ಒಕೆ ಒಕ್ಕಡು ಚಿತ್ರದ ಖಳನಾಯಕ ಪಾತ್ರಕ್ಕೆ ಅವರು ಸೂಕ್ತ ಆಯ್ಕೆಯಾಗಿದ್ದರು. ತೆಲುಗಿನಲ್ಲಿ ನಾಗಾರ್ಜುನ ಜೊತೆ ಶಿವ, ಮಾಸ್ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿರಂಜೀವಿ ಜೊತೆ ಪಸಿವಾಡಿ ಪ್ರಾಣಂನಂತಹ ಹಿಟ್ ಚಿತ್ರದಲ್ಲಿ ನಟಿಸಿದ್ದಾರೆ. ಯಾವುದೇ ಸ್ಟಾರ್ ನಟರ ಜೊತೆ ನಟಿಸಿದರೂ ರಘುವರನ್ ಅವರಿಗೆ ಸರಿಸಮನಾಗಿ ನಟಿಸುತ್ತಿದ್ದರು ಎಂದು ಚಿತ್ರರಂಗದಲ್ಲಿ ಹಲವರು ಹೇಳುತ್ತಾರೆ.