ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ದಿವಾನ್ ಮುಂದೆಯೇ ಹೆತ್ತ ತಾಯಿ ಬಂದು ನಿಂತಿದ್ದಾಳೆ. ಆದರೆ ಆತ ಅಮ್ಮನಿಗೇ ಭಿಕ್ಷೆ ಹಾಕಿದ್ದಾನೆ. ಅಯ್ಯೋ ದೇವ್ರೇ ಅಂತ ನೆಟ್ಟಿಗರು ಪೇಚಾಡಿಕೊಳ್ತಿದ್ದಾರೆ.
ಅಮೃತಧಾರೆ ಸೀರಿಯಲ್‌ನಲ್ಲಿ ಸದ್ಯ ಮದರ್ ಸೆಂಟಿಮೆಂಟ್ ಹೈ ನಲ್ಲಿದೆ. ಇಷ್ಟು ದಿನ ಅಮ್ಮ, ತಂಗಿ ಬಗ್ಗೆ ಮನಸ್ಸಲ್ಲಿ ಫೀಲಿಂಗ್ ಇದ್ರೂ ಹೊರಗೆ ತೋರಿಸಿಕೊಳ್ಳದ ಗೌತಮ್ ಈಗೀಗ ಸಿಕ್ಕಾಪಟ್ಟೆ ಅಮ್ಮ, ತಂಗಿಯನ್ನ ಮಿಸ್ ಮಾಡಿಕೊಳ್ತಿದ್ದಾನೆ. ರಿಯಲ್ ತಂಗಿಯೇ ಕೆಲಸದವಳಾಗಿ ಆತನ ಮನೆ ಸೇರಿಕೊಂಡಿದ್ದಾಳೆ. ಹಾಗೆ ನೋಡಿದರೆ ಅವಳಿಲ್ಲಿ ಬರೋದರ ಹಿಂದೆ ಯಾರೋ ದುಷ್ಟರ ಹುನ್ನಾರ ಇದೆ. ಅವರು ಈಕೆಯನ್ನು ಬಳಸಿ ಗೌತಮ್ ದಿವಾನ್ ಫ್ಯಾಮಿಲಿ ಸರ್ವನಾಶ ಮಾಡೋದಕ್ಕೆ ಸ್ಕೆಚ್ ಹಾಕ್ತಿದ್ದಾರೆ. ಇನ್ನೊಂದು ಕಡೆ ಕಣ್ಣರಿಯದಿದ್ದೊಡೆ ಕರುಳರಿಯದೇ ಎಂಬ ಹಾಗೆ ಗೌತಮ್ ದಿವಾನ್ ತನ್ನ ಮನೆಗೆ ಬಂದ ಕೆಲಸದಾಕೆ ಸುಧಾಳಲ್ಲೇ ತನ್ನ ತಂಗಿಯನ್ನು ಕಾಣುತ್ತಾನೆ. ತನ್ನ ಜೀವ ಕಾದ, ತನ್ನ ಪತ್ನಿ ಭೂಮಿಕಾಳನ್ನು ಬೆಂಕಿ ಅವಘಡದಿಂದ ಪಾರು ಮಾಡಿದ ಅವಳಿಗೆ ತಾನೇ ಕೈ ತುತ್ತು ತಿನಿಸಿದ್ದಾನೆ. ಇದೆಲ್ಲ ಅಪೇಕ್ಷನಿಗೆ ಓವರ್ ಅಂತನಿಸಿದೆ. ಅದನ್ನವಳು ಭೂಮಿಕಾ ಮುಂದೆ ಹೇಳಿ 'ಯೋಗ ಮತ್ತು ಯೋಗ್ಯತೆ'ಯ ಪಾಠ ಹೇಳಿಸಿಕೊಂಡಿದ್ದಾಳೆ. ಮತ್ತೆ ಅಕ್ಕನ ಬಗ್ಗೆ ಸಿಟ್ಟು ಹೆಚ್ಚಾಗಿದೆ.
ಇನ್ನೊಂದೆಡೆ ಕೈಗೆ ಬೆಂಕಿ ತಗುಲಿಸಿಕೊಂಡ ಸುಧಾ ಗೌತಮ್ ಮನೆಯಲ್ಲಿದ್ದಾಳೆ. ಆದರೆ ಅವಳ ಮನೆಯಲ್ಲಿ ಒಂದು ಹೊತ್ತಲ್ಲಿ ಆಕೆಯ ತಾಯಿಗೆ ಎಚ್ಚರವಾಗಿದೆ. ಅಜ್ಜಿಗೆ ನೀರು ತರಲು ಸುಧಾ ಮಗಳು ಹೊರಗೆ ಹೋಗಿದ್ದಾಳೆ. ಈ ಸಮಯದಲ್ಲಿ ಗೌತಮ್‌ಗೆ ತನ್ನ ಮನೆಯಲ್ಲಿ ಅಮ್ಮನ ನೆನಪು ಕಾಡಿದೆ. ಅಲ್ಲಿ ಭಾಗ್ಯಾಳಿಗೂ ಮಗನ ನೆನಪಾಗಿದೆ. ಗುಂಡೂ ಗುಂಡೂ ಎನ್ನುತ್ತಾ ಫೋಟೋ ಹಿಡಿದುಕೊಂಡು ಹೊರಗೆ ಬಂದಿದ್ದಾರೆ. ಹಾಗೇ ಮನೆಯ ಆಚೆ ಬಂದಿದ್ದಾರೆ.
ಭಾವೀ ಗಂಡನ ಜೊತೆಗೆ ಚಿನ್ನುಮರಿ ಡ್ಯಾನ್ಸ್, ಪ್ರಿ ವೆಡ್ಡಿಂಗ್ ಪ್ರೋಗ್ರಾಂನಲ್ಲಿ ಚಂದನಾ ಫುಲ್ ಮಿಂಚಿಂಗ್!
ಮೊಮ್ಮಗಳು ನೀರು ತಂದಾಗ ಅಲ್ಲಿ ಅಜ್ಜಿ ಇಲ್ಲ. ಮೊಮ್ಮಗಳು ಮತ್ತು ಪಕ್ಕದ ಮನೆಯ ಹೆಂಗಸು ಗಾಬರಿಯಲ್ಲಿ ಭಾಗ್ಯ ಹುಡುಕುತ್ತಾರೆ. ಇನ್ನೊಂದೆಡೆ ಗೌತಮ್ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದಾನೆ. 'ಆದಷ್ಟು ಬೇಗ ನನ್ನ ತಾಯಿ ಮತ್ತು ತಂಗಿ ಸಿಗುವಂತೆ ಮಾಡು' ಅಂತ. ಆದರೆ ದುರಂತವೋ ವಿಧಿಲೀಲೆಯೋ ಹೆತ್ತಕಾಯಿ ಕಣ್ಮುಂದೆಯೇ ಬಂದರೂ ಆತನಿಗೆ ಗೊತ್ತಾಗಲ್ಲ. ಬದಲಿಗೆ ಆತನ ಜೊತೆಗೆ ಬಂದ ವಿಲನ್ ಲಕ್ಷ್ಮೀಕಾಂತ್ ಕಣ್ಣಿಗೆ ಬೀಳ್ತಾಳೆ.
ಮನೆಯಿಂದ ಹೊರಬಿದ್ದ ಹೊರಗಿನ ಜ್ಞಾನವೇ ಇಲ್ಲದಂತಿರುವ ಭಾಗ್ಯಮ್ಮ ಬೀದಿ ಬೀದಿಯಲ್ಲಿ ಅಲೆದಾಡುತ್ತಾ ಇದ್ದಾರೆ. ಆಕೆ ವಾಹನಗಳ ನಡುವೆ ಓಡಾಡೋದು ಭಯ ಹುಟ್ಟಿಸುವಂತಿದೆ. ಇನ್ನೊಂದೆಡೆ ಕಾರಿನಲ್ಲಿ ಗೌತಮ್ ಮತ್ತು ಲಕ್ಷ್ಮಿಕಾಂತ್ ಹೋಗುತ್ತಿದ್ದಾರೆ. ಆಗ ವಿಲನ್ ಲಕ್ಷ್ಮಿಕಾಂತ್ ಕಣ್ಣಿಗೆ ಭಾಗ್ಯಾ ಕಾಣಿಸುತ್ತಾರೆ. ಆತನಿಗೆ ಆತಂಕವಾಗುತ್ತೆ. 'ಅಯ್ಯೋ, ಗೌತಮ್ ಕಣ್ಣಿಗೆ ಭಾಗ್ಯಾ ಕಂಡ್ರೆ ಏನು ಗತಿ' ಎಂದು ಲಕ್ಷ್ಮೀಕಾಂತ್ ಭಯ ಬೀಳುತ್ತಾನೆ.
ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ದತ್ತನ ಹಳೇ ಲವ್ವರ್ ಆದ ಕನ್ನಡತಿಯ ಸುಚಿ, ನೆಟ್ಟಿಗರು ಫುಲ್ ಖುಷ್
ಆದರೆ ದೇವ್ರು ಕೊನೆಗಷ್ಟೇ ಹೀರೋ ಪರ ನಿಲ್ಲೋದು, ಅಲ್ಲಿವರೆಗೂ ವಿಲನ್ ಪರನೇ ಇರೋದು ರೂಢಿ. ಇಲ್ಲೂ ಅದೇ ಆಗುತ್ತೆ. ಗೌತಮ್ ದಿವಾನ್‌ನ ಹೆತ್ತ ತಾಯಿ ಭಾಗ್ಯ ದಿವಾನ್ ಭಿಕ್ಷುಕಿಯಂತೆ ಅಲೆದಾಡುತ್ತಾ ಕಾರಿನ ಮುಂದೆ ಬಂದು ನಿಂತರೆ ಸ್ವಂತ ಮಗನಿಗೇ ಗೊತ್ತಾಗಲ್ಲ. ತನ್ನ ಕೆಲಸದ ಗಡಿಬಿಡಿಯಲ್ಲಿರುವ ಗೌತಮ್ ಆಕೆಯನ್ನು ಭಿಕ್ಷುಕಿಯೆಂದು 500 ರೂಪಾಯಿಯನ್ನು ಆಕೆಯ ಕೈಗೆ ಇಡುತ್ತಾನೆ. ಆಕೆಯ ಮುಖ ನೋಡುವುದಿಲ್ಲ. ಸದ್ಯ ಇದೆಲ್ಲವನ್ನು ವಿಲನ್ ನೋಡಿಬಿಟ್ಟಿದ್ದಾನೆ. ನೆಕ್ಸ್ಟ್ ಆತ ಶಕುಂತಲಾ ಜೊತೆ ಸೇರಿ ಭಾಗ್ಯ ಮರ್ಡರ್‌ಗೆ ಸ್ಕೆಚ್ ಹಾಕೋದು ಗ್ಯಾರಂಟಿ. ಒಂದು ಹಂತದಲ್ಲಿ ಭಾಗ್ಯ ಗೌತಮ್ ಮುಖಾಮುಖಿ ಆಗೋದೂ ಗ್ಯಾರಂಟಿ. ಅಷ್ಟರಲ್ಲಿ ಪರಿಸ್ಥಿತಿ ಏನಾಗಿರುತ್ತೋ ದೇವರೇ ಬಲ್ಲ!