ಇನ್ಮುಂದೆ ಬೇಕಾಬಿಟ್ಟಿ ಕೆಲಸ ಮಾಡುವಂತಿಲ್ಲ, ಟೆಲಿಕಾಂ ಕಂಪನಿಗಳಿಗೆ ಮೂಗುದಾರ; ಅಕ್ಟೋಬರ್ 1 ರಿಂದ TRAI ಹೊಸ ನಿಯಮಗಳು

By Mahmad RafikFirst Published Sep 29, 2024, 12:56 PM IST
Highlights

ಅಕ್ಟೋಬರ್ 1 ರಿಂದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿದ್ದು, BSNL ಸೇರಿದಂತೆ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ನೀಡುವ ಸೇವೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ನೀಡಬೇಕಾಗುತ್ತದೆ. ಇದರಿಂದಾಗಿ ಗ್ರಾಹಕರು ತಮ್ಮ ಪ್ರದೇಶದಲ್ಲಿ ಲಭ್ಯವಿರುವ ನೆಟ್‌ವರ್ಕ್ ಸೇವೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ನವದೆಹಲಿ: ಪ್ರತಿ ತಿಂಗಳ ಆರಂಭದಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಮತ್ತೆ ಒಂದಿಷ್ಟು ಹೊಸ ನಿಯಮಗಳು ಜಾರಿಗೆ ಬಂದ್ರೆ ಮತ್ತೊಂದಿಷ್ಟಗಳನ್ನು ತಡೆಹಿಡಿಯಲಾಗುತ್ತದೆ. ಅಕ್ಟೋಬರ್ 1ರಿಂದ ಟೆಲಿಕಾಂ ಅಂಗಳದಲ್ಲಿ ಕೆಲ ಹೊಸ ನಿಯಮಗಳು ಜಾರಿಗೆ ಬರಲಿವೆ. ಇನ್ಮುಂದೆ ಬಿಎಸ್‌ಎನ್‌ಎಲ್ ಸೇರಿದಂತೆ ಖಾಸಗಿ ಟೆಲಿಕಾ ಕಂಪನಿಗಳು ಮನಸೋಯಿಚ್ಛೆ ಕೆಲಸ ಮಾಡುವಂತಿಲ್ಲ. ಟ್ರಾಯ್ ನಿಯಮಗಳಡಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಗ್ರಾಹಕರು ಹೊಸ ಟೆಲಿಕಾಂ ಕಂಪನಿಗಳ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ನಿಯಮಗಳಿಂದ ಕಂಪನಿಗಳು ತಮ್ಮ ಗ್ರಾಹಕರಿಗೆ ಯಾವೆಲ್ಲಾ ಸೇವೆಗಳನ್ನು ನೀಡುತ್ತಿವೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. 

ಇದುವರೆಗೂ ನೀವು ವಾಸಿಸುವ ಪ್ರದೇಶದಲ್ಲಿ ಯಾವ ಕಂಪನಿಯ ನೆಟ್‌ವರ್ಕ್ ಸರಿಯಾಗಿದೆ ಎಬುದನ್ನು ತಿಳಿದುಕೊಳ್ಳುವುದು ಕಷ್ಟಕರ ಕೆಲಸವಾಗಿತ್ತು. ಆದ್ರೆ ಈಗ ಹೊಸ ನಿಯಮದಿಂದ ನಿಮ್ಮ ಪ್ರದೇಶದಲ್ಲಿ ಯಾವ ನೆಟ್‌ವರ್ಕ್ ಚೆನ್ನಾಗಿದೆ ಎಂಬುದನ್ನು ಸರಳವಾಗಿ ತಿಳಿದುಕೊಳ್ಳಬಹುದು. ಅಕ್ಟೋಬರ್ 1ರಿಂದ ಟೆಲಿಕಾಂ ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲಿ ಯಾವ ಇಲಾಖೆಯಲ್ಲಿ ಯಾವೆಲ್ಲಾ ಸೇವೆಗಳನ್ನು ನೀಡುತ್ತಿದ್ದೇವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು. ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಕಡ್ಡಾಯವಾಗಿ ಈ ನಿಯಮವನ್ನು ಅಕ್ಟೋಬರ್‌ನಿಂದ ಪಾಲನೆ ಮಾಡಬೇಕು. 

Latest Videos

ಆಫಿಸ್‌ನಲ್ಲಿದ್ದರೂ ಮೊಬೈಲ್‌ನಲ್ಲಿ ಮನೆ WiFi ಬಳಸಬಹುದು; ಹೊಸ ಸ್ಕೀಂ ಮೂಲಕ Jio-Airtelಗೆ ಶಾಕ್ ಕೊಟ್ಟ BSNL

ಈ ನಿಯಮದಿಂದ ಬಳಕೆದಾರರು ಯಾವ ನೆಟ್‌ವರ್ಕ್ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಬಗೆಹರಿಯಲಿದೆ. ಗ್ರಾಹಕರಿಗೆ ನೀಡುವ ಸೇವೆ ಕುರಿತು ಸಂಪೂರ್ಣ ವಿವರಣೆಯನ್ನು ಟೆಲಿಕಾಂ ಕಂಪನಿಗಳು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಇದರಿಂದ ಗ್ರಾಹಕರು ತಾನು ವಾಸಿಸುವ ಪ್ರದೇಶದಲ್ಲಿ  2G, 3G, 4G ಅಥವಾ 5Gಗಳಲ್ಲಿ ಯಾವ ಸೇವೆ ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಬಹುದು. 

ಈ ನಿಯಮದ ಜೊತೆಗೆ ಎಲ್ಲಾ ಟೆಲಿಕಾಂ ಕಂಪನಿಗಳು ಆನ್‌ಲೈನ್ ಸರ್ವಿಸ್ ಪಾಲಿಸಿಗಳಲ್ಲಿ ಸುಧಾರಣೆ ತರುವಂತೆ ಸೂಚಿಸಲಾಗಿದೆ. ಸ್ಯಾಮ್ ಕಾಲ್‌ ಮೇಲೆ ನಿಯಂತ್ರಣ ಹೇರಲು ಟ್ರಾಯ್ ಮುಂದಾಗಿದೆ ಎಂದು ವರದಿಯಾಗಿದೆ. ಸ್ಯಾಮ್ ಕಾಲ್‌ಗಳನ್ನು ಯಾವುದೇ ಟೆಲಿಕಾಂ ಕಂಪನಿಗಳು ಉತ್ತೇಜಿಸಬಾರದು ಮತ್ತು ಗ್ರಾಹ ಸ್ನೇಹಿ ಕಾನೂನುಗಳನ್ನು ತರುವಂತೆ ಟ್ರಾಯ್ ಆದೇಶಿಸಿದೆ. ಈ ಎಲ್ಲಾ ನಿಯಮಗಳನ್ನು ಬಿಎಸ್‌ಎನ್‌ಎಲ್ ಸಹ ಪಾಲಿಸಬೇಕಿದೆ.

ಲೇಟ್ ಆದ್ರೂ ಲೇಟೆಸ್ಟ್‌ ಆಗಿ ಸ್ಫರ್ಧೆಗೆ ಧುಮುಕಿದ Vodafone-Idea; ₹200 ಗಿಂತಲೂ ಕಡಿಮೆ ಬೆಲೆಯ 4 ಪ್ಲಾನ್‌!

click me!