ಭಾಗ್ಯಲಕ್ಷ್ಮೀ ತಾಂಡವ್ ರಿಯಲ್ ಪತ್ನಿ ಸಂಗೀತಾ ಭಟ್ ಅಂದ ಹೊಗಳೋಕೆ ಪದಗಳೇ ಸಾಲ್ತಿಲ್ಲ

First Published | Sep 30, 2024, 11:24 PM IST

ಸ್ಯಾಂಡಲ್ ವುಡ್ ನಾಯಕಿ ಹಾಗೂ ಭಾಗ್ಯಲಕ್ಷ್ಮೀ ಸಿರಿಯಲ್ ಖ್ಯಾತಿಯ ತಾಂಡವ್ ಸೂರ್ಯವಂಶಿ ಆಲಿಯಾಸ್ ಸುದರ್ಶನ್ ರಂಗಪ್ರಸಾದ್ ರಿಯಲ್ ಪತ್ನಿ ಸಂಗೀತಾ ಭಟ್ ಸೀರೆಯಲ್ಲೂ ಸಖತ್ ಹಾಟ್ ಆಗಿ ಕಾಣಿಸ್ತಿದ್ದಾರೆ. 
 

ಕನ್ನಡ ಚಿತ್ರರಂಗದಲ್ಲಿ ತಮ್ಮ ಸಹಜ ಅಭಿನಯದಿಂದ ಕನ್ನಡಿಗರ ಮನ ಗೆದ್ದ ಮುದ್ದು ಮುಖದ ಚೆಲುವೆ ಸಂಗೀತಾ ಭಟ್ (Sangeetha Bhat). ಇವರು ತಮ್ಮ ವಿಭಿನ್ನ ಸಹಜ ನಟನೆಯನ್ನು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಟ್ಯಾಲೆಂಟೆಡ್ ನಟಿ ಎನಿಸಿಕೊಂಡಿದ್ದಾರೆ. 
 

ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಂಗೀತಾ ಭಟ್, ಹೆಚ್ಚಾಗಿ ತಮ್ಮ ಬೋಲ್ಡ್ ಫೋಟೋ ಶೂಟ್ (bold photoshoot) ನಿಂದಾನೆ ಇಂಟರ್ನೆಟ್ ಪೂರ್ತಿಯಾಗಿ ಧೂಳೆಬ್ಬಿಸುತ್ತಿದ್ದಾರೆ ನಟಿ, ಇತ್ತೀಚೆಗೆ ಸಂಗೀತಾ ಶೇರ್ ಮಾಡಿದಂತಹ ಸೀರೆ ಫೋಟೊ ಕೂಡ ಸಖತ್ ವೈರಲ್ ಆಗಿತ್ತು, ಸಂಗೀತಾ ಸೀರೆ ಲುಕ್ ಗೆ ನೆಟ್ಟಿಗರು ವಾರೆ ವಾ ಎಂದಿದ್ದಾರೆ. 
 

Tap to resize

ಬ್ರೌನ್ ಬಣ್ಣದ ಕಾಟನ್ ಸೀರೆಯನ್ನುಟ್ಟಿರುವ ಸಂಗೀತಾ ಭಟ್, ಅದರ ಜೊತೆ ಕಾಂಟ್ರಾಸ್ಟ್ ಆಗಿರುವ ಬಿಳಿ ಬಣ್ಣಾದ ಬ್ಲೌಸ್ ಧರಿಸಿದ್ದಾರೆ. ಸೀರೆ ಸೆರಗನ್ನು ಒಂದಿಷ್ಟು ಜಾರಿ ಬಿಟ್ಟಿದ್ದು,  ಇವರ ಈ ಲುಕ್ ಗ್ ಅಭಿಮಾನಿಗಳು ಫಿದಾ ಆಗಿದ್ದು, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದೀರಿ, ಕತ್ತಲಲ್ಲಿ ಬೆಳಕು ನೀಡುವ ದೀಪದಂತೆ ನೀವು, ದೇವತೆ ಎಂದು ಜನ ಸಿಕ್ಕಾಪಟ್ಟೆ ಹೊಗಳಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಸೌಂದರ್ಯವನ್ನು ಹೊಗಳೋಕೆ ಪದಗಳೇ ಸಾಲುತ್ತಿಲ್ಲ. ಸೌಂದರ್ಯ ದೇವತೆ ನೀವು, ನಮ್ಮದೇ ದೃಷ್ಟಿ ಆಗಬಹುದು ಎಂದಿದ್ದಾರೆ, ಅಲ್ಲದೇ ನಿಮ್ಮ ಎಲಿಗೆಂಟ್ ಲುಕ್, ಆ ಸಿಂಪ್ಲಿಸಿಟಿ, ನಿಮ್ಮ ನಗು, ಹಾಟ್ ಅವತಾರ ಎಲ್ಲವೂ ಮನಸೂರೆ ಮಾಡುತ್ತಿದೆ ಎಂದಿದ್ದಾರೆ. 
 

ಭಾಗ್ಯಲಕ್ಷ್ಮಿ ಸೀರಿಯಲ್‌ ನಲ್ಲಿ ತಾಂಡವ್‌ ಪಾತ್ರಧಾರಿಯಾಗಿರುವ ನಟ ಸುದರ್ಶನ್ ರಂಗಪ್ರಸಾದ್ (Sudarshan Rangaprasad)  ಪತ್ನಿಯಾಗಿರುವ ಸಂಗೀತಾ ಭಟ್. ಇಬ್ಬರು ಲವ್ ಮಾಡಿ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಸೋಶಿಯಲ್ ಮೀಡೀಯಾದಲ್ಲಿ  ತಮ್ಮ ಹಾಟ್ ರೊಮ್ಯಾಂಟಿಕ್ ಫೋಟೊಗನ್ನು ಶೇರ್ ಮಾಡುತ್ತಲೇ ಇರುತ್ತಾರೆ. 
 

ಕಿರುತೆರೆಯ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಸಂಗೀತಾ ಭಟ್, ಪಂಜರದ ಗಿಳಿ, ಭಾಗ್ಯವಂತರು, ಚಂದ್ರಚಕೋರಿ, ನೀಲಿ ಮತ್ತು ಚಂದ್ರಮುಖಿ ಮತ್ತು ನೀಳಿ ಸೀರಿಯಲ್ ಗಳಲ್ಲಿ ನಟಿಸಿದ್ದರು. ಡೂ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂಗೀತಾ ಭಟ್. 'ಎರಡನೇ ಸಲ' ಮತ್ತು ದಯವಿಟ್ಟು ಗಮನಿಸಿ ಸಿನಿಮಾಗಳಿಂದ ಹೆಸರು ಗಳಿಸಿದ್ದ ನಟಿ ಸಂಗೀತ ಭಟ್, ಕಿರುತೆರೆ ಸೇರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಕೆಅಷ್ಟೇ ಅಲ್ಲದೇ ಆದ್ಯಾ, ರೂಪಾಂತರ, ಕ್ಲಾಂತಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ನಟಿ ಮತ್ತಷ್ಟೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿ ಅನ್ನೋದು ಜನರ ಹಾರೈಕೆ. 
 

Latest Videos

click me!