ಆಕೆ ರಷ್ಯಾದ ಚೆಲುವೆ, ಈತ ಬಂಗಾಳದ ಪ್ರಸಿದ್ಧ ನಟ… ಇಬ್ಬರು ಶ್ರೀಕೃಷ್ಣನ ಪರಮ ಭಕ್ತರು. ಹಾಗಾಗಿ ಇಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದು, ಶ್ರೀಕೃಷ್ಣನ ವೃಂದಾವನ. ಇವರಿಬ್ಬರ ಪ್ರೀತಿ, ವೃಂದಾವನದ (Vrindavana) ಹಳೆಯ ಕಟ್ಟಡಗಳು ಎಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರಷ್ಯಾದಿಂದ ಭಾರತಕ್ಕೆ ಬಂದ ಬೆಡಗಿಗೂ, ಪಶ್ಚಿಮ ಬಂಗಾಲದ ನಟನಿಗೂ ನಂತು ಬೆಳೆದದ್ದು ಹೇಗೆ ನೋಡೋಣ.
ಚಿಂತಾಮಣಿ ಡಯಾನಾ ಪಯಣ
ಚಿಂತಾಮಣಿ ಡಯಾನಾ (Chintamani Diana) ರಷ್ಯಾದಲ್ಲಿ ಜನಿಸಿದರು, ಆದರೆ ಅವರ ಹೆತ್ತವರ ಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ಪ್ರೀತಿಯಿಂದಾಗಿ, ಭಾರತೀಯ ಧಾರ್ಮಿಕತೆ ಮತ್ತು ಭಗವದ್ಗೀತೆಯ ಬೋಧನೆಗಳನ್ನು ಕೇಳುತ್ತಾ ಬೆಳೆದವರು ಡಯಾನ.
19 ನೇ ವಯಸ್ಸಿನಲ್ಲಿ, ಅವರು ಇಸ್ಕಾನ್ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದರು, ಅದರಲ್ಲಿ ಅವರು ಭಾರತಕ್ಕೆ ಬರುವ ಅವಕಾಶವನ್ನು ಪಡೆದರು. 2013 ರಲ್ಲಿ ವೃಂದಾವನ ಪ್ರವಾಸವು ಅವರ ಜೀವನದ ಮೇಲೆ ಆಳವಾದ ಪರಿಣಾಮ ಬೀರಿತು, ಮತ್ತು ಅವರು ಭಾರತಕ್ಕೆ ಹಿಂತಿರುಗಿ ಇಲ್ಲಿಯೇ ನೆಲೆಸಲು ನಿರ್ಧರಿಸಿದರು.
2015 ರಲ್ಲಿ, ಡಯಾನಾ ತನ್ನ ಕುಟುಂಬದೊಂದಿಗೆ ಭಾರತದಲ್ಲಿ ಶಾಶ್ವತವಾಗಿ ನೆಲೆಸಲು ನಿರ್ಧರಿಸಿದರು ಮತ್ತು ಶ್ರೀಕೃಷ್ಣನ ಬೋಧನೆಗಳು ಮತ್ತು ಆಧ್ಯಾತ್ಮಿಕತೆಗೆ ತಮ್ಮನ್ನು ತಾವು ಸಮರ್ಪಿಸಿದರು. ನಂತರ ಅವರು ಮೂರು ವರ್ಷಗಳ ಕಾಲ ಒಡಿಸ್ಸಿ ನೃತ್ಯವನ್ನು ಅಭ್ಯಾಸ ಮಾಡಿದರು ಮತ್ತು ವೃತ್ತಿಪರ ನೃತ್ಯಗಾರ್ತಿಯಾದರು.
ಭಾರತೀಯ ಸಂಸ್ಕೃತಿಯ ಮೇಲಿನ ಆಳವಾದ ಪ್ರೀತಿಯಿಂದಾಗಿ, ಡಯಾನಾ ಮತ್ತು ಅವರ ಫ್ಯಾಷನ್ ಡಿಸೈನರ್ ತಾಯಿ ಕೂಡ ರೇಷ್ಮೆ ಸೀರೆ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ಹೆಚ್ಚಾಗಿ ಭಾರತೀಯ ಸಾಂಪ್ರದಾಯಿಕ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ಇದು ಭಾರತೀಯ ಸಂಸ್ಕೃತಿಯ ಮೇಲಿನ ಅವರ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ.
ನಟ ಗೌರವ್ ಮಂಡಲ್ ಜೊತೆ ಭೇಟಿ
ವೃಂದಾವನದಲ್ಲಿದ್ದಾಗ, ಡಯಾನಾ ಬಂಗಾಳಿ ಟಿವಿ ನಟ ಗೌರವ್ ಮಂಡಲ್ (Gourav Mandal) ಅವರನ್ನು ಭೇಟಿಯಾದರು. ನಂತರ ಕೃಷ್ಣನ ಮೇಲಿನ ಇಬ್ಬರ ಪ್ರೀತಿಯೇ ಇವರ ಪ್ರೀತಿಗೆ ಕಾರಣವಾಯಿತು. ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಚಿತ್ರಗಳು ಮತ್ತು ವೀಡಿಯೊಗಳು ವೃಂದಾವನದಲ್ಲಿ ಕೃಷ್ಣ ಮತ್ತು ರಾಧಾ ಅವರ ಪ್ರೀತಿಯ ಕಥೆಗಳನ್ನು ನೆನಪಿಸುತ್ತವೆ. ಈ ಇಬ್ಬರ ಸೋಶಿಯಲ್ ಮೀಡಿಯಾ ಫೀಡ್ಗಳು ಪ್ರೀತಿ ಮತ್ತು ಪ್ರಣಯದಿಂದ ತುಂಬಿವೆ. ಹಾಗಾಗಿಯೇ ಈ ಜೋಡಿಗೆ ಸಾಕಷ್ಟು ಜನ ಫಾಲೋವರ್ಸ್ ಕೂಡ ಇದ್ದಾರೆ.
ವೃಂದಾವನದ ಸುಂದರ ದೃಶ್ಯಾವಳಿಗಳ ನಡುವೆ ಅವರ ಚಿತ್ರಗಳು ಮತ್ತು ಜೋಡಿಯಾಗಿ ಆಧ್ಯಾತ್ಮಿಕ ತಾಣಗಳಿಗೆ ಪ್ರಯಾಣಿಸುವುದು, ಅವರ ಅನುಯಾಯಿಗಳನ್ನು ಆಕರ್ಷಿಸುತ್ತದೆ. ಅವರ ಪ್ರೇಮಕಥೆ ಅನೇಕ ಹೃದಯಗಳನ್ನು ಸ್ಪರ್ಶಿಸಿದೆ. ಇವರ ಫಾಲೋವರ್ಸ್ ಕೂಡ, ಇವರ ಜೀವನದ ಬಗ್ಗೆ ತಿಳಿದುಕೊಳ್ಳೋದಕ್ಕೆ ಆಸಕ್ತರಾಗಿದ್ದಾರೆ.
ಗೌರವ್ ಮಂಡಲ್ ಅವರ ವೃತ್ತಿಜೀವನ
ಗೌರವ್ ಮಂಡಲ್ ಪ್ರಸಿದ್ಧ ಬಂಗಾಳಿ ಟಿವಿ ನಟ, ಅವರು ಹಲವಾರು ಪ್ರಮುಖ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. 'ಕೋನ್ ಬಾವು' (2019), 'ನಯನತಾರಾ' (2021) ಮತ್ತು 'ಓಂ ನಮಃ ಶಿವಾಯ್' (2018) ಇವರು ನಟಿಸಿದಾ ಪ್ರಮುಖ ಸೀರಿಯಲ್ ಗಳು. ಇವರು ತಮ್ಮ ನಟನೆಯಿಂದಲೇ ಅನೇಕ ಅಭಿಮಾನಿಗಳನ್ನು ಪಡೆದಿದ್ದಾರೆ.
ಗೌರವ್ ಮತ್ತು ಡಯಾನಾ ಅವರ ಪ್ರೇಮಕಥೆ ವೃಂದಾವನದ ಆಧ್ಯಾತ್ಮಿಕ ವಾತಾವರಣವನ್ನು ಪ್ರತಿಬಿಂಬಿಸುವುದಲ್ಲದೆ, ಅವರ ನಡುವಿನ ಆಳವಾದ ಸಂಪರ್ಕ ಮತ್ತು ಸಾಂಸ್ಕೃತಿಕ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಮತ್ತು ವೀಡಿಯೊಗಳು ಪ್ರೀತಿ ಮತ್ತು ಆಧ್ಯಾತ್ಮಿಕತೆಗೆ ಯಾವುದೇ ಗಡಿಗಳಿಲ್ಲ ಎಂದು ಸಾಬೀತುಪಡಿಸಿವೆ.