ಇಂದು, ನಾಳೆ ಐಪಿಎಲ್ ಮೆಗಾ ಹರಾಜು: 25 ಕೋಟಿಗೆ ಹರಾಜಾಗ್ತಾರಾ ಈ ಪ್ಲೇಯರ್ಸ್?

By Naveen Kodase  |  First Published Nov 24, 2024, 12:19 PM IST

ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು ಇಂದು ಮಧ್ಯಾಹ್ನ 3.30ರಿಂದ ಆರಂಭವಾಗಲಿದ್ದು, ಹಲವು ಸ್ಟಾರ್ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ


ಜೆದ್ದಾ: ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ದವಾಗಿದೆ. ಭಾನುವಾರ ಹಾಗೂ ಸೋಮವಾರ ಸೌದಿ ಅರೇಬಿಯಾದ ಜೆದ್ದಾದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ ಇಶಾನ್ ಕಿಶನ್, ಮೊಹಮದ್ ಶಮಿ, ಜೋಸ್ ಬಟ್ಲರ್, ಅರ್ಶ್‌ದೀಪ್ ಸಿಂಗ್‌ ಸೇರಿದಂತೆ ತಾರಾ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ಕೋಟಿ ಕೋಟಿ ಕೊಳ್ಳೆ ಹೊಡೆಯುವ ನಿರೀಕ್ಷೆಯಲ್ಲಿದ್ದಾರೆ.

ಈ ಬಾರಿ ಹರಾಜಿನಲ್ಲಿ 367 ಭಾರತೀಯರು ಸೇರಿ 577 ಆಟಗಾರರು ಭಾಗಿಯಾಗಲಿದ್ದಾರೆ. ಅಂತಾ ರಾಷ್ಟ್ರೀಯ ಪಂದ್ಯವಾಡಿದ 48 ಭಾರತೀಯರು, 194 ವಿದೇಶಿ ಆಟಗಾರರು ಪಟ್ಟಿಯಲ್ಲಿದ್ದಾರೆ. ಭಾರತದ 319 ಅನ್‌ಕ್ಯಾಪ್, ವಿದೇಶದ 12 ಅನ್ ಕ್ಯಾಪ್ ಆಟಗಾರರ ಜೊತೆಗೆ 3 ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರೂ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 70 ವಿದೇಶಿಗರು ಸೇರಿ 204 ಆಟಗಾರರನ್ನು ಖರೀದಿಸಲು 10 ಫ್ರಾಂಚೈಸಿ ಗಳಿಗೆ ಅವಕಾಶವಿದೆ. 

Latest Videos

undefined

ಮುಷ್ತಾಕ್ ಅಲಿ ಟ್ರೋಫಿ: ಕೊನೆ 4 ಎಸೆತಕ್ಕೆ 4 ವಿಕೆಟ್‌ ಕಳೆದುಕೊಂಡು ಪಂದ್ಯ ಕೈಚೆಲ್ಲಿದ ಕರ್ನಾಟಕ!

25 ಕೋಟಿ ರು. ಬಿಡ್ ಸಾಧ್ಯತೆ

ಈ ಬಾರಿ ಹರಾಜಿನಲ್ಲಿ ಈ ಆಟಗಾರರಿಗೆ ₹25 ಕೋಟಿ ಬಿಡ್ ಆಗುವ ಸಾಧ್ಯತೆಯಿದೆ. ಕಳೆದ ವರ್ಷ ಮಿಚೆಲ್ ಸ್ಟಾರ್ಕ್ ₹24.75 ಕೋಟಿಗೆ ಕೋಲ್ಕತಾ ತಂಡಕ್ಕೆ ಹರಾಜಾಗಿದ್ದರು. ಈ ಬಾರಿ ಪಂತ್, ಶ್ರೇಯಸ್, ರಾಹುಲ್ ಸೇರಿದಂತೆ ಭಾರತ ಹಾಗೂ ವಿದೇಶಿ ಪ್ರಮುಖ ಆಟಗಾರರು ಪಟ್ಟಿಯಲ್ಲಿದ್ದು, ₹25 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಬಿಕರಿಯಾದರೂ ಅಚ್ಚರಿಯಿಲ್ಲ. ಇನ್ನು, 3 ವರ್ಷದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 96 ವಿಕೆಟ್ ಪಡೆದಿರುವ ಅರ್ಶದೀಪ್ ಸಿಂಗ್‌ ಕೂಡಾ ಬಂಪ‌ರ್ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.

ಐಪಿಎಲ್‌ ಅಂಕಿ-ಅಂಶ

ಈ ಬಾರಿ ಹರಾಜಿನಲ್ಲಿ 367 ಭಾರತೀಯರು ಸೇರಿ 577 ಆಟಗಾರರು ಭಾಗಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯವಾಡಿದ 48 ಭಾರತೀಯರು, 195 ವಿದೇಶಿ ಆಟಗಾರರು ಪಟ್ಟಿಯಲ್ಲಿದ್ದಾರೆ. ಭಾರತದ 319 ಅನ್‌ಕ್ಯಾಪ್ಡ್‌, ವಿದೇಶದ 12 ಅನ್‌ಕ್ಯಾಪ್ಡ್‌ ಆಟಗಾರರ ಜೊತೆಗೆ 3 ಐಸಿಸಿ ಅಸೋಸಿಯೇಟ್‌ ರಾಷ್ಟ್ರಗಳ ಆಟಗಾರರೂ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

IPL 2025 ಮಹತ್ವದ ವೇಳಾಪಟ್ಟಿ ಪ್ರಕಟ; ಫೈನಲ್‌ ಪಂದ್ಯದ ಡೇಟ್ ಫಿಕ್ಸ್! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಒಟ್ಟು 70 ವಿದೇಶಿಗರು ಸೇರಿ 204 ಆಟಗಾರರನ್ನು ಖರೀದಿಸಲು 10 ಫ್ರಾಂಚೈಸಿಗಳಿಗೆ ಅವಕಾಶವಿದೆ. 10 ತಂಡಗಳು ಒಟ್ಟಾರೆ 641. 5 ಕೋಟಿ ರು. ಖರ್ಚು ಮಾಡಬಹುದಾಗಿದೆ.

48: ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತದ 48 ಆಟಗಾರರು ಹರಾಜಿನಲ್ಲಿ ಭಾಗಿ

70: 10 ಫ್ರಾಂಚೈಸಿಗಳಿಗೆ ಒಟ್ಟು 70 ವಿದೇಶಿ ಆಟಗಾರರನ್ನು ಖರೀದಿಸುವ ಅವಕಾಶ.

81: ಹರಾಜಿನಲ್ಲಿ ಒಟ್ಟು 81 ಆಟಗಾರರ ಮೂಲಬೆಲೆ 2 ಕೋಟಿ ರು. ನಿಗದಿಯಾಗಿದೆ.

ಹರಾಜು ಆರಂಭ: ಮಧ್ಯಾಹ್ನ 3.30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಜಿಯೋ ಸಿನಿಮಾ.

click me!