ರಣಬೀರ್​ಗಿಂತಲೂ ಮಧ್ಯರಾತ್ರಿ ನನಗೆ ವಿಕ್ಕಿನೇ ಇಷ್ಟ ಎಂದ ತೃಪ್ತಿ ಡಿಮ್ರಿ: ನಟಿ ಕೊಟ್ಟ ಕಾರಣ ಹೀಗಿದೆ ನೋಡಿ!

By Suchethana D  |  First Published Sep 29, 2024, 12:55 PM IST

ಮಧ್ಯರಾತ್ರಿಯ ಗೆಳೆಯನಾಗಿ ಯಾರನ್ನು ಇಷ್ಟಪಡುವಿರಿ ಎಂದು ಬೆತ್ತಲೆ ರಾಣಿ ಎಂದೇ ಫೇಮಸ್​ ಆಗಿರೋ ತೃಪ್ತಿ ಡಿಮ್ರಿಯನ್ನು ಪ್ರಶ್ನಿಸಿದಾಗ, ಆಕೆ ಹೇಳಿದ್ದೇನು? 
 


ಅನಿಮಲ್​ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್​​ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಆದರೆ ಇದೀಗ ಗೂಗಲ್​ನಲ್ಲಿ ತೃಪ್ತಿಯ ಬಗ್ಗೆ ಸಿನಿ ಪ್ರಿಯರಿಗೆ ಇಂಟರೆಸ್ಟ್​ ಜಾಸ್ತಿಯಾಗುತ್ತಿದೆ. ಯಾರೀಕೆ? ಯಾವೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರೆ? ಎಲ್ಲಿಯವರು ಎಂದೆಲ್ಲಾ ಸರ್ಚ್​ ಶುರುವಿಟ್ಟುಕೊಂಡಿದ್ದಾರೆ. ಪಾಳುಬಿದ್ದಿದ್ದ ಈಕೆಯ ಸೋಷಿಯಲ್​ ಮೀಡಿಯಾ ಖಾತೆ ಸಕ್ರಿಯಗೊಂಡಿದ್ದು, ಈಕೆಯ ಸೋಷಿಯಲ್​ ಮೀಡಿಯಾ ಕೂಡ ಸರ್ಚ್​ ಮಾಡಲಾಗುತ್ತಿದೆ. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದಾರೆ ಈ ಬೆಡಗಿ.  ಅನಿಮಲ್​ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್​ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ. ರಾತ್ರೋರಾತ್ರಿ ನ್ಯಾಷನಲ್​  ಕ್ರಷ್​ ಕೂಡ ಆದರು. ಬಳಿಕ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ( Vicky Vidya Ka Woh Wala Video- ವಿಕ್ಕಿ ವಿದ್ಯಾರ ಆ ವಿಡಿಯೋ) ಹೆಸರಿನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಅನಿಮಲ್​ ಚಿತ್ರದಲ್ಲಿ ಆಲಿಯಾ ಭಟ್​ ಪತಿ ರಣಬೀರ್​ ಕಪೂರ್​ ಜೊತೆ ಬೆತ್ತಲಾದ ಬಳಿಕ ಬ್ಯಾಡ್ ನ್ಯೂಸ್​ ಚಿತ್ರದಲ್ಲಿ ಕತ್ರೀನಾ ಕೈಫ್​ ಪತಿ ವಿಕ್ಕಿ ಕೌಶಲ್​ ಜೊತೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡವರು ತೃಪ್ತಿ ಡಿಮ್ರಿ. ಇದೇ ಕಾರಣಕ್ಕೆ ನಟಿಗೆ ನಿಮಗೆ ರಣಬೀರ್​ ಮತ್ತು ವಿಕ್ಕಿ ನಡುವೆ ಮಧ್ಯರಾತ್ರಿಯ ಗೆಳೆಯನಾಗಿ ಯಾರು ಇಷ್ಟವಾಗ್ತಾರೆ ಎಂದು ಪ್ರಶ್ನಿಸಲಾಗಿದೆ. ಇಂಡಿಯಾ ಟುಡೆ ಕಾನ್‌ಕ್ಲೇವ್‌ನಲ್ಲಿ ಸೆಷನ್‌ನಲ್ಲಿ ನಟಿಗೆ ಈ ಪ್ರಶ್ನೆ ಕೇಳಲಾಗಿತ್ತು. ಅಂದ್ರೆ ಮಧ್ಯರಾತ್ರಿ ಕರೆದರೂ ಅವರ ಮೇಲೆ ನಂಬಿಕೆ ಇಡಬಹುದು ಎಂಬ ಅರ್ಥದಲ್ಲಿ ಪ್ರಶ್ನೆ ಕೇಳಲಾಗಿತ್ತು.  ಕೂಡಲೇ ನಟಿ, ಒಂದು ಕ್ಷಣವೂ ಯೋಚನೆ ಮಾಡದೇ,  ವಿಕ್ಕಿ ಕೌಶಲ್ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ ತೃಪ್ತಿ.  ವಿಕ್ಕಿ ಕೌಶಲ್​  ಸಿನಿಮಾ ಸೆಟ್‌ನಲ್ಲಿ ನನ್ನ ಜೊತೆ ಹಲವಾರು ಕ್ಷಣಗಳನ್ನು ಕಳೆದಿದ್ದರು. ಅವರ ಕ್ಯಾರೆಕ್ಟರ್​ ನನಗೆ ಇಷ್ಟವಾಯಿತು. ಅವರು ನನಗೆ ನನ್ನ ಸಹ ನಟ ಎನ್ನಿಸುವುದಕ್ಕಿಂತಲೂ ಹೆಚ್ಚಾಗಿ ಆತ್ಮೀಯ ಸ್ನೇಹಿತರಾದರು.  ಆತ ತುಂಬಾ ಕೂಲ್​ ವ್ಯಕ್ತಿ. ಶಾಂತ ಸ್ವಭಾವದವರು.  ಸಂಬಂಧದ ಬಗ್ಗೆ ಕಾಳಜಿಯೂ ಇದೆ ಎಂದ ತೃಪ್ತಿ ಮಧ್ಯರಾತ್ರಿಯ ಗೆಳೆಯನಾದರೆ ಅವರೇ ಇಷ್ಟ ಎಂದಿದ್ದಾರೆ.  

Tap to resize

Latest Videos

ನಿವೇದಿತಾ ಸೆಕ್ಸಿ ವಿಡಿಯೋ: ನೀನೇ ಕಣಮ್ಮಾ ಕನ್ನಡದ ಮುಂದಿನ ತೃಪ್ತಿ ಡಿಮ್ರಿ ಎನ್ನೋದಾ ಟ್ರೋಲಿಗರು?
 
ಇನ್ನು ನಟಿಯ ಮುಂಬರುವ ಚಿತ್ರದ ಕುರಿತು ಹೇಳುವುದಾದರೆ, ಇತ್ತೀಚೆಗೆ, ಅನೀಸ್ ಬಾಜ್ಮಿ ನಿರ್ದೇಶಿಸಿದ ಬಹು ನಿರೀಕ್ಷಿತ ಭೂಲ್ ಭುಲೈಯಾ 3 ಸೇರಿದಂತೆ ಇನ್ನು ಕೆಲವು  ಚಿತ್ರಗಳಿಗಾಗಿ ತೃಪ್ತಿ  ಗಮನ ಸೆಳೆದಿದ್ದಾರೆ, ಈ ಚಿತ್ರದಲ್ಲಿ ಇವರು  ಕಾರ್ತಿಕ್ ಆರ್ಯನ್ ಜೊತೆಗೆ ನಟಿಸಿದ್ದಾರೆ.  ಇದು 1990 ರ ದಶಕದ ಕಥೆ ಆಧರಿಸಿರುವ  ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರದಲ್ಲಿ  ಅವರು ಋಷಿಕೇಶದ ವಿದ್ಯಾ ಎಂಬ ಸಣ್ಣ-ಪಟ್ಟಣದ ಹುಡುಗಿಯಾಗಿ ನಟಿಸಿದ್ದಾರೆ ಮತ್ತು ಟ್ರೈಲರ್ ಈಗಾಗಲೇ 90 ರ ದಶಕದ ವೈಬ್ ಮತ್ತು ಹಾಸ್ಯಮಯ ಒಳನೋಟಗಳೊಂದಿಗೆ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ರಾಜ್‌ಕುಮಾರ್ ರಾವ್ ಅವರನ್ನೂ ಒಳಗೊಂಡಿರುವ ಈ ಚಿತ್ರವು ಒಂದು ಟ್ವಿಸ್ಟ್‌ನೊಂದಿಗೆ ಕ್ಲಾಸಿಕ್ ಪ್ರೇಮಕಥೆಯನ್ನು ರಿಫ್ರೆಶ್ ಮಾಡುವ ಭರವಸೆ ನೀಡುತ್ತದೆ. ಇನ್ನು ವಿಕ್ಕಿ ಕೌಶಲ್​ ಅವರು,  ಲಕ್ಷ್ಮಣ್ ಉಟೇಕರ್ ಅವರ ಛಾವಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ, ಅಲ್ಲಿ ಅವರು ಮರಾಠ ದೊರೆ ಮತ್ತು ಛತ್ರಪತಿ ಶಿವಾಜಿಯ ಮಗ ಸಂಭಾಜಿಯ ಪಾತ್ರ ಮಾಡುತ್ತಿದ್ದಾರೆ.  

ಇನ್ನು, ನಟಿಯ ಕುರಿತು ಹೇಳುವುದಾದರೆ,  29 ವರ್ಷದ ತೃಪ್ತಿ ಈ ಮೊದಲು ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಜೊತೆ ಸಂಬಂಧದಲ್ಲಿದ್ದರು. ಅದರ ಬಳಿ ಅವರ ನಡುವೆ ಬ್ರೇಕಪ್​ ಆಗಿದೆ. ಇದೀಗ ನಟಿ, ಹೋಟೆಲ್​ ಉದ್ಯಮಿ ಆಗಿರುವ ಸ್ಯಾಮ್​ ಮರ್ಚೆಂಟ್​ ಜೊತೆ ಸಂಬಂಧ ಹೊಂದಿದ್ದು, ಇವರಿಬ್ಬರ ಫೋಟೋಗಳು ಇದಾಗಲೇ ವೈರಲ್​ ಆಗಿವೆ. ತಮ್ಮ ಸಂಬಂಧವನ್ನು ಇನ್ನೂ ಕನ್​ಫರ್ಮ್​ ಮಾಡಿಲ್ಲ ನಟಿ. ಆದರೆ ಚಿತ್ರತಾರೆಯರ ಸಂಬಂಧ ಗುಟ್ಟಾಗೇನೂ ಉಳಿಯುವುದಿಲ್ಲವಲ್ಲ. ಅಂದಹಾಗೆ, ಸ್ಯಾಮ್ ಮರ್ಚೆಂಟ್ ಅವರು  ಗೋವಾದಲ್ಲಿರುವ ವಾಟರ್ಸ್ ಬೀಚ್ ಲೌಂಜ್ ಮತ್ತು ಗ್ರಿಲ್‌ನ ಸಂಸ್ಥಾಪಕರಾಗಿದ್ದಾರೆ. ಅವರ 249K ಅನುಯಾಯಿಗಳಲ್ಲಿ ದಿಶಾ ಪಟಾನಿ, ತೃಪ್ತಿ ಡಿಮ್ರಿ ಮತ್ತು ಟೈಗರ್ ಶ್ರಾಫ್ ಸೇರಿದ್ದಾರೆ. ಸ್ಯಾಮ್ ಮರ್ಚೆಂಟ್ ಮಾಡೆಲ್ ಆಗಿದ್ದರು. 2002ರಲ್ಲಿ ಗ್ಲಾಡ್ರಾಗ್ಸ್ ಮ್ಯಾನ್‌ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ನಂತರ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡರು. ಗೋವಾದಲ್ಲಿ ಬೀಚ್ ಕ್ಲಬ್‌ಗಳು ಮತ್ತು ಹೋಟೆಲ್‌ಗಳನ್ನು ಪ್ರಾರಂಭಿಸಿದರು.

ಅನಿಮಲ್​ ನಟಿ ತೃಪ್ತಿ ಡಿಮ್ರಿ 'ಆ ವಿಡಿಯೋ' ಲೀಕ್​! ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು...
 

click me!