Jan 8, 2022, 11:47 AM IST
ಚಿತ್ರದುರ್ಗ (ಜ. 08): ರಾಜ್ಯದಲ್ಲಿ ದಲಿತರ ಹೋರಾಟಗಳು ನಡೆದಿರೋ ಬೆನ್ನಲ್ಲೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ದಲಿತರ ಮೇಲೆ ಸವರ್ಣಿಯರಿಂದ ನಿರಂತರ ದೌರ್ಜನ್ಯದ ಜೊತೆಗೆ ಈ ಮಧ್ಯೆ ದಲಿತರಿಗೆ ದೇವಿಗುಡಿ ಪ್ರವೇಶವನ್ನು ಸಹ ನಿರಾಕರಿಸಲಾಗಿರೋ ಆರೋಪ ಕೇಳಿ ಬಂದಿದೆ. ಇದಕ್ಕೆ ದಲಿತರ ಹೋರಾಟದ ಹಾದಿ ಹಿಡಿದಿದ್ದಾರೆ.
Dharwad: ಕಳೆದ 3 ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ವೇತನವನ್ನೇ ಕೊಟ್ಟಿಲ್ಲ!
ಜಿಲ್ಲೆಯ ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿ ಮತಕ್ಷೇತ್ರದ ಮಂಗಳಗುಡ್ಡ ಗ್ರಾಮದಲ್ಲಿ ಇತ್ತೀಚಿಗೆ ನಡೆದ ದೇವಿ ಗುಡಿಯ ಕಾರ್ತಿಕೋತ್ಸವದಲ್ಲಿ ದಲಿತ ಯುವಕರಿಗೆ ಗುಡಿ ಪ್ರವೇಶ ವಿಚಾರವಾಗಿ ಸವರ್ಣಿಯರಿಂದ ಅವಾಚ್ಯ ಪದಗಳ ನಿಂದನೆ ಸಹಿತ ದೌರ್ಜನ್ಯ ನಡೆಸಲಾಗಿದೆಯಂತೆ. ಇದರಿಂದ ದಲಿತ ಮುಖಂಡರು ಸೇರಿ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಕೇಸ್ ದಾಖಲಿಸಿದ್ದಾರೆ. ಆದ್ರೆ ಈ ಬಗ್ಗೆ ಸೂಕ್ತ ಕ್ರಮ ವಹಿಸದೇ ಪೊಲೀಸ್ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಹೀಗಾಗಿ ಈ ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಮತ್ತು ಸ್ವಕ್ಷೇತ್ರದ ಶಾಸಕ,ಮಾಜಿ ಸಿಎಂ ಸಿದ್ದರಾಮಯ್ಯನವರು ಸಹ ಕ್ರಮಕ್ಕೆ ಸೂಚಿಸಬೇಕೆಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ಇನ್ನು ಮಂಗಳಗುಡ್ಡ ಗ್ರಾಮದ ಘಟನೆ ಹಾಗೂ ಇತ್ತೀಚಿಗೆ ನವನಗರದಲ್ಲಿನ ದಲಿತ ಮುಖಂಡನ ಮೇಲೆ ವಿನಾಕಾರಣ ಸುಳ್ಳು ಕೇಸ್ ದಾಖಲಿಸಿದ ವಿಚಾರವಾಗಿ ಜಿಲ್ಲೆಯ ದಲಿತಪರ ಸಂಘಟನೆಗಳು ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಸೇರಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನವನಗರದ ಅಂಬೇಡ್ಕರ ಭವನದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲದೆ ಜಿಲ್ಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಿಂದ ಹಿಡಿದು ಸಣ್ಣ ಹಳ್ಳಿಯವರೆಗೂ ದಲಿತರ ಮೇಲೆ ಅನ್ಯಾಯವಾಗುತ್ತಿದ್ದು, ಈ ಸಂಬಂಧ ಪೋಲಿಸ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಸಾಮಾಜಿಕ ನ್ಯಾಯ ಅಂತ ಭಾಷಣ ಮಾಡೋ ಜನಪ್ರತಿನಿಧಿಗಳೆಲ್ಲಾ ನಮ್ಮ ನೋವಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಮುಂಬರುವ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರು.
ಒಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರದ ಮಂಗಳಗುಡ್ಡ ಗ್ರಾಮದಲ್ಲಿ ನಡೆದ ದೇವಿಗುಡಿ ಪ್ರವೇಶ ವಿಚಾರವಾಗಿ ನಡೆದಿರೋ ಪ್ರಕರಣ ಕುರಿತು ಪೋಲಿಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಹೋರಾಟಗಳು ನಡೆದಿದ್ದು, ಇದಕ್ಕೆ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೇ ಅಂತ ಕಾದು ನೋಡಬೇಕಿದೆ..