ಎಲ್ಲರಿಗೂ ಫ್ರೀ ವ್ಯಾಕ್ಸಿನ್: ಮೋದಿ ಒಂದು ನಿರ್ಧಾರದ ಹಿಂದಿದೆ ನೂರೆಂಟು ಒಳಗುಟ್ಟು!

Jun 9, 2021, 5:25 PM IST

ನವದೆಹಲಿ(ಜೂ.09): ಶತ್ರುಗಳ ಷಡ್ಯಂತ್ರಕ್ಕೆ ಮೋದಿ ಕೊಟ್ರು ಬಿಗ್‌ ಶಾಕ್. ಇನ್ಮುಂದೆ ಎದುರಾಳಿಗಳು ಕೆಮ್ಮಂಗಿಲ್ಲ, ಕದಲಂಗಿಲ್ಲ. ದೇಶದ ನೂರು ಕೋಟಿ ಜನರ ವ್ಯಾಕ್ಸಿನೇಷನ್ ಹೊಣೆ ಈಗ ಮೋದಿ ಹೆಗಲ ಮೇಲೆ. ಈ ತೀರ್ಮಾನದ ಹಿಂದಿದೆ ರಹಸ್ಯ ಸಂಗತಿ. ಒಂದೇ ಒಂದು ನಿರ್ಧಾರ, ಒಂದೇ ಒಂದು ಮಾತು. ಭಾರತದ ಭವಿಷ್ಯವನ್ನೇ ಬದಲಿಸುತ್ತಾ? 

ಲಸಿಕೆಗೆ 100 ಕೋಟಿ ರೂ ನೀಡಲು ಮುಂದಾಗಿದ್ದ ಕಾಂಗ್ರೆಸ್‌ಗೆ ಬಿಗ್ ಶಾಕ್

ಹೌದು ಮಹತ್ವದ ಬೆಳವಣಿಗೆಯೊಂದರಲ್ಲಿ 18 ವರ್ಷ ಮೇಲ್ಪಟ್ಟದೇಶದ ಎಲ್ಲಾ ನಾಗರಿಕರಿಗೂ ಉಚಿತ ಕೋವಿಡ್‌ ಲಸಿಕೆ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೆ ಈ ಲಸಿಕೆಯನ್ನು ಸ್ವತಃ ತಾನೇ ಕಂಪನಿಗಳಿಂದ ಖರೀದಿಸಿ ರಾಜ್ಯಗಳಿಗೆ ಜೂನ್‌ 21ರಿಂದ ವಿತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದರೊಂದಿಗೆ ಈವರೆಗೆ 45 ವರ್ಷ ಮೇಲ್ಪಟ್ಟವರಿಗೆ ವಿತರಿಸಲು ಮಾತ್ರವೇ ರಾಜ್ಯಗಳಿಗೆ ಉಚಿತವಾಗಿ ಲಭ್ಯವಾಗುತ್ತಿದ್ದ ಲಸಿಕೆ ಇನ್ನು 18-45ರ ವಯೋಮಾನದವರಿಗೂ ವಿತರಿಸಲು ಸಿಗಲಿದೆ.

ಅನ್‌ಲಾಕ್‌ ಹೇಗೆ ಮಾಡಲಾಗುತ್ತದೆ..? ಆರ್ ಅಶೋಕ್ ಮಾತು

ಕೇಂದ್ರದ ಈ ನಿರ್ಧಾರದ ಹೊರತಾಗಿಯೂ ಖಾಸಗಿ ಆಸ್ಪತ್ರೆಗಳು, ಕಂಪನಿಗಳಿಂದ ನೇರವಾಗಿ ಲಸಿಕೆ ಖರೀದಿಸುವ ಅವಕಾಶ ಮುಂದುವರೆಯಲಿದೆ. ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಲು ಸೇವಾ ಶುಲ್ಕವಾಗಿ ಗರಿಷ್ಠ 150 ರು. ಮಾತ್ರವೇ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.