ಬೆಳಗಾವಿ: ಟೆಸ್ಟಿಂಗ್ ಕಡಿಮೆ ಮಾಡಿದ ಜಿಲ್ಲಾಡಳಿತದ ಬಗ್ಗೆ ಸಾರ್ವಜನಿಕರಿಗೆ ಅನುಮಾನ

May 15, 2021, 3:02 PM IST

ಬೆಳಗಾವಿ(ಮೇ.15): ಜಿಲ್ಲೆಯಲ್ಲಿಯೂ ಕೂಡ ಕೋವಿಡ್‌ ಟೆಸ್ಟಿಂಗ್‌ ಇಳಿಸಲಾಗಿದೆ. ಕೊರೋನಾ ಟೆಸ್ಟ್ ಹಾಗೂ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒತ್ತಡ ನಿಭಾಯಿಸಲಾಗದ ಜಿಲ್ಲಾಡಳಿತ ಪ್ರತಿದಿನ ಮಾಡುತ್ತಿದ್ದ 6 ಸಾವಿರ ಪರೀಕ್ಷೆಗಳನ್ನು ಇದೀಗ 2500 ರಿಂದ 2600ಕ್ಕೆ ಇಳಿಸಿದೆ. ಜಿಲ್ಲೆಯಲ್ಲಿ ಸೋಂಕು ಹೆಚ್ಚುತ್ತಿರುವಾಗಲೇ ಟೆಸ್ಟ್‌ ಇಳಿಕೆಗೆ ಮುಂದಾಗಿರುವ ಜಿಲ್ಲಾಡಳಿತದ ಕ್ರಮದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ರೇಟ್‌ ಶೇ. 33 ರಷ್ಟಿದೆ. ಇಂಥ ಸಂದರ್ಭದಲ್ಲಿ ಜಿಲ್ಲಾಡಳಿತ ಇಂಥದ್ದೊಂದು ನಿರ್ಧಾರಕ್ಕೆ ಮುಂದಾಗಿದ್ದೇಕೆ ಎಂಬ ಅನುಮಾನ ಕಾಡಲು ಶುರುವಾಗಿದೆ.

ರಾಯಚೂರು ಓಪೆಕ್‌ ಆಸ್ಪತ್ರೆಯಲ್ಲಿ ಕರ್ಮಕಾಂಡ: ವೈದ್ಯರ ನಿರ್ಲಕ್ಷ್ಯಕ್ಕೆ ಸೋಂಕಿತ ಮಹಿಳೆ ಬಲಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona