e-KYC ದೃಢೀಕರಣ ಪೂರ್ಣಗೊಳಿಸದ APL ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಫಲಾನುಭವಿಗಳು ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆ, ಆಯುಷ್ಮಾನ್ ಭಾರತ ಯೋಜನೆ ಸೇರಿದಂತೆ ಹಲವು ಸೌಲಭ್ಯಗಳು ಸಿಗುವುದಿಲ್ಲ.
ಬೆಂಗಳೂರು (ನ.16): ರಾಜ್ಯ ಸರ್ಕಾರ ಎಪಿಎಲ್ ಕಾರ್ಡ್‌ದಾರರಿಗೆ ಶಾಕ್ ನೀಡಿದೆ.ರೇಷನ್ ಕಾರ್ಡ್‌ಗೆ ದೃಢೀಕರಣ (e-kyc) ಮಾಡದ ಕಾರಣಕ್ಕೆ APL ಕಾರ್ಡ್ ರದ್ದು ಮಾಡಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ. ಅದರೊಂದಿಗೆ ಎಪಿಎಲ್ ಕಾರ್ಡ್‌ದಾರರಿಗೆ ನೀಡುತ್ತಿದ್ದ ರೇಷನ್ ಅನ್ನೂ ಸ್ಥಗಿತ ಮಾಡಲಾಗಿದೆ. ಸರ್ಕಾರ ಹಾಗೂ ಆಹಾರ ಇಲಾಖೆ ವಿರುದ್ಧ APL ಕಾರ್ಡ್‌ದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯದಲ್ಲಿ 25,62,562 APL ಕಾರ್ಡ್‌ಗಳಿವೆ. ನಕಲಿ ರೇಷನ್ ಕಾರ್ಡ್ ತಡೆಯುವ ನಿಟ್ಟಿನಲ್ಲಿ e-KYCಅನ್ನು ಇಲಾಖೆ ಕಡ್ಡಾಯ ಮಾಡಿತ್ತು. ಈ ಹಿಂದೆ ಬೋಗಸ್ ಕಾರ್ಡ್ ಗಳನ್ನ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು. ಈ ವೇಳೆ ರೇಷನ್ ಕಾರ್ಡ್ ಗೆ ಆಧಾರ್ ಜೋಡಣೆ ನಿಯಮವನ್ನು ಇಲಾಖೆ ತಂದಿತ್ತು.
ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ, ಯುವಕರು 70 ಗಂಟೆ ಕೆಲಸ ಮಾಡಲಿ: ಇನ್ಫಿ ನಾರಾಯಣ ಮೂರ್ತಿ
undefined
ಈ ವೇಳೆ ಫಲಾನುಭವಿಗಳು ಶೇಕಡಾ 100ರಷ್ಟು ಆಧಾರ್ ಜೋಡಣೆ ಮಾಡಿದ್ದರು. ಈ ಹಂತದಲ್ಲಿ ಲಕ್ಷಾಂತರ ಬೋಗಸ್ ಕಾರ್ಡ್ ಗಳು ಪತ್ತೆಯಾಗಿತ್ತು. 2019-2022ರ ವರೆಗೆ ರೇಷನ್ ಕಾರ್ಡ್ ಗೆ ಮತ್ತೆ e-KYC ಪ್ರಕ್ರಿಯೆ ಮಾಡಿಸುವಂತೆ ಇಲಾಖೆ ನಿಯಮ ಜಾರಿ ಮಾಡಿತ್ತು. ಈ ಸಂಧರ್ಭದಲ್ಲಿ ಶೇ. 80ರಷ್ಟು APL ಫಲಾನುಭವಿಗಳು e-KYC ಮಾಡಿಕೊಂಡಿದ್ದರು. ಇನ್ನುಳಿದ ಶೇ. 20 ರಷ್ಟು ಕಾರ್ಡ್ ದಾರರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ e-KYC ಮಾಡಿಕೊಂಡಿರಲಿಲ್ಲ. ಅಂತವರ ಕಾರ್ಡ್ ಗಳು ರದ್ದಾಗಿವೆ.
ನಂದ ಲವ್ಸ್ ನಂದಿತಾ ಅಲ್ಲ.. ಇದು ನಿತ್ಯಾನಂದ ಕ್ರಿಯೇಟ್ಸ್ ನಿತ್ಯಾನಂದಿತಾ!
ಏನೆಲ್ಲಾ ಸೇವೆಯಿಂದ ವಂಚಿತ
1. APL ರದ್ದತಿಯಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪಡೆಯುತ್ತಿರುವ ಹಣ ಸ್ಥಗಿತ
2. ಕುಟುಂಬದಡಿ ಐಡಿ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲ್ಲ
3. ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಆಗಲ್ಲ
4. ವಿವಿಧ ಸರಕಾರಿ ಸೌಲಭ್ಯಗಳು ಸಿಗಲ್ಲ
5. ಆಯುಷ್ಮಾನ್ ಭಾರತ ಯೋಜನೆ ಲಾಭ ಪಡೆಯಲು ಸಾಧ್ಯವಾಗಲ್ಲ
6. ರಿಯಾಯಿತಿ ದರದಲ್ಲಿ ಅಕ್ಕಿ ಸಿಗಲ್ಲ
7. ಮುಂದಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳಿಗೆ ಎಪಿಎಲ್ ಕಡ್ಡಾಯ ಮಾಡಿದರೆ ಈ ಸೌಲಭ್ಯ ಸಿಗಲ್ಲ
8. ಕೇಂದ್ರ ಸರ್ಕಾರದಿಂದ ನೀಡುವ ಮೀಸಲಾತಿ ದೊರೆಯಲ್ಲ