ಐಪಿಎಲ್ ಹರಾಜು 2025: ಆರ್‌ಟಿಎಂ ಕಾರ್ಡ್ ಬಳಕೆ ಹೇಗೆ ಗೊತ್ತಾ? ರೂಲ್ಸ್‌ನಲ್ಲಿ ಮಹತ್ವದ ಬದಲಾವಣೆ

Published : Nov 24, 2024, 01:14 PM IST
ಐಪಿಎಲ್ ಹರಾಜು 2025: ಆರ್‌ಟಿಎಂ ಕಾರ್ಡ್ ಬಳಕೆ ಹೇಗೆ ಗೊತ್ತಾ? ರೂಲ್ಸ್‌ನಲ್ಲಿ ಮಹತ್ವದ ಬದಲಾವಣೆ

ಸಾರಾಂಶ

2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಟಿಎಂ ರೂಲ್ಸ್‌ ವಿಚಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ

ಜೆಡ್ಡಾ: ಬಹುನಿರೀಕ್ಷಿತ 2025ರ ಐಪಿಎಲ್ ಮೆಗಾ ಹರಾಜು ಇಂದು ಹಾಗೂ ನಾಳೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. 577 ಆಟಗಾರರು ಐಪಿಎಲ್ ಮೆಗಾ ಹರಾಜಿನಲ್ಲಿ ಹೆಸರು ನೋಂದಾಯಿಸಿದ್ದು, ಈ ಪೈಕಿ 10 ಫ್ರಾಂಚೈಸಿಗಳು ಗರಿಷ್ಠ 204 ಆಟಗಾರರನ್ನು ಖರೀದಿಸಲು ಅವಕಾಶ ಇದೆ. ಇನ್ನು ಈ ಪೈಕಿ ಫ್ರಾಂಚೈಸಿಗಳು ಆರ್‌ಟಿಎಂ(ರೈಟ್ ಟು ಮ್ಯಾಚ್) ಕಾರ್ಡ್ ಬಳಸಲು ಅವಕಾಶವಿದೆ. ಆದರೆ ಆರ್‌ಟಿಎಂ ರೂಲ್ಸ್‌ನಲ್ಲಿ ಈ ಬಾರಿ ಕೊಂಚ ಬದಲಾವಣೆ ಮಾಡಲಾಗಿದೆ.

ಹೌದು, ತಂಡದಿಂದ ಕೈಬಿಡಲಾದ ಆಟಗಾರರನ್ನು ಮತ್ತೆ ತಂಡಕ್ಕೆ ಸೇರಿಸಲು ಫ್ರಾಂಚೈಸಿಗಳಿಗೆ ಐಪಿಎಲ್ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ ಟಿಎಂ) ಅವಕಾಶ ಸಿಗಲಿದೆ. ಅಂದರೆ, ತಾನು ಬಿಡುಗಡೆ ಗೊಳಿಸಿದ ಆಟಗಾರನಿಗೆ ಹರಾಜಿನಲ್ಲಿ ಬೇರೆ ಯಾವುದೇ ತಂಡ ಬಿಡ್ ಮಾಡಿದರೆ, ಆಗ ಆರ್‌ಟಿಎಂ ಕಾರ್ಡ್‌ ಬಳಸಿ ಆ ಆಟಗಾರನನ್ನು ಮತ್ತೆ ತನ್ನ ತಂಡಕ್ಕೆ ಸೇರ್ಪಡೆಗೊಳಿಸಬಹುದು. ಆದರೆ  ಈ ಬಾರಿ ಆರ್‌ಟಿಎಂ ನಿಯಮ ಬದಲಾವಣೆ ಮಾಡಲಾಗಿದೆ.  ತಂಡವೊಂದು ತನ್ನ ಆಟಗಾರನನ್ನು ಆರ್‌ಟಿಎಂ ಬಳಸಿ ಮರಳಿ ಪಡೆಯುವಾಗ, ಇನ್ನೊಂದು ತಂಡ ಬಿಡ್ ಮೊತ್ತ ಹೆಚ್ಚಿಸಬಹುದು. 

ಉದಾಹರಣೆಗೆ, ಡೆಲ್ಲಿ ತಂಡದಿಂದ ಹೊರಬಿದ್ದಿರುವ ರಿಷಭ್ ಪಂತ್‌ಗೆ ಹರಾಜಿನಲ್ಲಿ ಆರ್‌ಸಿಬಿ ₹18 ಕೋಟಿಗೆ ಬಿಡ್ ಮಾಡಿದರೆ, ಆಗ ಆರ್‌ಟಿಎಂ ಬಳಸಿ ರಿಷಭ್‌ ಪಂತ್‌ರನ್ನು ಡೆಲ್ಲಿ ಮರಳಿ ಪಡೆಯಬಹುದು. ಆದರೆ ಆರ್‌ಸಿಬಿಗೆ ರಿಷಭ್ ಬಿಡ್ ಮೊತ್ತ ವನ್ನು ಮತ್ತಷ್ಟು ಹೆಚ್ಚಿಸುವ ಅವಕಾಶವಿದೆ. ಆಗ ಡೆಲ್ಲಿ ಇದೇ ಮೊತ್ತಕ್ಕೆ ರಿಷಭ್‌ರನ್ನು ಖರೀದಿಸಬೇಕಾಗುತ್ತದೆ.

ಅದೃಷ್ಟ ಪರೀಕ್ಷೆಗಿಳಿದ ರಾಜ್ಯದ 24 ಮಂದಿ 

ಐಪಿಎಲ್‌ ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಕೆ. ಎಲ್.ರಾಹುಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮಯಾಂಕ್ ಅಗರ್‌ವಾಲ್‌, ಪ್ರಸಿದ್ಧ ಕೃಷ್ಣ, ಲುವ್‌ನಿತ್ ಸಿಸೋಡಿಯಾ, ಆರ್.ಸ್ಮರಣ್, ಎಲ್.ಆರ್.ಚೇತನ್, ಮನೋಜ್ ಭಾಂಡಗೆ, ಅಭಿಲಾಶ್ ಶೆಟ್ಟಿ, ವೈಶಾಖ್ ವಿಜಯ್‌ ಕುಮಾರ್, ಪ್ರವೀಣ್ ದುಬೆ, ಮನ್ವಂತ್ ಕುಮಾರ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಅಭಿನವ್ ಮಹೋಹರ್, ಬಿ.ಆರ್.ಶರತ್. ಕೃಷ್ಣನ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ದೀಪಕ್ ದೇವಾಡಿಗ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗಡೆ, ಸಮರ್ಥ್ ನಾಗರಾಜ್ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಐಪಿಎಲ್‌ ಅಂಕಿ-ಅಂಶ

48: ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತದ 48 ಆಟಗಾರರು ಹರಾಜಿನಲ್ಲಿ ಭಾಗಿ

70: 10 ಫ್ರಾಂಚೈಸಿಗಳಿಗೆ ಒಟ್ಟು 70 ವಿದೇಶಿ ಆಟಗಾರರನ್ನು ಖರೀದಿಸುವ ಅವಕಾಶ.

81: ಹರಾಜಿನಲ್ಲಿ ಒಟ್ಟು 81 ಆಟಗಾರರ ಮೂಲಬೆಲೆ 2 ಕೋಟಿ ರು. ನಿಗದಿಯಾಗಿದೆ.

ಹರಾಜು ಆರಂಭ: ಮಧ್ಯಾಹ್ನ 3.30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಜಿಯೋ ಸಿನಿಮಾ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ