Turning Point: ತಾಷ್ಕೆಂಟ್ ಫೈಲ್ಸ್- ಶಾಸ್ತ್ರೀಜಿ ಅಸಹಜ ಸಾವಿನ ಸುತ್ತ ನೂರೆಂಟು ಅನುಮಾನ!

Apr 4, 2024, 5:07 PM IST

ಬೆಂಗಳೂರು (ಏ.4): ಲಾಲ್‌  ಬಹದ್ದೂರ್‌ ಶಾಸ್ತ್ರೀಜಿ ದೇಶದ ಎರಡನೇ ಪ್ರಧಾನಿ. ನೆಹರು ಬಳಿಕ ಭಾರತಕ್ಕೆ ಅನಾಥ ಪ್ರಜ್ಞೆ ಕಾಡದ ಹಾಗೆ ಮಾಡಿದ ಧೀಮಂತ ನಾಯಕ. ಹಾಗಂತ, ಶಾಸ್ತ್ರೀಜಿ ಪಟ್ಟದಲ್ಲಿ ಕೂತಾಗ, ಭಾರತವೇನು ಶ್ರೀಮಂತವಾಗಿತ್ತಾ? ಹೋಗಲಿ, ನೆಮ್ಮದಿಯಾದ್ರೂ ಇತ್ತಾ..? ಇಲ್ಲ.. ಶಾಸ್ತ್ರೀಜಿ ಅವತ್ತು ಕೂತದ್ದು, ರತ್ನಖಚಿತ ಸಿಂಹಾಸನದ ಮೇಲಲ್ಲ.. ಅಕ್ಷರಶಃ ಮುಳ್ಳಿನ ಗದ್ದುಗೆ ಮೇಲೆ.

ಅದು 1960ರ ದಶಕ, ಭಾರತದ ಪಾಲಿಗೆ ಶಾಪಗ್ರಸ್ತವಾಗಿಯೇ ಆರಂಭವಾಗಿತ್ತು  ಅದರಲ್ಲೂ ಕ್ಷುದ್ರಗ್ರಹಗಳ ಹಾಗೆ ಹೆಗಲೇರಿದ್ದ ಪಾಕಿಸ್ತಾನ ಮತ್ತು ಚೀನಾ, ಇಬ್ಬರೂ ಭಾರತವನ್ನ ರಕ್ತಪಿಪಾಸುಗಳ ಹಾಗೆ ಹೀರೋಕೆ ನೋಡ್ತಾ ಇದ್ದರು. ಈ ಹಂತದಲ್ಲಿ ಗದ್ದುಗೆಯಲ್ಲಿ ಇದ್ದದ್ದು ಲಾಲ್‌ ಬಹದ್ದೂರ್‌ ಶಾಸ್ತ್ರೀ.

Turning Point: Sorry ಸರ್ದಾರ್! ಉಕ್ಕಿನ ಮನುಷ್ಯನಿಗೆ ಪಟ್ಟ ತಪ್ಪಿಸಿದ್ದರಾ ಗಾಂಧೀಜಿ..?

ಐದೂಖಾಲಡಿಯೂ ಎತ್ತರವಿಲ್ಲದ ವ್ಯಕ್ತಿ, ನಮ್ಮನ್ನ ತಾನೆ ಹೇಗೆ ಎದುರಿಸಿಯಾನು ಅನ್ನೋ ಹುಂಬ ಧೈರ್ಯದಿಂದ, ಅದರ ಜೊತೆಗೆ, ಚೀನಾ ಹಾಗೂ ಅಮೆರಿಕಾ ಕೊಟ್ಟ ಹುಚ್ಚು ಬೆಂಬಲದಿಂದ, ಕಾಶ್ಮೀರದ ಮೇಲೆ ರಕ್ಕಸ ಹಸ್ತ ಚಾಚೇ ಬಿಟ್ಟಿತ್ತು, ಪಾಪಿ ಪಾಕಿಸ್ತಾನ. ಅದಕ್ಕೆ ಭಾರತ ಕೊಟ್ಟ ಉತ್ತರವೂ ಅದೇ ರೀತಿಯಲ್ಲಿತ್ತು