ಒಂದೇ ದಿನದಲ್ಲಿ ತಾನು ಗೆಲ್ಲಲ್ಲವೆಂದು ಡಿಸೈಡ್ ಮಾಡಿದ್ರಾ ಲಾಯರ್‌ ಜಗದೀಶ್‌, ತ್ರಿವಿಕ್ರಮ್, ಧರ್ಮಗೆ ಬೆಂಬಲ

By Gowthami K  |  First Published Oct 1, 2024, 12:16 AM IST

ಬಿಗ್‌ಬಾಸ್‌ ಕನ್ನಡ 11 ನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳಿವೆ. ಲಾಯರ್ ಜಗದೀಶ್, ತ್ರಿವಿಕ್ರಮ್ ಮತ್ತು ಧರ್ಮ ಕೀರ್ತಿರಾಜ್ ಗೆಲ್ಲಬೇಕೆಂದು ಹೇಳಿದ್ದಾರೆ. 


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್ 11 ನಲ್ಲಿ ಈ ಬಾರಿ ಸ್ಪರ್ಗ ಮತ್ತು ನರಕ ಎಂಬ ಎರಡು ಮನೆಗಳಿದೆ. ಮೊದಲ ದಿನ ಬಿಗ್ ಬಾಸ್‌ ನಲ್ಲಿ ನಿಯಮಗಳನ್ನು ಫಾಲೋ ಮಾಡೋ ವಿಚಾರದಲ್ಲೇ ಹಲವು ವಾಗ್ವಾದಗಳು ನಡೆದವು.  

ಇದಕ್ಕೂ ಮುನ್ನ ಬರೇ ಸ್ವರ್ಗ ನಿವಾಸಿಗಳನ್ನು ಮಾತ್ರ ಬಿಗ್ ಬಾಸ್ ಮನೆಗೆ ಬಿಗ್‌ಬಾಸ್‌ ಸ್ವಾಗತಿಸಿ ನರಕ ನಿವಾಸಿಗಳನ್ನು ದೂರವಿಟ್ಟಿರುವುದಾಗಿ ಘೋಷಿಸಿದರು.  ಮುಂದಿನ ದಿನಗಳಲ್ಲಿ ನಿಮ್ಮ ವೈಯಕ್ತಿಕ ಆಟವು ಎಲ್ಲಿ ಇರುತ್ತೀರಿ ಎಂಬುದನ್ನು ಆಟ ನಿರ್ಧರಿಸುತ್ತದೆ ಎಂದರು.

Tap to resize

Latest Videos

undefined

BBK11: ಎಲ್ಲಾ ಕಡೆ ಲಾಯರ್ ಬುದ್ದಿ ತೋರಿಸ್ತಾರೆ: ಲಾಯರ್ ಜಗದೀಶ್ ಗೆ ಟಾಂಟ್ ಕೊಟ್ಟ ಧನ್‌ರಾಜ್

ಗಾರ್ಡನ್ ನಲ್ಲಿ ಕುಳಿತಿದ್ದ ತ್ರಿವಿಕ್ರಮ್ ಮತ್ತು ಧರ್ಮ ಕೀರ್ತಿರಾಜ್ ಬಳಿ ಮಾತನಾಡಿದ ಲಾಯರ್ ಜಗದೀಶ್ ನೀವಿಬ್ಬರೂ ಕಪ್ ಗೆದ್ದುಕೊಂಡು ಬರಬೇಕು ಅದೇ ಇಂಪಾರ್ಟೆಂಟ್ ಎಂದ್ರು. ನೀವು ಗೆದ್ದುಕೊಂಡು ಬಂದ್ರೆ ನಮಗೆ ಖುಷಿ ಆಗ್ತದೆ, ಹುಡುಗ್ರು ಜೊತೆ ಇದ್ದೆವು ಅಂತ. ಈ ಟೀಂ ಗೆ ನನ್ನ ಸಪೋರ್ಟ್ ಇರ್ತದೆ ಎಂದಿದ್ದಾರೆ. ನಾವು ಎಲ್ಲಾ ರೀತಿಯ ಸಪೋರ್ಟ್ ಮಾಡ್ತೇವೆ. ಹೊರಗಡೆ ಬನ್ನಿ ಒಂದು ಡಿಫರೆಂಟ್‌ ದುನಿಯಾ, ದುಡ್ಡಲ್ಲಿ ಕಾರಲ್ಲಿ ನಿಮ್ಮ ಲೈಫ್‌ ಸ್ಟೈಲ್ ಚೇಂಜ್ ಆಗುತ್ತೆ. ಇದು ಮುಗಿಸಿಕೊಂಡು ಬನ್ನಿ ಲೈಪ್ ಸ್ಟೈಲ್ ಚೇಂಜ್ ಮಾಡೋದು ನಮಗಿರಲಿ. ನಾನು ಪೊಲಿಟೀಷನ್ , ರಿಯಲ್ ಟೈಂ ಗೇಮ್ ಪ್ಲೇಯರ್ , ನಾನು ಏನು ಹೇಳಿದ್ರು ನಾನು ನಡೆದುಕೊಂಡೇ ತೀರುತ್ತೇನೆ. ಇದು ನನ್ನ ಕಮಿಟ್‌ಮೆಂಟ್‌. ಬಟ್‌ ಬಿಗ್‌ಬಾಸ್‌ ನಲ್ಲಿ ಫೇಮಸ್ ಆಗಬೇಕು ಅದು ಇಂಪಾರ್ಟೆಂಟ್‌, 11 ಸೀಸನ್‌ ಜಾಕ್ ಪಾಟ್‌ ಆಗಬೇಕು ಎಂದರು.

ಬಿಗ್‌ಬಾಸ್‌ ಮನೆಯಲ್ಲಿ ಮೊದಲ ದಿನವೇ ಗಲಾಟೆಗೆ ನಾಂದಿ ಹಾಡಿದ ಚೈತ್ರಾ ಕುಂದಾಪುರ, ಉಗ್ರಂ ಮಂಜು ಪಿತ್ತ ನೆತ್ತಿಗೆ!

ಒಟ್ಟು 17 ಮಂದಿ ಸ್ಪರ್ಧಿಗಳು ಮನೆಯಲ್ಲಿದ್ದು,  ಸ್ವರ್ಗದಲ್ಲಿ, ಭವ್ಯಾ ಗೌಡ, ಯಮುನಾ, ಧನ್ ರಾಜ್, ಗೌತಮಿ, ಧರ್ಮ, ಜಗದೀಶ್, ತ್ರಿವಿಕ್ರಮ್, ಹಂಸಾ, ಐಶ್ವರ್ಯ ಮತ್ತು ಮಂಜು ಇದ್ದರೆ. ನರಕದಲ್ಲಿ ಅನುಷಾ ರೈ, ಶಿಶಿರ್, ಮಾನಸಾ, ಗೋಲ್ಡ್ ಸುರೇಶ್, ಚೈತ್ರಾ, ಮೋಕ್ಷಿತಾ ಮತ್ತು ರಂಜಿತಾ ಇದ್ದಾರೆ. ಸ್ವರ್ಗದಲ್ಲಿರುವವರಿಗೆ ಐಶಾರಾಮಿ ಸೌಲಭ್ಯಗಳಿದ್ದು, ನರಕದಲ್ಲಿರುವವರಿಗೆ ಸಾಮಾನ್ಯ ಜೀವನ ನಡೆಸಬೇಕಿದೆ.

click me!