ಇಂಥ ಹೆಂಡ್ತಿ ಸಿಕ್ರೆ ಹೇಗೆ ಹ್ಯಾಂಡಲ್​ ಮಾಡೋದು? ಅವಿವಾಹಿತ ಯುವಕರಿಗೆ ಶುರುವಾಗಿದೆ ಟೆನ್ಷನ್​!

Published : Sep 29, 2024, 12:26 PM IST
ಇಂಥ ಹೆಂಡ್ತಿ ಸಿಕ್ರೆ ಹೇಗೆ ಹ್ಯಾಂಡಲ್​ ಮಾಡೋದು? ಅವಿವಾಹಿತ ಯುವಕರಿಗೆ ಶುರುವಾಗಿದೆ ಟೆನ್ಷನ್​!

ಸಾರಾಂಶ

ಸದಾ ಸಿಡಿಮಿಡಿ ಎನ್ನುವ ದೀಪಿಕಾ ಈಗ ಗಂಡ ಅಭಿಯ ವಿರುದ್ಧ ಕೆಂಡಾಮಂಡಲವಾಗಿದ್ದಾಳೆ. ಈಕೆಯ ಕ್ಯಾರೆಕ್ಟರ್​ ನೋಡಿ ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ!  

ಸದ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್​ ಏನೇನೋ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅತ್ತ ತುಳಸಿ ಗರ್ಭಿಣಿಯಾಗಿದ್ದಾಳೆ. ಇದರಿಂದ ಪ್ರೇಕ್ಷರಿಂದಲೇ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ವೈದ್ಯರು ಕೂಡ ಈ ಮಗು ಹುಟ್ಟಿದರೆ ಅಪಾಯ ಎನ್ನುತ್ತಿದ್ದಾರೆ. ಇದೀಗ ತುಳಸಿ ಮಗು ತೆಗೆಸಿಕೊಳ್ಳುವುದೇ ಒಳ್ಳೆಯದು ಎನ್ನುವುದು ಮಾಧವ್​ ಅಭಿಪ್ರಾಯ ಕೂಡ. ತುಳಸಿಗೆ ಏನು ಮಾಡಬೇಕೋ ತಿಳಿಯುತ್ತಿಲ್ಲ. ಆದರೆ ಇದೇ ಮಗುವಿನ ಕಾರಣದಿಂದಾಗಿ ಮನೆಯಲ್ಲಿ ಎಲ್ಲರೂ ಒಂದಾಗುತ್ತಿದ್ದಾರೆ. ಅತ್ತ ಸಮರ್ಥ್​ಗೆ ಅಮ್ಮ ಗರ್ಭಿಣಿ ಎನ್ನುವ ವಿಷಯ ಗೊತ್ತಿಲ್ಲ. ಆಕೆಗೆ ಬ್ರೈನ್​ ಟ್ಯೂಮರ್​ ಇದೆ ಎಂದು ಆಕೆಯನ್ನು ಅಮ್ಮಾ ಎನ್ನುತ್ತಿದ್ದಾನೆ. ಇಲ್ಲಿಯವರೆಗೆ ಮೇಡಂ ಅಂತಿದ್ದವ, ಅಮ್ಮಾ ಹೇಳಿದ್ದನ್ನು ಕೇಳಿ ತುಳಸಿಗೆ ಖುಷಿಯಾಗಿದೆ. ಅತ್ತ ಅಭಿ ಕೂಡ ತುಳಸಿಯನ್ನು ಅಮ್ಮಾ ಎನ್ನದಿದ್ದರೂ ಪ್ರೀತಿಸಲು ಶುರು ಮಾಡಿದ್ದಾನೆ.

ಇದು ದೀಪಿಕಾಳಿಗೆ ಸಹಿಸಲು ಆಗುತ್ತಿಲ್ಲ. ಆದರೆ ಇದನ್ನು ನೇರವಾಗಿ ಪತಿಗೆ ಹೇಳಲು ಆಗ್ತಿಲ್ಲ. ಒಳ್ಳೆಯವಳು ಎನ್ನುವ ಪೋಸ್​ ಕೊಡಬೇಕಲ್ಲ. ಶಾರ್ವರಿ ಕೂಡ ವಿಲನ್​ ಸೊಸೆ ಪರವಾಗಿ ಇದ್ದು, ಅವಳ ಕಿವಿಯೂದುತ್ತಿದ್ದಾಳೆ. ಅಭಿ ದೀಪಿಕಾ ಸಲುವಾಗಿ ಏನೆಲ್ಲಾ  ಮಾಡಿದರೂ ಅವಳಿಗೆ ಅದು ಇಷ್ಟವಾಗುತ್ತಿಲ್ಲ. ಕೋಪ ಮಾಡಿಕೊಳ್ಳುತ್ತಿದ್ದಾಳೆ. ಚಿಕ್ಕ ಚಿಕ್ಕ ವಿಷಯಕ್ಕೂ ಗಂಡನ ವಿರುದ್ಧ ಜಗಳವಾಡುತ್ತಿದ್ದಾಳೆ. ನೀನು ನನ್ನನ್ನ ನೆಗ್ಲೆಕ್ಟ್​ ಮಾಡ್ತಾ ಇದ್ದಿಯಾ, ಮೊದಲಿನ ರೀತಿ ನೋಡಿಕೊಳ್ತಾ ಇಲ್ಲ. ನಾನು ಜಗಳಗಂಟಿ ಥರ ಅನ್ನುತ್ತಾ ಇದ್ಯಾ ಎಂದೆಲ್ಲಾ ಬೈದಿದ್ದಾಳೆ. ಅವಳಿಗೆ ಅಭಿ ತುಳಸಿಯ ಜೊತೆ ಚೆನ್ನಾಗಿ ಇರುವುದನ್ನು ನೋಡುವುದು ಕಷ್ಟವಾಗಿದೆ. ಅದಕ್ಕಾಗಿಯೇ ಪರೋಕ್ಷವಾಗಿ ಹೀಗೆ ಹೇಳುತ್ತಿದ್ದಾಳೆ. ಗಂಡನನ್ನು ಗೆಟ್​ಲಾಸ್ಟ್​ ಎಂದು ಹೊರಕ್ಕೆ ದೂಡಿದ್ದಾಳೆ.

ಬಿಗ್​ಬಾಸ್​ ಮನೆಗೆ ರಾಖಿ ಸಾವಂತ್ ಎಂಟ್ರಿ! ದೊಡ್ಮನೆಯ ಮೂಡು ಹೇಗೆ ಚೇಂಜ್​ ಆಗೋಯ್ತು ನೋಡಿ...

ಇದನ್ನು ನೋಡಿದ ವೀಕ್ಷಕರಿಗೆ ವಿಪರೀತ ಕೋಪ ಬಂದಿದೆ. ಇಂಥ ಹೆಂಡ್ತಿ ದೇವರೇ ಯಾರಿಗೂ ಬೇಡ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಡಿವೋರ್ಸ್​ ಕೊಡು ಎನ್ನುತ್ತಿದ್ದಾರೆ. ಇಂಥ ಹೆಂಡತಿ ಸಿಗೋಕ್ಕಿಂತ ಮದುವೆಯಾಗೋದೇ ಬೇಡ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಮದುವೆಯಾಗದಿದ್ದರೆ ಮದುವೆಯಾಗಿಲ್ಲ ಎನ್ನುವುದು ಒಂದೇ ಚಿಂತೆ. ಮದುವೆಯಾಗಿ ದೀಪಿಕಾಳಂತ ಹೆಂಡ್ತಿ ಸಿಕ್ಕರೆ ಸಾವಿರಾರು ಚಿಂತೆನಪ್ಪಾ ಎಂದೆಲ್ಲಾ ನೆಟ್ಟಿಗರು ಹೇಳುತ್ತಿದ್ದಾರೆ. ಇಂಥ ಸಮಯದಲ್ಲಿ ಹೆಂಡತಿಯಾದವಳನ್ನು ಹೇಗೆ ಹ್ಯಾಂಡಲ್​  ಮಾಡುವುದು ಎಂದು ಕೆಲವರು ಕಮೆಂಟ್​ನಲ್ಲಿಯೇ ಸಲಹೆಯನ್ನೂ ಕೇಳುತ್ತಿದ್ದಾರೆ! ಒಟ್ಟಿನಲ್ಲಿ ದೀಪಿಕಾ ಕ್ಯಾರೆಕ್ಟರ್​ ನೋಡಿ ಪ್ರೇಕ್ಷಕರಿಗೆ ಅದರಲ್ಲಿಯೂ ಅವಿವಾಹಿತ ಯುವಕರಿಗೆ ಟೆನ್ಷನ್​ ಶುರುವಾಗಿರೋದಂತೂ ಗ್ಯಾರೆಂಟಿ ಎಂದು ಎನ್ನಿಸುತ್ತಿದೆ. 

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಎಲ್ಲ ವೀಕ್ಷಕರಿಗೆ ತುಳಸಿಯ ಮಗುವಿನದ್ದೇ ಚಿಂತೆ. ಹೇಗೋ ಮಾಧವ್​ ಬಿಟ್ಟು ವಿಷಯ ಯಾರಿಗೂ ಗೊತ್ತಿಲ್ಲ, ಮಗು ತೆಗೆಸಿದರೆ ಒಳ್ಳೆಯದು ಎನ್ನುತ್ತಿದ್ದಾರೆ. ಆದರೆ ಅತ್ತ ಮಗು ಆಗುವುದಿಲ್ಲ ಎಂದು ಪೂರ್ಣಿ ಕೊರಗುತ್ತಿದ್ದಾಳೆ. ಆದ್ದರಿಂದ ತುಳಸಿ ಯಾರಿಗೂ ತಿಳಿಯದಂತೆ ಮಗುವನ್ನು ಹೆತ್ತು ಪೂರ್ಣಿಗೆ ಕೊಡ್ತಾಳಾ, ಇಂಥದ್ದೊಂದು ಟ್ವಿಸ್ಟ್​ ಸೀರಿಯಲ್​ಗೆ ಸಿಗತ್ತಾ ಎನ್ನುವುದು ಕೆಲವರ ಅಭಿಮತ. ಒಟ್ಟಿನಲ್ಲಿ ಸೀರಿಯಲ್​ ಯಾವ ರೀತಿ ಟ್ವಿಸ್ಟ್​ ಪಡೆಯುತ್ತದೆ ಎನ್ನುವುದನ್ನು ನೋಡಬೇಕಿದೆ. 

ಕೈಯಲ್ಲಿ ಗರಗಸ ಹಿಡಿದು ಶ್ರೇಷ್ಠಾಳನ್ನು ಕೊಲ್ಲಲು ಹೊರಟ ಭಾಗ್ಯ: ವಿಡಿಯೋ ನೋಡಿ ಅಭಿಮಾನಿಗಳ ಸಪೋರ್ಟ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Meet ದೇವಿ ಬಿಳಗಲಿ… ಚಿಕ್ಕಪ್ಪನಾದ ಸಂಭ್ರಮವನ್ನು ಹಂಚಿಕೊಂಡ Kishen Bilagali
ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ