Digitalization: ರಾಯಚೂರಿನ ಎಸಿ ಕಚೇರಿ ಈಗ ಫುಲ್ ಡಿಜಿಟಲ್..!

Feb 26, 2022, 11:14 AM IST

ರಾಯಚೂರು(ಫೆ.26): ಸರ್ಕಾರಿ ಕಚೇರಿಯಲ್ಲಿ ಭೂ ದಾಖಲೆಗಳು ಪಡೆಯಬೇಕು ಅಂದ್ರೆ ವರ್ಷಗಟ್ಟಲ್ಲೇ ಅಲೆದರೂ ದಾಖಲೆಗಳು ಸಿಗಲ್ಲ ಎಂಬ ಆರೋಪ ಇದೆ. ಎಷ್ಟು ಜನರು ದಾಖಲೆಗಳು ಸಿಗದೇ ಆಸ್ತಿ ಇನ್ನೊಬ್ಬರ ಪಾಲಾಗಿರುವ ಹತ್ತಾರು ಘಟನೆಗಳು ನಮ್ಮ ಮುಂದೆ ಇವೆ. ಈ ಎಲ್ಲಾ ಆರೋಪವನ್ನ ತಪ್ಪಿಸಲು ರಾಯಚೂರಿನ ಸಹಾಯಕ ಆಯುಕ್ತರ ಕಚೇರಿ ತನ್ನ ಎಲ್ಲಾ ಭೂ ದಾಖಲೆಗಳಿಗೆ ಡಿಜಿಟಲ್ ರೂಪ ನೀಡಿದೆ. 

ರಾಯಚೂರಿನ ಎಸಿ ಕಚೇರಿಯಲ್ಲಿ ರಾಯಚೂರು, ದೇವದುರ್ಗ, ಸಿರವಾರ ಹಾಗೂ ಮಾನವಿ ತಾಲೂಕುಗಳ ಸುಮಾರು 14 ಲಕ್ಷಕ್ಕೂ ಅಧಿಕ ಪುಟಗಳ ಭೂ ದಾಖಲೆಗಳು ಇದ್ದು, ಯಾವ ದಾಖಲೆಗಳು ಎಲ್ಲಿವೆ ಎಂದು ಹುಡುಕಾಟ ನಡೆಸಲು ಸಿಬ್ಬಂದಿ ಗೋಳಾಟ ನಡೆಸುತ್ತಿದ್ರು. ಜನರು ಸಹ ತಮಗೆ ಬೇಕಾದ ಭೂ ದಾಖಲೆಗಳು ಪಡೆಯಲು 3-4 ತಿಂಗಳು ಕಚೇರಿಗೆ ಅಲೆದರೂ ದಾಖಲೆಗಳು ಮಾತ್ರ ಸಿಗದೇ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ರು. ಇದನ್ನ ಗಮನಿಸಿದ ರಾಯಚೂರಿನ ಹಿಂದಿನ ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಕಚೇರಿಯಲ್ಲಿನ ಎಲ್ಲಾ ಭೂ ದಾಖಲೆಗಳನ್ನ ಡಿಜಿಟಲೀಕರಣ ಮಾಡಲು ಪ್ಲಾನ್ ಮಾಡಿದ್ರು. ಅದರಂತೆ ಕೆಟಿಟಿಪಿ ಕಾಯ್ದೆ ಅನುಸಾರ ಇ-ಟೆಂಡರ್ ಮಾಡಿ ಓರಾ ಟೆಕ್ ಎನ್ನುವ ಸಂಸ್ಥೆಗೆ ಟೆಂಡರ್ ನೀಡಿದ್ರು. ಸಂಸ್ಥೆಯೂ 3 ತಿಂಗಳ ಕಾಲ ಕಚೇರಿಯಲ್ಲಿ ಕೃಷ್ಣಾ ಮೇಲ್ಡಂಡೆ ಯೋಜನೆ ಮತ್ತು ತುಂಗಾಭದ್ರಾ ಕಾಲುವೆಗಾಗಿ ಭೂಮಿ ದಾಖಲೆಗಳು ಸೇರಿದಂತೆ 14 ಲಕ್ಷ ಪುಟಗಳನ್ನ ಸಂಪೂರ್ಣ ಸ್ಕ್ಯಾನಿಂಗ್ ಮಾಡಿ ಡಿಜಿಟೈಜಿಷನ್ ಮಾಡಿ ಸಾಫ್ಟ್ ಕಾಫಿ ಕೂಡ ಕಂಪ್ಯೂಟರ್‌ಗೆ ಅಳವಡಿಕೆ ಮಾಡಲಾಗಿದೆ. ಇದನ್ನ ಗಮನಿಸಿದ ಸಾರ್ವಜನಿಕರು ಇನ್ನೂ ಮುಂದಾದರೂ ದಾಖಲೆಗಳಿಗೆ ಕಚೇರಿಗೆ ಅಲೆಯುವುದು ತಪ್ಪಬಹುದು ಅಂತಾರೆ.

Furniture Expo: ಒಂದೇ ಸೂರಿನಡಿ ಸಿಗಲಿದೆ ಆಕರ್ಷಕ ವಿನ್ಯಾಸ, ವೈವಿಧ್ಯಮಯ ವಸ್ತುಗಳು

ಇನ್ನು ಇನಾಂ ಭೂಮಿ, ಭೂಸ್ವಾಧೀನ ದಾಖಲೆಗಳು, ಭೂ ವಿವಾದ ವ್ಯಾಜ್ಯಗಳ ದಾಖಲೆಗಳನ್ನ ಡಿಜಿಟಲೀಕರಣ ಮಾಡುವುದರ ಜೊತೆಗೆ ರೆಕಾರ್ಡ್ ರೂಂನಲ್ಲಿ ಮೂಲ ದಾಖಲೆಗಳನ್ನ ಬಂಡಲ್‌ಗಳಲ್ಲಿ ಸಂಗ್ರಹಿಸಿ ಇಡಲಾಗಿದೆ. 80-90 ವರ್ಷಗಳ ದಾಖಲೆಗಳನ್ನ ರ್ಯಾಕ್ನಲ್ಲಿ ಎಲ್ಲಾ ಬಂಡಲ್‌ಗಳ ಮೇಲೆ ನಂಬರ್ ಬರೆದು ಇಟ್ಟಿದ್ದರಿಂದ ಸರ್ವೇ ನಂಬರ್ ಕಂಪ್ಯೂಟರ್‌ನಲ್ಲಿ ದಾಖಲು ಮಾಡಿದರೆ ಸಾಕು ಬಂಡಲ್‌ಗಳ ಮಾಹಿತಿ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ ಕ್ರೌಡ್ ಸ್ಟೋರೇಜ್ ಸಹ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಕ್ಷಣದಲ್ಲಿ ನಾವು ಮಾಹಿತಿ ನೀಡಲು ಅನುಕೂಲವಾಗಿದೆ ಅಂತಾರೇ ರಾಯಚೂರಿನ ಸಹಾಯಕ ಆಯುಕ್ತರು.