ಸಿಹಿ ಸ್ಕೂಲ್‌ಗೆ ಎಷ್ಟು ದಿನ ಹೋಗ್ತಾಳೆ? ರಜೆ ಇದ್ದಾಗ ಹೋಗೋದೆಲ್ಲಿ? ಅವಳದ್ದೇ ಕ್ಯೂಟ್‌ ಮಾತಲ್ಲಿ ಕೇಳಿ

Published : Nov 24, 2024, 11:56 AM IST
ಸಿಹಿ ಸ್ಕೂಲ್‌ಗೆ ಎಷ್ಟು ದಿನ ಹೋಗ್ತಾಳೆ? ರಜೆ ಇದ್ದಾಗ ಹೋಗೋದೆಲ್ಲಿ? ಅವಳದ್ದೇ ಕ್ಯೂಟ್‌ ಮಾತಲ್ಲಿ ಕೇಳಿ

ಸಾರಾಂಶ

ಸೀತಾರಾಮ ಪುಟಾಣಿ ಸಿಹಿ ಎಷ್ಟು ದಿನ ಸ್ಕೂಲ್‌ಗೆ ಹೋಗ್ತಾಳೆ, ರಜೆಯಲ್ಲಿ ಏನು ಮಾಡ್ತಾಳೆ ಎಂಬ ಬಗ್ಗೆ ಮಾತನಾಡಿದ್ದಾಳೆ. ಇದರ ವಿಡಿಯೋ ವೈರಲ್‌ ಆಗಿದೆ.  

ಸಿಹಿ ಎಂದರೆ ಸಾಕು, ಸೀರಿಯಲ್‌ ಪ್ರಿಯರ ಗಮನಕ್ಕೆ ಹೋಗುವುದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌ ಪುಟಾಣಿ. ವಯಸ್ಸಿಗಿಂತಲೂ ಹೆಚ್ಚಿರುವ ಪ್ರತಿಭೆ, ಪ್ರತಿಯೊಂದು ದೃಶ್ಯಗಳನ್ನೂ ಬಾಲಕಿ ಗ್ರಹಿಸುವ ರೀತಿ,  ದೃಶ್ಯಗಳಿಗೆ ತಕ್ಕಂತೆ ಮನೋಜ್ಞ ಅಭಿನಯ... ಇವೆಲ್ಲವುಗಳಿಂದ ಈ ಪುಟಾಣಿ ಸೀರಿಯಲ್‌ ಪ್ರೇಮಿಗಳ ಹೃದಯ ಗೆಲ್ಲುತ್ತಿದ್ದಾಳೆ, ಹೃದಯ ಕದಿಯುತ್ತಿದ್ದಾಳೆ. ಕೆಲವೊಮ್ಮೆ ವಯಸ್ಸಿಗೆ ಮಿತಿ ಮೀರಿದ ಡೈಲಾಗ್‌ಗಳನ್ನು ಈಕೆ ಹೇಳುವ ಕಾರಣ, ಸೀರಿಯಲ್‌ ನಿರ್ದೇಶಕರ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಕಮೆಂಟ್‌ಗಳು ಬರುತ್ತಿದ್ದರೂ, ಸಿಹಿಯ ಅಭಿನಯಕ್ಕೆ ಮಾತ್ರ ಮನಸೋಲುವವರೇ ಎಲ್ಲ. ಅಷ್ಟಕ್ಕೂ  ಸೀತಾರಾಮ ಸೀರಿಯಲ್​ ಟಿಆರ್​ಪಿಯಲ್ಲಿ ಉತ್ತಮ ರೇಟಿಂಗ್​ ಪಡೆದುಕೊಳ್ಳುವುದಕ್ಕೆ ಬಹುಮುಖ್ಯ ಕಾರಣನೇ ಈಕೆ ಎನ್ನುವುದೂ ಸುಳ್ಳಲ್ಲ.

 ಐದು ವರ್ಷದ ಬಾಲಕಿಯ ರಿಯಲ್‌ ಹೆಸರು ರೀತು ಸಿಂಗ್‌. ಇಷ್ಟು ಚಿಕ್ಕ ವಯಸ್ಸಿನಲ್ಲಿ ತನ್ನ ಪಾತ್ರವನ್ನು ಅರಗಿಸಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ನಿಜ ಜೀವನದಲ್ಲಿಯಾದರೆ ನೋವು, ಖುಷಿ, ನಲಿವು, ದುಃಖ, ಅಳು ಎಲ್ಲವೂ ನ್ಯಾಚುರಲ್‌ ಆಗಿ ಬಂದುಬಿಡುತ್ತದೆ. ಆದರೆ ಶೂಟಿಂಗ್‌ ಸಮಯದಲ್ಲಿ ನಟನೆ ಮಾಡುವುದು ಎಂದರೆ ಅದಕ್ಕೆ ಬಹಳ ಟ್ಯಾಲೆಂಟ್‌ ಬೇಕು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲ ಭಾವನೆಗಳನ್ನೂ ತೋರಿಸುವುದು ಎಂದರೆ ಬಹುಶಃ ಇದು ಹಿಂದಿನ ಜನ್ಮದ ಟ್ಯಾಲೆಂಟೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಎಲ್ಲರನ್ನೂ ಆವರಿಸಿಕೊಂಡಿದ್ದಾಳೆ ಸಿಹಿ  ಅರ್ಥಾತ್‌ ರಿತು ಸಿಂಗ್‌.  ಇತ್ತ ಸೀರಿಯಲ್‌ನಲ್ಲಿ, ಇನ್ನೊಂದು ಕಡೆ ಡಾನ್ಸ್‌ ಷೋನಲ್ಲಿ, ಮತ್ತೆ ಇನ್ನೆಲ್ಲೋ... ಹೀಗೆ ಸಿಹಿಗೆ ಸಕತ್‌ ಡಿಮಾಂಡ್‌ ಇದೆ. ಹಾಗಿದ್ರೆ ಸಿಹಿ ಸ್ಕೂಲ್‌ಗೆ ಹೋಗೋದು ಯಾವಾಗ, ರಜೆ ಇದ್ದಾಗ ಎಲ್ಲಿ ಹೋಗ್ತಾಳೆ ಎಂಬ ಬಗ್ಗೆ ಮಾತನಾಡಿದ್ದಾಳೆ. ಚಿಕ್ಕಮಕ್ಕಳು ತನ್ನನ್ನು ನೋಡಿದಾಗ ಹೇಗೆ ರಿಯಾಕ್ಟ್‌ ಮಾಡ್ತಾರೆ ಎನ್ನುವ ಬಗ್ಗೆ ಹೇಳಿದ್ದಾಳೆ. 

ಸೀತಾರಾಮದ ಸುಲೋಚನಾ ಪಾತ್ರದಿಂದ ಜೀವನದಲ್ಲಿ ಫಸ್ಟ್‌ ಟೈಮ್ ಮಾಸ್ಕ್‌ ಹಾಕ್ಕೊಂಡು ತಿರಗ್ತಾ ಇದ್ದೇನೆ!

ಗಜೇಂದ್ರ ಮರಸಾಣಿಗೆ ಎನ್ನುವವರು ಯುಟ್ಯೂಬ್‌ನಲ್ಲಿ ಈ ವಿಡಿಯೋ ಶೇರ್‍‌ ಮಾಡಿದ್ಧಾರೆ. ಅಮೃತಧಾರೆ ಸೀರಿಯಲ್ಲಿಯೂ ರಿತು ಸಿಂಗ್‌ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದಳು. ಅದರ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಅಮೃತಧಾರೆ ಸೀರಿಯಲ್‌ ಶೂಟಿಂಗ್‌ಗೆ ಎರಡು ದಿನ ಹೋಗ್ತೇನೆ. ಸೀತಾರಾಮಕ್ಕೆ ಹದಿನೈದು ದಿನ ಹೋಗ್ತೇನೆ. ಉಳಿದ ದಿನ ಶಾಲೆಗೆ ಹೋಗ್ತೇನೆ ಎಂದಿದ್ದಾಳೆ. ಶಾಲೆಗೆ ರಜೆ, ಶೂಟಿಂಗ್‌ಗೂ ರಜೆ ಇದ್ದಾಗ ಪ್ರವಾಸಕ್ಕೆ ಹೋಗ್ತೇನೆ ಎಂದು ಕ್ಯೂಟ್‌ ಆಗಿ ಮಾತನಾಡಿದ್ದಾಳೆ. ಇದೇ ವೇಳೆ ವಯಸ್ಸಿಗೆ ಮೀರಿದ ಮಾತುಗಳನ್ನಾಡಿರುವುದನ್ನೂ ಈ ವಿಡಿಯೋದಲ್ಲಿ ನೋಡಬಹುದು. 
  
ಸೀತಾರಾಮ  ಸೀರಿಯಲ್‌ನಲ್ಲಿ ಸದ್ಯ ಅಮ್ಮನ ಆಸರೆಯಲ್ಲಿದ್ದ ಸಿಹಿಗೆ ಅಪ್ಪನ ಪ್ರೀತಿಯೂ ಸಿಕ್ಕಿದೆ. ಆದರೆ ಈಕೆ ನಿಜ ಜೀವನವೂ ನೋವಿನಿಂದಲೇ ಕೂಡಿದೆ. ರೀತು ಸಿಂಗ್​ ನೇಪಾಳ ಮೂಲದವಳು. ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. 
 

ಸುಧಾರಾಣಿಯ ಕ್ರಷ್‌ ಯಾರು? ಇಷ್ಟದ ಹಾಡು, ಸಿನಿಮಾ ಯಾವುದು? 90 ಸೆಕೆಂಡ್‌ನಲ್ಲಿ ಸಿಕ್ಕಿತು ಉತ್ತರ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?