ಕೇವಲ ₹6,499ಕ್ಕೆ 840 ಗಂಟೆಗಳ ಬ್ಯಾಟರಿ ಬಾಳಿಕೆ ನೀಡುವ Tecno Pop 9 5G ಸ್ಮಾರ್ಟ್‌ಫೋನ್ ನವೆಂಬರ್ 26 ರಂದು ಅಮೆಜಾನ್‌ನಲ್ಲಿ ಬಿಡುಗಡೆಯಾಗಲಿದೆ. 6.67 ಇಂಚಿನ ಡಿಸ್‌ಪ್ಲೇ, MediaTek Helio G50 ಪ್ರೊಸೆಸರ್ ಮತ್ತು 13MP ಕ್ಯಾಮೆರಾ ಹೊಂದಿದೆ.
ನವದೆಹಲಿ: ನವೆಂಬರ್ 26ರಂದು ಕೇವಲ 6,499 ರೂಪಾಯಿಯಲ್ಲಿ ಒಮ್ಮೆ ಚಾರ್ಜ್ ಮಾಡಿದ್ರೆ ಬರೋಬ್ಬರಿ 840 ಗಂಟೆ ಕಾಲ ಬರೋ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ. ಈ ಸ್ಮಾರ್ಟ್‌ಫೋನ್ ಬೆಲೆ ಮೇಲೆ ಗ್ರಾಹಕರಿಗೆ 200 ರೂ.ವರೆಗೂ ರಿಯಾಯ್ತಿ ಸಿಗಲಿದೆ. ನವೆಂಬರ್ 26ರಂದು ಅಮೆಜಾನ್ ಪ್ಲಾಟ್‌ಫಾರಂನಲ್ಲಿ ಈ ಫೋನ್ ಲಭ್ಯವಿರಲಿದೆ. ಗಿಲ್ಟರಿ ವೈಟ್, ಲೈಮ್ ಗ್ರೀನ್ ಮತ್ತು ಸ್ಟಾರಟ್ರೆಲ್ ಬ್ಲ್ಯಾಕ್ ಬಣ್ಣದಲ್ಲಿ ಸಿಗಲಿದೆ. ಗ್ರಾಹಕರು ತಮ್ಮಿಷ್ಟ ಬಣ್ಣದ ಸ್ಮಾರ್ಟ್‌ಫೋನ್ ಆಯ್ಕೆ ಮಾಡಿಕೊಳ್ಳಬಹುದು.
ಟೆಕ್ನೋ ಪಾಪ್ 9 5ಜಿ ಸ್ಮಾರ್ಟ್‌ಫೋನ್ (Tecno Pop 9 5G) ಎರಡು ದಿನಗಳಲ್ಲಿಯೇ ಅಮೆಜಾನ್‌ನಲ್ಲಿ ಸಿಗಲಿದೆ. ಬಹುಕಾಲದವರೆಗೆ ಬ್ಯಾಟರಿ ಬಾಳಿಕೆ ಬರುವ ಕಾರಣ ದೀರ್ಘ ಪ್ರಯಾಣ ವರ್ಗದ ಜನರಿಗೆ ಈ ಸ್ಮಾರ್ಟ್‌ಫೋನ್ ಒಳ್ಳೆಯ ಆಯ್ಕೆಯಾಗಲಿದೆ. ಹೊಸ ಟೆಕ್ನೋ ಪಾಪ್ Android 14 GO ಆಧಾರಿತ HiOS 14 ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ 5G ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿದ್ದು, HD Plus ರೆಸಲ್ಯೂಶನ್, 90 Hz ರಿಫ್ರೆಶ್ ರೇಟ್, 180 Hz ಟಚ್ ಸ್ಯಾಂಪ್ಲಿಂಗ್ ರೇಟ್, 90% ಸ್ಟ್ರೀನ್ ಟು ಬಾಡಿ ರೇಶಿಯೋ ಮತ್ತು 20:09 ಅಕಾರ ಅನುಪಾತದೊಂದಿಗೆ ಬರುತ್ತದೆ. ಫೋನ್ ಮೀಡಿಯಾ ಟೆಕ್ ಹೆಲಿಯೋ ಜಿ 50 ಪ್ರೊಸೆಸರ್ ಒಳಗೊಂಡಿದೆ.
ಹೆಲಿಯೋ ಜಿ 50 ಪ್ರೊಸೆಸರ್ ಜೊತೆ ಮಾರುಕಟ್ಟೆಗೆ ಬರುತ್ತಿರುವ ಟೆಕ್ನೋ ಪಾಪ್ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಇನ್ನು ಸ್ಟೋರೇಜ್ ವಿಷಯಕ್ಕೆ ಬಂದ್ರೆ 6GB (3+3GB) RAM ಮತ್ತು 64GB ಇಂಟರ್‌ನಲ್ ಸ್ಟೋರೇಜ್ ಒಳಗೊಂಡಿದೆ. ಸ್ಟೋರೇಜ್ ಸಾಮರ್ಥ್ಯವನ್ನು 1TBವರೆಗೂ ವಿಸ್ತರಿಸುವ ಆಯ್ಕೆಯನ್ನು ನೀಡಲಾಗಿದೆ.
ಇದನ್ನೂ ಓದಿ: 1 ಜನವರಿ 2025ರಿಂದ ಟೆಲಿಕಾಂ ನಿಯಮಗಳಲ್ಲಿ ದೊಡ್ಡ ಬದಲಾವಣೆ; Jio, Airtel, Voda ಮತ್ತು BSNL ಗ್ರಾಹಕರ ಪರಿಣಾಮ?
ಕ್ಯಾಮೆರಾ
ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನ್ ಪ್ರೈಮರಿ (ಹಿಂಬದಿ) ಕ್ಯಾಮೆರಾ 13 ಮೆಗಾಪಿಕ್ಸೆಲ್, 4x ಡಿಜಿಟಲ್ ಝೂಮ್, A1 ಕ್ಯಾಮ್, ವಿಡಿಯೋ, ಬ್ಯೂಟಿ ಮೋಡ್, ಪೋರ್ಟ್ರೇಟ್, ಟೈಮ್ ಲ್ಯಾಪ್ಸ್, ಪನೋರಮಾ, ಪ್ರೊಫೆಷನಲ್, 1080P ವಿಡಿಯೋ ರೆಕಾರ್ಡಿಂಗ್ ಮತ್ತು ಫ್ರಂಡ್ ಕ್ಯಾಮೆರಾ 5 ಮೆಗಾಪಿಕ್ಸೆಲ್ ಇದೆ. ಡ್ಯುಯುಲ್ ಕಲರ್ ಟೆಂಪರೇಚರ್ ಫ್ಲ್ಯಾಷ್, 2x ಡಿಜಿಟಲ್ ಝೂಮ್, A1 ಕ್ಯಾಮ್, ವಿಡಿಯೋ, ಬ್ಯೂಟಿ ಮೋಡ್, ಪೋರ್ಟ್ರೇಟ್, ಟೈಮ್ ಲ್ಯಾಪ್ಸ್, ಪನೋರಮಾ, ವೈಡ್ ಸೆಲ್ಫಿ, 1080P ವಿಡಿಯೋ ರೆಕಾರ್ಡಿಂಗ್ ಮಾಡಬಹುದು.
15ವ್ಯಾಟ್ ಚಾರ್ಜಿಂಗ್ ಜೊತೆಯಲ್ಲಿ 5000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದೆ. ಇದು 840 ಗಂಟೆ ಸ್ಟ್ಯಾಂಡ್ ಬೈ, 32 ಗಂಟೆ ಕರೆ, 9.5 ಗಂಟೆ ವಿಡಿಯೋ ಪ್ಲೇ ಬ್ಯಾಕ್ ಮತ್ತು 100 ಗಂಟೆಗಳ ಸಂಗೀತ ಪ್ಲೇಟೈಮ್ ನೀಡುತ್ತದೆ. ಡಿಟಿಎಸ್ ಜೊತೆ ಡ್ಯುಯುಲ್ ಸ್ಪೀಕರ್, IP154 ರೇಟಿಂಗ್, 3 ವರ್ಷಗಳ ಲ್ಯಾಗ್ ಕಾರ್ಯಕ್ಷಮತೆ ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್ 188 ಗ್ರಾಂ ತೂಕ ಹೊಂದಿದ್ದು, 165.62*77.01*8.35 ವಿನ್ಯಾಸದಲ್ಲಿ ಲಭ್ಯವಿದೆ.
ಇದನ್ನೂ ಓದಿ: 50MP+2MP ಕ್ಯಾಮೆರಾವುಳ್ಳ ಮೋಟೋ ಜಿ45 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರಿಯಾಯ್ತಿ