ಕೊರೋನಾದಿಂದ ಗುಣಮುಖರಾದವರ ಪ್ಲಾಸ್ಮಾಕ್ಕೆ ಭರ್ಜರಿ ಬೇಡಿಕೆ..!

Jul 12, 2020, 2:43 PM IST

ಬೆಂಗಳೂರು (ಜು. 12): ದಿನೇದಿನೇ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕೊರೋನಾದಿಂದ ಗುಣಮುಖರಾದವರ ಪ್ಲಾಸ್ಮಾಕ್ಕೆ ಭರ್ಜರಿ ಬೇಡಿಕೆ ಕಂಡುಬರುತ್ತಿದೆ. ಹೀಗಾಗಿ ಪ್ಲಾಸ್ಮಾ ದಾನ ಎಂಬುದು ದಂಧೆಯಾಗಿ ಪರಿವರ್ತನೆಗೊಳ್ಳುವ ಭೀತಿ ಎದುರಾಗಿದೆ.

ಪ್ಲಾಸ್ಮಾ ಪಡೆಯಲು ಶ್ರೀಮಂತರು ಯಾವ ಹಂತಕ್ಕೆ ಹೋಗಲೂ ಸೈ ಎನ್ನುತ್ತಿದ್ದಾರೆ. ಇತ್ತೀಚೆಗೆ ರೋಗಿಯೊಬ್ಬರು ಪ್ಲಾಸ್ಮಾ ದಾನಿಯನ್ನು ದೆಹಲಿಯಿಂದ ಹೈದರಾಬಾದ್‌ಗೆ ವಿಶೇಷ ವಿಮಾನದಲ್ಲಿ ಕರೆಸಿಕೊಳ್ಳುವ ಆಫರ್‌ ನೀಡಿದ್ದಾರೆ. ಸರ್ಕಾರ ಕೊರೋನಾದಿಂದ ಗುಣಮುಖರಾದವರು ಮತ್ತು ಅವರಲ್ಲಿ ಪ್ಲಾಸ್ಮಾ ದಾನಕ್ಕೆ ಸಿದ್ಧವಿರುವವರ ಪಟ್ಟಿತಯಾರಿಸಿದರೆ, ಅರ್ಹರು ಯಾವುದೇ ಸಂಕಷ್ಟವಿಲ್ಲದೆ ಮತ್ತು ಹಣ ತೆರಬೇಕಾದ ಪ್ರಮೇಯವಿಲ್ಲದೇ ಪ್ಲಾಸ್ಮಾ ಚಿಕಿತ್ಸೆ ಪಡೆಯಬಹುದು. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸುತ್ತಿಲ್ಲ ಎಂದು ಅಖಿಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವಾಗ ಮುಗಿಯುತ್ತೆ ಮಹಾಮಾರಿ ಕೊರೋನಾ ಕಾಟ..? ಇಲ್ಲಿದೆ ಉತ್ತರ

ಕೊರೋನಾದಿಂದ ಗುಣಮುಖರಾದ ವ್ಯಕ್ತಿಗಳು, 14 ದಿನಗಳ ಬಳಿಕ ತಮ್ಮ ರಕ್ತದಲ್ಲಿನ ಪ್ಲಾಸ್ಮಾವನ್ನು ದಾನ ಮಾಡಬಹುದು. ಆದರೆ ದಾನ ಮಾಡಬಯಸುವವರ ಪ್ಲಾಸ್ಮಾ ಮತ್ತು ತೆಗೆದುಕೊಳ್ಳುವವರ ರಕ್ತದ ಗುಂಪು ಒಂದೇ ಆಗಿರಬೇಕು. ಹೀಗಾಗಿ ಭಾರಿ ಬೇಡಿಕೆ ಕಂಡುಬರುತ್ತಿದೆ.