, ವೇದಿಕೆ ಏರಿ, ಜೆಕೆ ಅವರನ್ನು ಸುತ್ತುವರಿದು ಮುತ್ತು ಕೊಟ್ಟರು, ಚಿವುಟಿದರು, ಜೆನ್ನೊಣದಂತೆ ಕಚ್ಚಿದರು, ನಟನನ್ನು ಹರಿದು ತಿಂದೇಬಿಟ್ರು ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ನಾವು ನಾಲ್ಕು ಮಂದಿ ಕ್ಯಾಮೆರಾಮೆನ್ ಇದ್ವಿ. ನಾವೂ ಕೂಡ ಏನೂ ಮಾಡಲು ಆಗದ ಸ್ಥಿತಿ. ಕ್ಯಾಮೆರಾ ಬಿದ್ದೇ ಹೋಯ್ತು. ಉಫ್ ಆ ದಿನ ಮಾತ್ರ ಸುಸ್ತಾಗಿ ಹೋಯ್ತು. ಸೀರಿಯಲ್ ಎಂದ್ರೆ ಎಷ್ಟು ಕ್ರೇಜ್ ಎನ್ನುವುದು ಇದರಿಂದ ಗೊತ್ತಾಗತ್ತೆ ಎಂದಿದ್ದಾರೆ.
ಇನ್ನು ಜಯರಾಂ ಕಾರ್ತಿಕ್ ಕುರಿತು ಹೇಳುವುದಾದರೆ, ಈ ಸೀರಿಯಲ್‌ನಲ್ಲಿ ಇವರದ್ದು ಆಂಗ್ರಿಮ್ಯಾನ್ ಪಾತ್ರ. ಸಿಟ್ಟಿನ, ಸೇಡು ತುಂಬಿಕೊಂಡಿದ್ದ ವ್ಯಕ್ತಿಯೊಬ್ಬ ಹುಡುಗಿಯ ದೆಸೆಯಿಂದ ಬದಲಾಗ್ತಾ ಹೋಗೋದು ಈ ಸೀರಿಯಲ್ ಸ್ಟೋರಿ. ಈ ಸೀರಿಯಲ್ ನಟನಿಗೆ ಸಕತ್ ಬ್ರೇಕ್ ಕೊಟ್ಟಿದ್ದೂ ಅಲ್ಲದೇ ಅಭಿಮಾನಿಗಳ ದಂಡೇ ಬಂತು. ಇದೇ ಸಕ್ಸಸ್ನಿಂದ ಅವರು, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಸಕ್ಸಸ್ ಸಿಗಲಿಲ್ಲ. ಇಲ್ಲಿ ಲಕ್ ಕೈಹಿಡಿಯುವುದಿಲ್ಲ ಎಂದು ತಿಳಿದ ಬಳಿಕ ಅವರು ಹಿಂದಿ ಸೀರಿಯಲ್‌ಗೆ ಹೋದರು. ಅಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಟೆಲಿಕಾಸ್ಟ್ ಆಗುತ್ತಿದ್ದ 'ಸಿಯಾ ಕೆ ರಾಮ್' ಸೀರಿಯಲ್ ಯಲ್ಲಿ ರಾವಣನ ಪಾತ್ರ ಮಾಡೋ ಮೂಲಕ ಮತ್ತೆ ಸಕ್ಸಸ್ ಕಂಡರು. ಇಲ್ಲಿ ಹೀರೋ ಆಗಿ ಮೆರೆಯುತ್ತಿದ್ದವರಿಗೆ ವಿಲನ್ ರೋಲ್ ನಿಭಾಯಿಸೋದು ಆರಂಭದಲ್ಲಿ ಕೊಂಚ ಚಾಲೆಂಜಿಂಗ್ ಅನಿಸಿದರೂ ಅವರ ವಿಲನ್ ರೋಲ್ ಅನ್ನು ಕೂಡ ಜನ ಇಷ್ಟಪಟ್ಟರು. ಈಗ ಕೆಲವು ಸೀರಿಯಲ್ಗಳಲ್ಲಿ ನಟಿಸುತ್ತಿದ್ದಾರೆ.
ಪುಟ್ಟಕ್ಕನ ಮಕ್ಕಳು ತಂಡಕ್ಕೆ ಬಿಗ್ಬಾಸ್ ಹಂಸಾ ಮೋಸ! ದೂರು ಕೊಟ್ಟ ನಿರ್ದೇಶಕ ಹೇಳಿದ್ದೇನು?